ಪಂಜ : ಜೇಸಿ ಸಪ್ತಾಹ -ಪ್ರೇರಣಾ ಶಿಬಿರ

Advt_Headding_Middle
Advt_Headding_Middle

ಪಂಜ ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹದ ಅಂಗವಾಗಿ ಪ್ರೇರಣಾ ಶಿಬಿರ ‘ವೃದ್ಧಿ’ಪಂಜ ಗ್ರಾ.ಪಂ. ಸಭಾಂಗಣದಲ್ಲಿ ನ.೧೪.ರಂದು ಜರುಗಿತು. ಕಾರ‍್ಯಕ್ರಮದಲ್ಲಿ ಬೆಳ್ಳಾರೆ ಉದ್ಯಮಿ ಮಿಥುನ್ ಶೆಣೈ ಉದ್ಘಾಟಿಸಿ ಶುಭ ಹಾರೈಸಿದರು.


ಘಟಕದ ಅಧ್ಯಕ್ಷ ಗುರುಪ್ರಸಾದ್ ತೋಟ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಪುತ್ತೂರು ನಿಧಿ ಫುಡ್ ಪ್ರೊಡಕ್ಸ್‌ನ ರಾಧಾಕೃಷ್ಣ ಇಟ್ಟಿಗುಂಡಿ ,ತರಬೇತಿದಾರರಾಗಿ ವಲಯ ತರಬೇತುದಾರ ಉಮೇಶ್ ನಿರ್ಮಲ್ , ಕಾರ್ಯಕ್ರಮ ನಿರ್ದೇಶಕ ದೇವಿಪ್ರಸಾದ್ ಜಾಕೆ,ಸಪ್ತಾಹ ನಿರ್ದೇಶಕ ವಾಸುದೇವ ಮೇಲ್ಪಾಡಿ, ಕಾರ್ಯದರ್ಶಿ ಜೀವನ್ ಮಲ್ಕಾಜೆ,ಟ್ರೈನಿಂಗ್ ಬ್ರಿಗೇಡರ್ ತೀರ್ಥಾನಂದ ಕೊಡೆಂಕಿರಿ, ವಲಯಾಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯ ಸವಿತಾರ ಮುಡೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಉಜ್ವಲ್ ಚಿದ್ಗಲ್ಲು ವೇದಿಕೆಗೆ ಆಹ್ವಾನಿಸಿದರು. ರಮೇಶ್ ಪುತ್ಯ ಜೇಸಿವಾಣಿ ನುಡಿದರು. ಗುರುಪ್ರಸಾದ್ ತೋಟ ಸ್ವಾಗತಿಸಿದರು. ಚಂದ್ರಶೇಖರ ಇಟ್ಯಡ್ಕ, ಪುರುಷೋತ್ತಮ ದಂಬೆಕೋಡಿ ಅತಿಥಿಗಳನ್ನು ಸಭೆಗೆ ಪರಿಚಾಯಿಸಿದರು. ಜೀವನ್ ಮಲ್ಕಾಜೆ ವಂದಿಸಿದರು. ಪಂಜದ ಹೆಚ್ಚಿನ ವರ್ತಕರು ಸೇರಿದಂತೆ ಸುಮಾರು ೧೨೫ ಜನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.