Breaking News

ಸಹಕಾರಿ ನಾಯಕರಿದ್ದಾರೆ. ನಾಯಕತ್ವ ಬೇಕು: ಕೋಟೆ

Advt_Headding_Middle
Advt_Headding_Middle

ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಸಹಕಾರಿ ನಾಯಕರಿದ್ದಾರೆ. ಆದರೆ ಹಿಂದೆ ಮೊಳಹಳ್ಳಿ ಶಿವರಾಯರಂತೆ ಸಹಕಾರಿ ನಾಯಕತ್ವ ಇಲ್ಲ. ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿ ಎಲ್ಲರೂ ಏಕಮನಸ್ಸಿನಿಂದ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಗಾಗಿ ಚಿಂತಿಸುವಂತಾಗಬೇಕು. ಆ ರೀತಿಯ ನಾಯಕತ್ವ ಬರಬೇಕು ಎಂದು ಸಹಕಾರಿ ಚಿಂತಕ ರಾಧಾಕೃಷ್ಣ ಕೋಟೆ ಹೇಳಿದರು.

ಸುಳ್ಯದಲ್ಲಿ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ವಿಚಾರಮಂಡನೆ ಮಾಡಿ ಅವರು ಮಾತನಾಡುತ್ತಿದ್ದರು.
ಸಪ್ತಾಹವನ್ನು ಉದ್ಘಾಟಿಸಿದ ಶಾಸಕ ಅಂಗಾರರವರು ಸಹಕಾರಿ ತತ್ವ ಅಳವಡಿಸಿಕೊಂಡರೆ ಮಾತ್ರ ಗಟ್ಟಿ ಬೆಳವಣಿಗೆ ಸಾಧ್ಯ . ಸಹಕಾರಿ ಕ್ಷೇತ್ರ ದಲ್ಲಿ ಸರಕಾರದ ಹಸ್ತಕ್ಷೇಪ ಮಾಡಬಾರದು ಎಂದರು.


ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಹಕಾರಿ ಧ್ವಜಾರೋಹಣಗೈದರು.


ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ವಹಿಸಿದ್ದರು.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ದೇವರಾಜ್, ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ದಿವಾಕರ ರೈ, ಕ್ಯಾಂಪ್ಕೋ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ, ಎ.ಪಿ.ಎಂ.ಸಿ. ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಲ್ಯಾಂಪ್ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಆರ್.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ರೈ ಉಬರಡ್ಕ, ವಿಷ್ಣು ಭಟ್ ಎಲಿಮಲೆ, ಪ್ರಭಾಕರ ನಾಯಕ್, ಜತ್ತಪ್ಪ ರೈ, ಶಿವರಾಮ ಕಾಪುಮಲೆ, ಹೇಮಚಂದ್ರ ಇಟ್ಯಡ್ಕ, ಶುಭದ ರೈ, ಭಾಗೀರಥಿ ಮುರುಳ್ಯ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.