Breaking News

ನ.24-25 : ಸುಳ್ಯದಲ್ಲಿ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ -2018

Advt_Headding_Middle
Advt_Headding_Middle

ಇಂಪಾಕ್ಟ್ ಆರ್ಟ್ & ಸ್ಪೋರ್ಟ್ಸ್ ಕರಾಟೆ ಕ್ಲಬ್ ಶಿಟೋರಿಯೋ ಕರಾಟೆ ಡು, ಜೆಸಿಐ ಸುಳ್ಯ ಪಯಸ್ವಿನಿ ಇದರ ಸಹಯೋಗದಲ್ಲಿ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ – 2018  ಪಂದ್ಯಾವಳಿಯು ನ.24  ಮತ್ತು 25 ರಂದು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಜರುಗಲಿದೆ.

ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ಅವರು ಉದ್ಘಾಟಿಸಲಿದ್ದಾರೆ. ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಹಾಗೂ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯದ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕರಾಟೆಯ ಡಿ.ಕೆ.ಎಸ್.ಕೆ.ಎ. ತಾಂತ್ರಿಕ ನಿರ್ದೇಶಕ ಟಿ.ಡಿ.ಥೋಮಸ್, ಬುಡೋ ಅಕಾಡೆಮಿಯ ಕರಾಟೆ ಮುಖ್ಯ ಶಿಕ್ಷಕ ಎನ್.ಮೋಹನ್, ಕರಾಟೆಯ ಎ.ಕೆ.ಎಸ್.ಕೆ.ಎ.ಯ ಮುಖ್ಯ ಕಾರ್ಯದರ್ಶಿ ಎಂ.ಅಲ್ತಪ್ ಪಾಷಾ, ಜೆಸಿಐ ಸುಳ್ಯ ಪಯಸ್ವಿನಿಯ ಸೀನಿಯರ್ ಚೇಂಬರ್ ಅಬ್ದುಲ್ಲ ಅವರು ಉಪಸ್ಥಿತರಿರಲಿದ್ದಾರೆ.

ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸುಮಾರು 8೦೦ ಸ್ಪರ್ಧಾಳುಗಳು ಭಾಗವಹಿಸಲಿದ್ದು ನ.25 ರಂದು ಸಂಜೆ ಸಮಾರೋಪ ಸಮಾರಂಭ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.