Breaking News

ಏನೆಕಲ್ಲು ದುರಂತ : ಇನ್ನೂ ದೊರೆಯದ ಮೃತದೇಹಗಳು

Advt_Headding_Middle
Advt_Headding_Middle

ಲತೀಶ್

ಲಿಶಿತ್

ಏನೆಕಲ್ಲಿನ ಕುಮಾರಧಾರಾ ಹೊಳೆಯಲ್ಲಿ ನಿನ್ನೆ ಸಂಜೆ ಮೀನು ಹಿಡಿಯಲು ಹೋಗಿ ನೀರು ಪಾಲಾದ ಯುವಕರಿಬ್ಬರ ಮೃತದೇಹ ಇನ್ನೂ ದೊರೆತಿಲ್ಲ. ಪೊಲೀಸರು ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ಸಹಕಾರದೊಂದಿಗೆ ಇಂದು ಮುಂಜಾನೆಯಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದರೂ ಫಲ ನೀಡಿಲ್ಲ. ಸುಬ್ರಹ್ಮಣ್ಯದ ಎಸ್.ಐ. ಮಾಧವ ಕೂಡ್ಲು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ನೀರು ಪಾಲಾದ ಯುವಕರು ದೇವಚಳ್ಳದವರಾಗಿದ್ದು, ಒಟ್ಟು ೫ ಮಂದಿ ನದಿಗೆ ತೆರಳಿದ್ದರು. ದೇವಚಳ್ಳದ ಮಂಜೋಳ್‌ಕಜೆಯ ಯುವರಾಜ ಎಂಬವರ ಸಂಬಂಧಿಕರ ಮನೆಯಾಗಿರುವ ಏನೆಕಲ್ಲಿನ ಲಿಂಗಪ್ಪ ಗೌಡರ ಮನೆಗೆ ನಿನ್ನೆ ಪೂರ್ವಾಹ್ನ ಹೋಗಿದ್ದರು. ಅವರ ಜೊತೆಗೆ ಮಾವಿನಗೋಡ್ಲು ಎಲ್ಯಣ್ಣ ಗೌಡರ ಮಗ ಲಿಶಿತ್ ಮತ್ತು ಕಾಡು ಹೊನ್ನಪ್ಪ ಗೌಡರ ಮಗ ಲತೇಶ್ ಅವರು ಒಟ್ಟಿಗಿದ್ದರು.

ಅಲ್ಲಿ ಮಧ್ಯಾಹ್ನದ ವೇಳೆಗೆ ಯುವರಾಜರ ಮಾವನ ಮಗ ಲವಕುಮಾರ್ ಮತ್ತು ರಮೇಶ್  ಎಂಬವರನ್ನು ಸೇರಿಸಕೊಂಡು ೫ ಮಂದಿಯೂ ಮೀನು ಹಿಡಿಯುವುದಕ್ಕಾಗಿ ತೋಟೆ ಹಿಡಿದುಕೊಂಡು ಕುಮಾರಧಾರ ನದಿಗೆ ಹೋಗಿದ್ದರು. ಅಲ್ಲಿ ಈಜಲು ಬಾರದ ಲತೇಶ್ ಮತ್ತು ಲಿಶಿತ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಇಂದು ಸಂಜೆ 5-3೦ರವರೆಗೆ ಅವರ ಮೃತದೇಹ ದೊರೆತಿಲ್ಲ. ಹುಡುಕಾಟ ಮುಂದುವರಿದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.