Breaking News

ಆಲೆಟ್ಟಿ: ಗ್ರಾ.ಪಂ.ವಿಶೇಷ ಗ್ರಾಮ ಸಭೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮ ಪಂ.ನ 2019_20 ನೇ ಸಾಲಿನ ಅಭಿವೃದ್ದಿ ಯೋಜನೆಗಳನ್ನು ಸಿದ್ಧ ಪಡಿಸುವಸಲುವಾಗಿ ಹಾಗೂ ಎಂ.ಜಿ.ಆರ್.ಜಿ.ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಗುಚ್ಚವನ್ನು ತಯಾರಿಸುವ ಸಲುವಾಗಿ ವಿಶೇಷ ಗ್ರಾಮ ಸಭೆಯು ನ.15 ರಂದು ಪಂ.ಸಭಾಭವನದಲ್ಲಿ ಪಂ.ಅಧ್ಯಕ್ಷ ಹರೀಶ್ ರಂಗತ್ತಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೊಡೆಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಿಶು ಅಭಿವೃದ್ಧಿ ಅಧಿಕಾರಿ ಸರಸ್ವತಿ ಯವರು ಸಭೆಯ ಕಲಾಪ ನಡೆಸಿದರು.ವೇದಿಕೆಯಲ್ಲಿ ಪಂ.ಉಪಾಧ್ಯಕ್ಷೆ ಸುಂದರಿ ಮೊರಂಗಲ್ಲು, ಪಂ.ಪಿ.ಡಿ.ಒ.ಕೀರ್ತಿಪ್ರಸಾದ್ ,ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರವೀಶ್ರೀ ಉಪಸ್ಥಿತರಿದ್ದರು.
ಆಲೆಟ್ಟಿಯಿಂದ ಕೂಟೇಲು ಮಾರ್ಗವಾಗಿ ಅರಂಬೂರು ಸಂಪರ್ಕಿಸುವ ರಸ್ತೆ ಬಹಳ ವರ್ಷಗಳಿಂದ ದುರಸ್ತಿ ಮಾಡದೆ ಹದಗೆಟ್ಟಿದೆ. ಈ ಭಾಗದಲ್ಲಿ ಪ.ಜಾತಿ,ಪ.ಪಂ. ಕಾಲನಿ ಮತ್ತು ಸುಮಾರು ಮನೆಗಳಿವೆ ಶೀಘ್ರವಾಗಿ ಕಾಮಗಾರಿ ಕೆಲಸ ಮಾಡುವಂತೆ ಡಾ.ಸುರೇಶ ನೂಜಿನಮೂಲೆ ಒತ್ತಾಯಿಸಿದರು.


ಕೋಲ್ಚಾರು ಪೈಂಬೆಚ್ಚಾಲ್ ರಸ್ತೆ, ಕಾರ್ತಡ್ಕ ಕುಡೆಂಬಿ ,ಮಾಣಿಮರ್ದು ,ಕುಂಭಕ್ಕೋಡು ಪ.ಪಂ.ರಸ್ತೆ ಗೆ ಡಾಮರೀಕರಣವಾಗಬೇಕು ಎಂದು ಸುದರ್ಶನ ಪಾತಿಕಲ್ಲು ಸೂಚಿಸಿದರು.ಬಡ್ಡಡ್ಕ ಅಂಗನವಾಡಿ ಕೇಂದ್ರ ದುರಸ್ತಿ ಮಾಡಬೇಕು. ಶೌಚಾಲಯದ ಅವಶ್ಯಕತೆ ಇದೆ ಎಂದು ಉಪೇಂದ್ರ ನಾಯಕ್ ತಿಳಿಸಿದರು.ಪರಿವಾರಕಾನ ಇಡ್ಯಡ್ಕ ರಸ್ತೆ ಡಾಮರೀಕರಣ ಮಾಡಬೇಕು. ಪರಿವಾರಕಾನ ಅಂಗನವಾಡಿ ಕೇಂದ್ರದ ಸುತ್ತ ಆವರಣ ಗೋಡೆ ನಿರ್ಮಿಸಬೇಕು ಎಂದು ರಾಜ್ ಕುಮಾರ್ ತಿಳಿಸಿದರು.ನಾಗಪಟ್ಟಣ ಶಾಲೆಗೆ ಶೌಚಾಲಯದ ದುರಸ್ತಿ ಮಾಡಬೇಕು ಎಂದು ವಿಶಾಲಾಕ್ಷಿ ಕುದ್ಕುಳಿ ತಿಳಿಸಿದರು.ಭುತಕಲ್ಲು ಶಾಲೆ ಮಕ್ಕಳಿಲ್ಲದ ಕಾರಣದಿಂದ ಮುಚ್ಚಲಾಗಿದೆ.ಶಾಲೆಗೆ ಸಂಬಂಧಪಟ್ಟ ಜಾಗವನ್ನು ಗ್ರಾಮದವರಿಗೆ ಅನುಕೂಲವಾಗುವ ಯೋಜನೆಯನ್ನು ಕೈಗೊಳ್ಳಲು ಪಂ.ನಿಂದ ಸೂಚಿಸಬೇಕು ಎಂದು ಕೃಪಾಶಂಕರರವರು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಪಿ.ಡಿ.ಒ.ರವರು ಉದ್ಯೋಗ ಖಾತರಿ ಯೋಜನೆಯ ಮಾಹಿತಿ ನೀಡಿದರು.ಪಂ.ಸದಸ್ಯರಾದ ವಸಂತ ಬಾಳೆಹಿತ್ಲು,ಪುಂಡರೀಕ ಕಾಪುಮಲೆ,ವಸಂತಿ ಕುಂಚಡ್ಕ, ಶ್ರೀವಾಣಿ ಕೋಲ್ಚಾರು,ಗೀತಾ ಕೋಲ್ಚಾರು, ಕುಸುಮಾವತಿ ಕುಡೆಕಲ್ಲು,ವಿಶಾಲಾಕ್ಷಿ ಕುದ್ಕುಳಿ,ಅರುಣಾ ಗೂಡಿಂಜ,ಶಶಿಕಲಾ ಆಡಿಂಜ,ಕರಕರನ ಪುಷ್ಪಾವತಿ,ಜಯಂತಿ ಕೂಟೇಲು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನವೆಂಬರ್ ತಿಂಗಳಲ್ಲಿ ವಿಶ್ವ ಶೌಚಾಲಯ ದಿನಾಚರಣೆಯನ್ನು ನಡೆಸುವ ಸಲುವಾಗಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ಕಾರ್ಯಾಗಾರ ವನ್ನು ಕಾರ್ಯದರ್ಶಿ ಸೃಜನ್ ನಡೆಸಿದರು.ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಅಂಗನವಾಡಿ ಸಹಾಯಕಿಯರು,ಸ್ರ್ತೀ ಶಕ್ತಿ ಸಂಘದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದರು. ಪಂ.ಸಿಬ್ಬಂದಿ ಸೀತಾರಾಮ ಮೊರಂಗಲ್ಲು ಸ್ವಾಗತಿಸಿ ,ವಂದಿಸಿದರು. ಸಿಬ್ಬಂದಿಗ ವರ್ಗದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.