ದೇವಿಪ್ರಸಾದ್ ಕಾನತ್ತೂರು ಅವರಿಗೆ ಗೌರವ ಡಾಕ್ಟರೇಟ್

Advt_Headding_Middle
Advt_Headding_Middle

ಪಶು ಸಂಗೋಪನಾ ಇಲಾಖೆಯಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿರುವ ದೇವಿಪ್ರಸಾದ್ ಕಾನತ್ತೂರು ಅವರಿಗೆ ಅವರ ಸುದೀರ್ಘ ಸೇವೆ ಮತ್ತು ಕರ್ತವ್ಯಪರತೆಯನ್ನು ಪರಿಗಣಿಸಿ ಚೆನ್ನೈನ ನ್ಯಾಷನಲ್ ವರ್ಚ್ಯುವಲ್ ಯುನಿವರ್ಸಿಟಿ ಫಾರ್ ಪೀಸ್ & ಎಜ್ಯುಕೇಶನ್ ಗೌರವ ಡಾಕ್ಟರೇಟ್ ನೀಡಿದೆ.


ನ. 17 ರಂದು ಚೆನ್ನೈನ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಡಾ. ದೇವಿಪ್ರಸಾದ್ ಕಾನತ್ತೂರುರವರಿಗೆ ಇತ್ತೀಚೆಗಷ್ಟೇ ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ಹಾಗೂ ಸೌರಭ ರತ್ನ ರಾಜ್ಯ ಪ್ರಶಸ್ತಿ ಕೂಡಾ ಲಭಿಸಿದೆ. ನ. ೧೧ರಂದು ಉಡುಪಿ ಮಠದ ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪಲಿಮಾರು ಶ್ರೀಗಳು ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ನ. ೧೫ರಂದು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೌರಭ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು.

ಶ್ರೀ ಕಾನತ್ತೂರು ನಾಲ್ವರ್ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದ. ಕೆ.ಪಿ. ಮಾಧವನ್ ನಾಯರ್‌ರವರ ಪುತ್ರರಾಗಿರುವ ದೇವಿಪ್ರಸಾದ್ ಕಾನತ್ತೂರು ಕಳೆದ ೩೨ ವರ್ಷಗಳಿಂದ ಪಂಜ ಹಾಗೂ ಪರಿಸರದಲ್ಲಿ ಪಶು ವೈದ್ಯರಾಗಿ ಪ್ರಸಿದ್ಧರಾಗಿದ್ದಾರೆ.

ಹುಚ್ಚುನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿರುವ ಇವರು ಪಂಜ ಪರಿಸರದ ವಿವಿಧ ಸಂಘ ಸಂಸ್ಥೆಗಳ ಜವಾಬ್ದಾರಿ ವಹಿಸಿಕೊಂಡು ಹಲವು ಜನಪರ ಕಾರ್ಯಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ದೇವಿಪ್ರಸಾದ್‌ರವರ ಪತ್ನಿ ಶ್ರೀಮತಿ ಪುಷ್ಪಾ ಪ್ರಸಾದ್ ಗೃಹಿಣಿಯಾಗಿದ್ದು, ಮಹಿಳಾ ಮಂಡಲದಲ್ಲಿ ಸಕ್ರಿಯರಾಗಿದ್ದಾರೆ.

ಪುತ್ರ ಪುನೀತ್ ಕಾನತ್ತೂರು ಮಂಗಳೂರಿನಲ್ಲಿ ಕಂಪೆನಿ ಉದ್ಯೋಗಿಯಾಗಿದ್ದು, ಪುತ್ರಿ ಪೂಜಾ ಕಾನತ್ತೂರು ಇತ್ತೀಚೆಗಷ್ಟೇ ವಿವಾಹವಾಗಿ ಕಾಸರಗೋಡಿನಲ್ಲಿ ನೆಲೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.