ಉಬರಡ್ಕ ಮಿತ್ತೂರು ಗ್ರಾ. ಪಂ ವಿಶೇಷ ಗ್ರಾಮ ಸಭೆ

Advt_Headding_Middle
Advt_Headding_Middle

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನ ಸಬ್ ಕೀ ಯೋಜನಾ ಸಬ್ ಕಾ ವಿಕಾಸ್ ಯಡಿಯಲ್ಲಿ ಜನ ಯೋಜನೆ ಅಭಿಯಾನ ಯೋಜನೆ ೨೦೧೯- ೨೦ ರ ನಮ್ಮ ಗ್ರಾಮ ನಮ್ಮ ಯೋಜನೆ ಸಿದ್ದಪಡಿಸುವಿಕೆ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019-20  ಸಾಲಿನ ಕಾಮಗಾರಿಗಳ ಗುಚ್ಚ ತಯಾರಿಸುವ ಬಗ್ಗೆ ವಿಶೇಷ ಗ್ರಾಮ ಸಭೆಯನ್ನು ನ. ೧೫ ರಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೈಲಜಾ ಶಂಕರ್ ಅಧ್ಯಕ್ಷತೆಯಲ್ಲಿ ಕರೆಯಲಾಯಿತು .

ನೋಡೆಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಕೃಷಿ ಅಧಿಕಾರಿ ಸುಹನಾ ಉಪಸ್ಥಿತಿ ಯಿದ್ದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ . ಹಾಗೂ ಅರೋಗ್ಯ , ಅರಣ್ಯಾ ಅಧಿಕಾರಿಗಳು ಇಲಾಖೆಗಳ ಸೌಲಭ್ಯ ದ ಬಗ್ಗೆ ಮಾಹಿತಿ ನೀಡಿದರು ಪಶು ಸಂಗೋಪನೆ ಇಲಾಖೆ ಸೌಲಭ್ಯ, ಬಾವಿ ರಚನೆ, ಹಂದಿ, ಕುರಿ ಕೋಳಿ ಸಾಕಾಣಿಕೆ ಉದ್ಯೋಗ ಖಾತ್ರಿ ಯೋಜನ ಯಲ್ಲಿ ಮನೆ ನಿರ್ಮಾಣ ಕೃಷಿ ಹೊಂಡ , ಇಂಗು ಗುಂಡಿ ನಿರ್ಮಿಸಿ ಸರಕಾರದ ಸೌಲಭ್ಯ ಪಡೆಯಲು ಇಚ್ಚಿಸುವವರು ಇನ್ನು ಒಂದುವಾರ ಅವಕಾಶ ವಿದ್ದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು.ಇಗಾಗಲೆ ೧೯೦ ವಿವಿದ ಕಾಮಗಾರಿಗಳನ್ನು ಪಟ್ಡಿ ಮಾಡಿಗೊಂಡಿದ್ದು ಇನ್ನುಕೆಲವು ಅಭಿವೃದ್ಧಿ ಪಡಿಸಬೇಕಾದ ಕಾಮಗಾರಿಗಳನ್ನು ಕ್ರಿಯಾ ಯೊಜನೆಯಲ್ಲಿ ಸೇರಿಸಿ ಸಲ್ಲಿಸಲಾಗುವುದು ಎಂದು ಹರೀಶ್ ಉಬರಡ್ಕ ತಿಳಿಸಿದರು. ಇದರಲ್ಲಿ ಇನ್ನೂ ಶೌಚಾಲಯ ಇಲ್ಲದ ಮನೆ, ವಿದ್ಯುತ್ ಇಲ್ಲದ ಮನೆಗಳಿವೆ ಇವುಗಳನ್ನು ಸೇರಿಸಿ , ಅಮೈ ಪಾಲಡ್ಕ ವಯನಾಟ್ ಕುಲವನ್ ಅಮೈ ಮಡಪ್ಪಾಡಿ ಪಾಲಡ್ಕ ಇದರ ತಡೆ ಗೋಡೆ ನಿರ್ಮಿಸುವ ಬಗ್ಗೆ ಸುರೇಶ್ ಅಮೈ ಸಭೆಯ ಗಮನಕ್ಕೆ ತಂದು ಯೋಜನೆ ಯಲ್ಲಿ ಸೇರಿಸಿ ಎಂದು ಮನವಿ ಮಾಡಿದರು. ಸೂಂತೋಡು ಪಾಲಡ್ಕ ರಸ್ತೆ ಸರ್ವ ಋತು ರಸ್ತೆ ಯಾಗಿ ಮಾಡುವ ಸಲುವಾಗಿ ಯೊಜನೆ ಸಿದ್ದಪಡಿಸಲಾಯಿತು.


ವೇದಿಕೆಯಲ್ಲಿ ಸದಸ್ಯರು ಗಳಾದ ಹರೀಶ್ ರೈ, ಹರಿಪ್ರಸಾದ್, ಶಶಿಧರ ನಾಯರ್ ಕೇಶವ ಕಕ್ಕೆಬೆಟ್ಟು‌ ಉಪಸ್ಥಿತಿಯಿದ್ದರು ಸಿಬ್ಬಂದಿ ವರ್ಗ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.