Breaking News

ಹಿಡಿಸೂಡಿ ವ್ಯಾಪಾರಿಗೆ ಹಿಡಿಸಿದ ಗ್ರಾಹಕರು

Advt_Headding_Middle
Advt_Headding_Middle

ಸುಳ್ಯ ನಗರದ ಮುಖ್ಯ ರಸ್ತೆ ಬದಿಯಲ್ಲಿ ಪೊರಕೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಿಂದ ಬೈಕಿನಲ್ಲಿ ಬಂದ ಇಬ್ಬರು ಪೊರಕೆ ಖರೀದಿಸಿ, ಆತನಿಗೆ ನಕಲಿ ನೋಟು ನೀಡಿ ವಂಚಿಸಿ ಪರಾರಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ಸುಳ್ಯ ರಥಬೀದಿಯಲ್ಲಿ ಸಂಭವಿಸಿದೆ.


ಆಂಧ್ರಪ್ರದೇಶ ಮೂಲದ ವ್ಯಾಪಾರಿ ಚೆನ್ನಕೇಶವ ದೇವಾಲಯದ ಸಮೀಪ ಕಟ್ಟೆ ಬಳಿ ಪೊರಕೆ ಮಾರಾಟದಲ್ಲಿ ನಿರತರಾಗಿದ್ದರು. ಆ ವೇಳೆ ಬೈಕಿನಲ್ಲಿ ಬಂದ ಇಬ್ಬರು 150 ರೂ. ಬೆಲೆಯ ಪೊರಕೆ ಖರೀದಿಸಿ 2೦೦೦ರೂ. ನೋಟು ನೀಡಿ 1850 ರೂ. ವಾಪಾಸು ಪಡೆದುಕೊಂಡರು. ಬಿಡಿಸಿ ನೋಡಿದಾಗ 2೦೦೦ ರೂ. ನೋಟು ನಕಲಿನ ಎನ್ನುವ ಸಂಶಯ ಬಂತು. ತಕ್ಷಣ ಖರೀದಿದಾರರ ಬಳಿ ಹೇಳಿದಾಗ ಅವರು ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಬೈಕ್‌ನಲ್ಲಿ ಓರ್ವ ಗಂಡಸು ಮತು ಮಹಿಳೆ ಇದ್ದರು ಎಂದು ವ್ಯಾಪಾರಿ ಮಾಹಿತಿ ನೀಡಿದ್ದಾರೆ. ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಚಿತ್ರೀಕರಣ ತಂಡವೊಂದಕ್ಕೆ ಮಾಹಿತಿ ಲಭಿಸಿ ಅವರು ಪೋಲಿಸರಿಗೆ ಮಾಹಿತಿ ನೀಡಿದ್ದರು. ನೋಟು ಪರಿಶೀಲಿಸಿದ ಸಂದರ್ಭ ಅದು ನಕಲಿ ಎಂದು ಗೊತ್ತಾಗಿದೆ.

ಸಿಸಿ ಕೆಮರಾದಲ್ಲಿ ಸೆರೆ?
ಬಡಪಾಯಿ ವ್ಯಾಪಾರಿಯನ್ನು ವಂಚಿಸಿ ಪರಾರಿಯಾದ ಇಬ್ಬರ ಕೃತ್ಯ ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿ ಕೆಮರಾದಲ್ಲಿ ಸೆರೆಯಾಗಿರುವ ಮಾಹಿತಿ ಇದೆ. ಹೀಗಾಗಿ ವಂಚಕರು ಸಿಕ್ಕಿಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.