ಎಲಿಮಲೆ ಜ್ಞಾನದೀಪದಲ್ಲಿ ಪ್ರಿ ಕೆ.ಜಿ ತರಗತಿಗಳು ಆರಂಭ

Advt_Headding_Middle
Advt_Headding_Middle

ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯು ಪೂರ್ವ ಪ್ರಾಥಮಿಕ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಒಳಗೊಂಡಿದ್ದು, ಇದೀಗ ಪ್ರಿ ಕೆ.ಜಿ. ತರಗತಿಗಳು ಕೂಡಾ ಆರಂಭಗೊಂಡಿವೆ.

ನ. ೧೪ರ ಮಕ್ಕಳ ದಿನಾಚರಣೆ ದಿನದಂದು ಪ್ರಿ ಕೆ.ಜಿ. ವಿಭಾಗವು ಉದ್ಘಾಟನೆಗೊಂಡಿತು. ಪುತ್ತೂರು ವಿವೇಕಾನಂದ ವಿದ್ಯಾಲಯದ ಪೂ.ಪ್ರಾ. ವಿಭಾಗದ ಮುಖ್ಯ ಮಾತಾಜಿ ಮಮತಾರವರು ಉದ್ಘಾಟಿಸಿ, ಸಣ್ಣ ಮಕ್ಕಳ ಮಾನಸಿಕತೆಯ ಬಗ್ಗೆ ಅವರ ವಯಸ್ಸಿನ ಚಲನವಲನಗಳ ಹಾಗೂ ಪೋಷಕರು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಎ.ವಿ.ತೀರ್ಥರಾಮ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ರಾಧಾಕೃಷ್ಣ ಮಾವಿನಕಟ್ಟೆ, ಮಹಾವೀರ್ ಜೈನ್, ಜಯಂತ ಅಂಬೆಕಲ್ಲು, ಗಂಗಾಧರ ಕೇಪಳಕಜೆ, ಆಡಳಿತ ನಿರ್ದೇಶಕ ಅನಿಲ್ ಅಂಬೆಕಲ್ಲು, ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಸ್ವಾಗತಿಸಿ, ಸಹಶಿಕ್ಷಕಿ ರೇಖಾ ಕಿರಣ್ ಗುಡ್ಡೆಮನೆ ವಂದಿಸಿದರು. ಶಿಕ್ಷಕಿ ಚೈತ್ರಾ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ಪವಿತ್ರಾ ಮೋಹನ್‌ಚಂದ್ರ ನಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಹಲವಾರು ವಿದ್ಯಾರ್ಥಿಗಳು ದಾಖಲುಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.