Breaking News

ನ. 24 – 26 : ಎಲಿಮಲೆಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಶಿಬಿರ

Advt_Headding_Middle
Advt_Headding_Middle

ದಕ್ಷಿಣ ಕನ್ನಡ ಚಿತ್ರ ಕಲಾ ಶಿಕ್ಷಕರ ಸಂಘ ಮತ್ತು ಎಲಿಮಲೆ ಸರಕಾರಿ ಪ್ರೌಢಶಾಲೆ ಇದರ ಸಹಯೊಗದಲ್ಲಿ ನ. 24 ರಿಂದ 26 ರವರೆಗೆ ಜಿಲ್ಲಾ ಮಟ್ಟದ ಚಿತ್ರಕಲಾ ಶಿಬಿರ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಗಾಟನೆಯನ್ನು ಉಮೇಶ ಮುಂಡೊಡಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಡಾ. ರಂಗಯ್ಯ ವಿಶನ್ ಚಾರಿಟಬಲ್ ಟ್ರಸ್ಟ್ ಸುಳ್ಯ, ದೇವಿಪ್ರಸಾದ್ ಚಿಕ್ಮುಳಿ, ರಂಜನ್ ಪಾರೆಪಾಡಿ, ನೇತ್ರಕಿರಣ ಇವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಜೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭವು ನ.೨೬ರಂದು ನಡೆಯಲಿದ್ದು, ಅಧ್ಯಕ್ಷತೆಯನ್ನು ಗ್ರಾ.ಪಂ. ಅದ್ಯಕ್ಷ ದಿವಾಕರ ಮುಂಡೊಡಿ ವಹಿಸಲಿದ್ದಾರೆ. ಸಭೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಾನ್ ಚಂದ್ರನ್ ಸಂತ ಅಲೊಶಿಯಸ್ ಪ್ರೌಢಶಾಲೆ ಮಂಗಳೂರು ಇವರಿಗೆ ಎಮ್ ಜಿ ಕಜೆ ಜಿಲ್ಲಾ ಕಾರ್ಯದರ್ಶಿ ಸ್ಕೌಟ್ಸ್ ಮತ್ತು ಗೈಡ್ಸ್ ಇವರು ಸನ್ಮಾನಿಸಲಿದ್ದಾರೆ. ರಾಧಾಕೃಷ್ಣ ಮಾವಿನಕಟ್ಟೆ ಚಿತ್ರಕಲಾ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಯಾನಂದ ಡಿ ಟಿ ಇವರು ಭಾಗವಹಿಸಲಿದ್ದಾರೆ. ಶೈಲೆಶ್ ಅಂಬೆಕಲ್ಲು ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರಕಲಾಶಿಕ್ಷಕರ ಸಂಘದ ಅಧ್ಯಕ್ಷ ಡಿ.ಅರ್. ಚೆನ್ನಕೇಶವ, ಕಾರ್ಯದರ್ಶಿ ಮುರಲಿಧರ ಆಚಾರ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಕಾರ್ಯಕ್ರಮದ ನಿರ್ವಹಣೆಯನ್ನು ಮೋಹನ್ ಎಣ್ಮೂರ್, ಗೋಪಿನಾಥ್ ಮೆತ್ತಡ್ಕ, ವಸಂತ್ ನಾಯಕ್ ಎಲಿಮಲೆ ಇವರು ನಡೆಸಲಿದ್ದಾರೆ ಎಂದು ಮುಖ್ಯ ಶಿಕ್ಷಕ ಚಂದ್ರಶೇಖರ್ ಪೇರಾಲ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.