Breaking News

ಸುಬ್ರಹ್ಮಣ್ಯದಲ್ಲಿ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಖೋಖೋ: ಆಳ್ವಾಸ್ ಚಾಂಪಿಯನ್

Advt_Headding_Middle
Advt_Headding_Middle

ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ನ.೧೪ರಂದು ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜ್ ತಂಡವು ಚಾಂಪಿಯನ್ ಪ್ರಶಸ್ತಿ ಪಡೆಯಿತು. ವಿಜೇತರಿಗೆ ಬಹುಮಾನವನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ, ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್, ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್ ವಿತರಿಸಿದರು.
ಪೈನಲ್:
ಬಾಲಕರ ವಿಭಾಗದ ಪೈನಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಮಂಗಳೂರು ಕಪಿತಾನಿಯೋ ತಂಡವನ್ನು ೧೩-೩ ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ತಂಡವು ಪುತ್ತೂರು ತಾಲೂಕಿನ ರಾಮಕುಂಜ ಕಾಲೇಜು ತಂಡವನ್ನು ೧೦-೧ ಅಂಕಗಳಿಂದ ಸೋಲಿಸಿ ಪ್ರಶಸ್ತಿ ಪಡೆಯಿತು.
ಸೆಮಿ ಪೈನಲ್:
ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ೮ ತಂಡಗಳು ಮತ್ತು ಬಾಲಕಿಯರ ವಿಭಾಗದಲ್ಲಿ ೮ ತಂಡಗಳು ಹಾಗೂ ಬಾಲಕರ ವಿಭಾಗದಲ್ಲಿ ೬ ತಂಡಗಳು ಭಾಗವಹಿಸಿದ್ದವು.ಬಾಲಕರ ವಿಭಾಗದ ಪ್ರಥಮ ಸೆಮಿ ಪೈನಲ್‌ನಲ್ಲಿ ಆಳ್ವಾಸ್ ತಂಡವು ಪುತ್ತೂರು ತಾಲೂಕು ತಂಡವನ್ನು ೧೦-೨ ಅಂತರದಿಂದ ಗೆದ್ದು ಪೈನಲ್ ಪ್ರವೇಶಿಸಿತು.ದ್ವಿತೀಯ ಸೆಮಿಪೈನಲ್‌ನಲ್ಲಿ ಮಂಗಳೂರು ನಗರದ ಕಪಿತಾನಿಯೋ ತಂಡವು ಸುಳ್ಯ ತಾಲೂಕು ತಂಡವನ್ನು ೧೫-೩ಅಂಕಗಳಿಂದ ಗೆದ್ದು ಪೈನಲ್ ಪ್ರವೇಶಿಸಿತು.ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ತಂಡವು ಮಂಗಳೂರು ನಗರ ತಂಡವನ್ನು ೧೦-೫ ಅಂತರದಿಂದ ಜಯಿಸಿದರೆ, ಎರಡನೇ ಸೆಮಿಯಲ್ಲಿ ಪುತ್ತೂರು ತಾಲೂಕಿನ ರಾಮಕುಂಜ ಕಾಲೇಜು ತಂಡವು ಸುಳ್ಯ ತಂಡವನ್ನು ಜಿದ್ದಾ ಜಿದ್ದಿನ ಹೋರಾಟದಿಂದ ಜಯಿಸಿತು.ಪ್ರಥಮಾರ್ಧದಲ್ಲಿ ಸುಳ್ಯ- ೩, ಪುತ್ತೂರು-೫ ಅಂಕ ಪಡೆದರೆ, ದ್ವಿತಿಯಾರ್ಧದಲ್ಲಿಸುಳ್ಯ-೭, ಪುತ್ತೂರು-೩ ಅಂಕ ಪಡೆದು ಅವಳಿ ತಂಡಗಳು ಸಮ ಅಂಕಗಳನ್ನು ಪಡೆದವು ಬಳಿಕ ಪ್ರತ್ಯೇಕ ಇನ್ನಿಂಗ್ಸ್‌ನಲ್ಲಿ ಪುತ್ತೂರು ತಂಡವು ಸುಳ್ಯವನ್ನು ೬-೩ಅಂಕಗಳಿಂದ ಜಯಿಸಿ ಪೈನಲ್ ಪ್ರವೇಶಿಸಿತು.
ವೈಯಕ್ತಿಕ:
ಆಳ್ವಾಸ್ ತಂಡದ ಲಕ್ಷ್ಮೀ ಬಾಲಕಿಯರ ವಿಭಾಗದಲ್ಲಿ ಉತ್ತಮ ಸವ್ಯಸಾಚಿ ವೈಯಕ್ತಿಕ ಬಹುಮಾನ ಪಡೆದರು.ಉಳಿದಂತೆ ಆಳ್ವಾಸ್‌ನ ಮಾಲಾಶ್ರೀ(ಉತ್ತಮ ಹಿಡಿತಗಾರ್ತಿ), ಚೇತನ ರಾಮಕುಂಜ(ಉತ್ತಮ ಓಟಗಾರ್ತಿ) ಬಹುಮಾನಪಡೆದರು.ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ದೀರಜ್(ಸವ್ಯಸಾಚಿ), ಆಳ್ವಾಸ್‌ನ ಮರಿಯಪ್ಪ(ಉತ್ತಮ ಓಟಗಾರ), ಕಪಿತಾನಿಯೋದ ಯಶ್ವಿತ್(ಉತ್ತಮ ಹಿಡಿತಗಾರ) ಪ್ರಶಸ್ತಿ ಪಡೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.