ಪ್ರಗತಿ ಕಾಣಿಯೂರಿನಲ್ಲಿ ಗೀತಗಾಯನ ಕಾರ್ಯಕ್ರಮ ಮತ್ತು ಪೋಷಕರ ಕ್ರೀಡಾಕೂಟ

Advt_Headding_Middle
Advt_Headding_Middle

 

ಬಾಲ್ಯದ ದಿನಗಳು ವ್ಯಕ್ತಿತ್ವ ರೂಪಿಸುವ ಬುನಾದಿ. ವಿದ್ಯಾರ್ಥಿ ಜೀವನದ ಅನುಭವಗಳ ಜೀವನದ ಪಾಠ ಕಲಿಸುತ್ತದೆ ಎಂದು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನ. ೧೮ ರಂದು ನಡೆದ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತ ಗಾಯನ ಕಾರ‍್ಯಕ್ರಮ ಮತ್ತು ಪೋಷಕರ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ, ಕ್ಯಾಪ್ಟನ್ ಪ್ರಶಾಂತ್ ಗೋಳ್ತಜೆ 2೦ನೇ ಬೆಟಾಲಿಯನ್ ಕುಮಾವನ್ ರೆಜಿಮೆಂಟ್ ಪೂಂಚ್, ಜಮ್ಮು ಮತ್ತು ಕಾಶ್ಮೀರ ನುಡಿದರು.


ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀಮತಿ ಶುಭದಾ ಎಸ್.ರೈ. ಉಪಾಧ್ಯಕ್ಷರು, ತಾಲೂಕು ಪಂಚಾಯತ್ ಸುಳ್ಯರವರು ಮಾತನಾಡಿ, ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಮಾದರಿಯಾಗಿ ನಿರ್ಮಿಸುತ್ತಿದೆ ಪ್ರಗತಿ ಸಂಸ್ಥೆ ಎಂದರು.
ಅತಿಥಿಗಳಾಗಿ ಹಾಲು ಉತ್ಪಾದಕರ ಸಹಕಾರಿ ಸಂಘ ಚಾರ್ವಾಕದ ಅಧ್ಯಕ್ಷರಾದ ಶ್ರೀ ಧನಂಜಯ ಕೇನಾಜೆ, ಬೆಳಂದೂರಿನ  ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ತೇಜಾಕ್ಷಿ ಕೊಡಿಂಗೆ. ಸ.ಹಿ.ಪ್ರಾ.ಶಾಲೆ ಚಾರ್ವಾಕ, ಶ್ರೀಮತಿ ಪಾರ್ವತಿ ನಾರಾಯಣ ಗೌಡ, ಕಲಾಮಂದಿರ ಬೆಳ್ಳಾರೆಯ ಶ್ರೀ ಪ್ರಮೋದ್ ರೈ ಪೆರುವಾಜೆ, ರಾಷ್ಟ್ರಮಟ್ಟದ ಕ್ರೀಡಾಪಟು ಸಂಶೀರ್ ಎಸ್.ಇ., ಸಂಚಾಲಕರಾದ ಶ್ರೀ ಜಯಸೂರ‍್ಯ ರೈ ಮಾದೋಡಿ, ಆಡಳಿತ ಸಮಿತಿಯ ಸದಸ್ಯರಾದ ನಾಗೇಶ್ ರೈ ಮಾಳ, ಟ್ರಸ್ಟಿ ವೃಂದಾ ಜೆ.ರೈ, ಆಡಳಿತಾಧಿಕಾರಿ ವಸಂತ ರೈ ಕಾಂಗಳ, ಮುಖ್ಯಗುರು ಶ್ರೀ ಗಿರಿಶಂಕರ ಸುಲಾಯ, ಸರಸ್ವತಿ ಎಂ, ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಗೀತಸುಧಾ ಎಚ್. ಪ್ರಾರ್ಥಿಸಿದರು. ಸಹಶಿಕ್ಷಕಿ ಶ್ರೀಮತಿ ಪ್ರೇಮಲತಾ ಯಾದವ್ ಕಾರ‍್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.