Breaking News

ಕೆ.ಎಸ್.ಗೌಡ ಸಮೂಹ ವಿದ್ಯಾಸಂಸ್ಥೆಯಲ್ಲಿ ಹೆತ್ತವರ ಹಾಗೂ ಊರವರ ಕ್ರೀಡಾಕೂಟ

Advt_Headding_Middle
Advt_Headding_Middle

ಕೆ.ಎಸ್.ಗೌಡ ಸಮೂಹ ವಿದ್ಯಾಸಂಸ್ಥೆ ಮತ್ತು ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ದಶಮಾನೋತ್ಸವದ ಅಂಗವಾಗಿ, ವಿದ್ಯಾಭಿಮಾನಿಗಳಾದ ಊರವರ, ಹೆತ್ತವರ, ಹಿರಿಯ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕ ಕ್ರೀಡೋತ್ಸವವು ನ. ೧೮ರಂದು ಎಣ್ಮೂರು ಕೋಟಿಚೆನ್ನಯ್ಯ ನಗರದಲ್ಲಿರುವ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಸಂಚಾಲಕರಾದ ಅಶೋಕ್‌ಕುಮಾರ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಂರ್ಬಿಲ ಸ.ಕಿ.ಪ್ರಾ.ಶಾಲಾ
ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ. ಗೌರವ ವಂದನೆ ಸ್ವೀಕರಿಸಿದರು. ಅಂತರಾಷ್ಟ್ರೀಯ ಮಟ್ಟದ ಹಿರಿಯ ಕ್ರೀಡಾಪಟು ವಿಶ್ವನಾಥ ರೈ ಮರುವಂಜ ಧ್ವಜಾರೋಹಣಗೈದು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಪ್ರಾ. ಮತ್ತು ಪ್ರೌ. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಆನಂದ ಬೆಳ್ಳಾರೆ, ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ಕುಮಾರಸ್ವಾಮಿ, ಬಾಳಿಲ ಪ್ರೌಢಶಾಲಾ ನಿವೃತ್ತ ಶಿಕ್ಷಕ ನಾರಾಯಣ ಭಟ್ ಕೆ. ಉಪಸ್ಥಿತರಿದ್ದರು.


ಕಾರ್ಯಕ್ರಮಾಧಿಕಾರಿ ಪ್ರಸನ್ನ ವೈ.ಟಿ. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಡ್ರಾಯಿಂಗ್ ಶಿಕ್ಷಕ ಧ್ವಜಾರೋಹಣಗೈದವರನ್ನು ಪರಿಚಯಿಸಿದರು. ಪ್ರಾ.ಮತ್ತು ಪ್ರೌ.ಶಾಲಾ ಮುಖ್ಯ ಶಿಕ್ಷಕ ಉಮೇಶ್ ಎಚ್. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.