Breaking News

ಕನಕಮಜಲು: ಸುಯೋಗ-2018 ; ನಿಸರ್ಗ ಚಿತ್ರಕಲಾ ಶಿಬಿರ ಸಮಾರೋಪ

Advt_Headding_Middle
Advt_Headding_Middle

ಕನಕಮಜಲು ಯುವಕ ಮಂಡಲ, ಮಹಾಲಸಾ ಚಿತ್ರಕಲಾ ಶಾಲೆ ಮಂಗಳೂರು ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಕನಕಮಜಲು, ಕನಕಮಜಲು ಪ್ರಾ.ಕೃ.ಪ.ಸ.ಸಂಘ ನಿಯಮಿತ ಜಾಲ್ಸೂರು ಇದರ ಸಹಭಾಗಿತ್ವದಲ್ಲಿ ಕನಕಮಜಲು ಗ್ರಾಮದ ವಿವಿಧ ಕಡೆಗಳಲ್ಲಿ ನಡೆದ ಸುಯೋಗ -2018 ನಿಸರ್ಗ ಚಿತ್ರಕಲಾ ಶಿ‌ಬಿರವು ಕನಕಮಜಲಿನ ಮೂರ್ಜೆ ಬಾಲನಿಲಯದಲ್ಲಿ ನ.18ರಂದು ಸಮಾರೋಪಗೊಂಡಿತು.

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಅಧ್ಯಕ್ಷತೆ ವಹಿಸಿದ್ದರು. ‌ಮುಖ್ಯ ಅತಿಥಿಗಳಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ರಾಜೇಂದ್ರ ಕೇದಿಗೆ, ಮಂಡ್ಯ ಗುರುದೇವ ಲಲಿತಕಲಾ ಅಕಾಡೆಮಿಯ ನಿರ್ದೇಶಕ ರಾಧಾಕೃಷ್ಣ ಮೂರ್ಜೆ, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ವಸಂತ ಗಬ್ಬಲಡ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಯುವಕ ಮಂಡಲದ ಅಧ್ಯಕ್ಷ ಹರಿಪ್ರಸಾದ್ ಮಾಣಿಕೋಡಿ, ಕಾರ್ಯದರ್ಶಿ ರಕ್ಷಿತ್ ಅಕ್ಕಿಮಲೆ, ಕಾರ್ಯಕ್ರಮ ಸಂಯೋಜಕ ಬಾಲಚಂದ್ರ ನೆಡಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಮಹಾಲಸ ಆರ್ಟ್ ಕಾಲೇಜಿನ ಶಿಬಿರಾರ್ಥಿಗಳು ಒಂದು ವಾರದ ಕಾಲ ಕನಕಮಜಲು ಗ್ರಾಮದ ವಿವಿದೆಡೆಗಳಲ್ಲಿ ರಚಿಸಿದ ಕಲಾತ್ಮಕ ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.