ಪಂಜ: ಕ್ಯಾಲೆಂಡರ್ ಬಿಡುಗಡೆ ಕಾರ‍್ಯಕ್ರಮ

Advt_Headding_Middle
Advt_Headding_Middle

 

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಘದ ಸದಸ್ಯರಿಗೆ ವಿತರಣೆ ಗೊಳ್ಳಲಿರುವ 2019 ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ ಕಾರ‍್ಯಕ್ರಮ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ನ.14.ರಂದು ಜರುಗಿತು.

ಕಾರ್ಯಕ್ರಮದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಲೋಕೇಶ್ ಬರೆಮೇಲು, ನಿರ್ದೇಶಕರಾದ ಶ್ರೀಕೃಷ್ಣ ಭಟ್ ಪಟೋಳಿ, ಭಾಸ್ಕರ ಗೌಡ ಚಿದ್ಗಲ್ಲು, ವಾಸುದೇವ ಪಳಂಗಾಯ, ವಾಚಣ್ಣ ಕೆರೆಮೂಲೆ, ರಘುನಾಥ ರೈ ಕೆರೆಕ್ಕೋಡಿ, ಗಣೇಶ್ ಪೈ, ರೇಖಾ ರೈ, ಮೋಹಿನಿ ಬೊಳ್ಮಲೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಹಕಾರಿಗಳ ನಡಿಗೆ ಸದಸ್ಯರ ಮನೆ ಕಡೆಗೆ, ಸಹಕಾರಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.