ನಿಂತಿಕಲ್ಲು ದಶವರ್ಷ ವೈಭವ ಸಂಭ್ರಮ : ಆಮಂತ್ರಣ ಬಿಡುಗಡೆ

Advt_Headding_Middle
Advt_Headding_Middle

ಕೆ.ಎಸ್.ಗೌಡ ಸಮೂಹ ವಿದ್ಯಾಸಂಸ್ಥೆಗಳಾದ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ಸಂಸ್ಥೆಯ ದಶ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ನ. ೧೭ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಆಮಂತ್ರಣ ಬಿಡುಗಡೆ ಬಳಿಕ ಸಂಸ್ಥೆ ಬೆಳೆದು ಬಂದ ಹಾಗೂ ದಶ ಸಂಭ್ರಮ ಕಾರ್ಯಕ್ರಮದ ಮಾಹಿತಿಯನ್ನು ಸಂಸ್ಥೆಯ ಸಂಚಾಲಕ ಅಶೋಕ್‌ಕುಮಾರ್ ಕೆ.ಎಸ್. ಮಾಹಿತಿ ನೀಡಿದರು. ೨೦೦೬ರಲ್ಲಿ ಸ್ಥಾಪನೆಗಂಡಿದ್ದು, ತದನಂತರ ೨೦೦೭ರಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಿದೆವು. ೨೦೦೮ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಂಗ್ಲಮಾಧ್ಯಮ ಮತ್ತು ಕನ್ನಡಮಾಧ್ಯಮ ಎಂಬ ಮೂರು ವಿದ್ಯಾಸಂಸ್ಥೆಗಳು ಸ್ಥಾಪಕಾದ್ಯಕ್ಷ ಶೀನಪ್ಪ ಗೌಡ ಕಿನ್ನಿಕುಮ್ರಿಯವರ ಕನಸಿನಂತೆ ನಡೆಯುತ್ತಾ ಬಂದಿರುತ್ತದೆ. ಸಂಸ್ಥೆಯ ದಶಮಾನೋತ್ಸವ ಬೇರೆ ಬೇರೆ ಸಮಯದಲ್ಲಿ ಆಚರಿಸಿದಾಗ ಹೆತ್ತವರಿಗೂ, ಸಂಸ್ಥೆಗೂ ಆರ್ಥಿಕ, ಸಮಯದೂಗಿಸಲು ಮತ್ತು ಇನ್ನಿತರ ವಿಷಯಗಳಿಗಾಗಿ ಸಮೂಹ ಸಂಸ್ಥೆಗಳ ಕಾರ್ಯಕ್ರಮ ಒಂದೇ ಅವಧಿಯಲ್ಲಿ ನಾವು ದಶಮಾನೋತ್ಸವದ ಸಧೃಡ ಸಮಿತಿ ರಚಿಸಿಕೊಂಡು ಆಡಳಿತ ಮಂಡಳಿ, ಶಿಕ್ಷಕ-ರಕ್ಷಕ ಸಂಘ ದಶಮಾನೋತ್ಸವ ಸಮಿತಿ ಒಗ್ಗೂಡಿ ಯಶಸ್ವಿಯಾಗಿ ನಡೆಸುವುದು ನಮ್ಮ ಧ್ಯೇಯವಾಗಿರುತ್ತದೆ. ಡಿ.೧ನೇ ಶನಿವಾರ ಹಾಗೂ ಡಿ.೨ನೇ ಆದಿತ್ಯವಾರ ಎರಡು ದಿನಗಳು ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ ನಡೆಯಲಿರುವುದು. ಅದರ ಅಂಗವಾಗಿ ನಾವು ಮನೆ ಮನೆ ಆಮಂತ್ರಣ ಹಾಗೂ ಈಗಾಗಲೇ ಮ್ಯಾರಾಥಾನ್ ಜಾಥಾ ಕ್ರೀಡೋತ್ಸವ ನಡೆದಿದೆ. ಜೇಸಿ, ಲಯನ್ಸ್ ಸಂಸ್ಥೆ,ನಮ್ಮ ಸಂಸ್ಥೆ ಸೇರಿ ನೇತ್ರ ಚಿಕಿತ್ಸೆ ಶಿಬಿರವನ್ನು ಉಚಿತವಾಗಿ ನಡೆಸುವುದು. ಸಮಾಜದ ಹಿರಿಯರನ್ನು ಸಂಪರ್ಕಿಸಿ ಸಲಹೆ ಪಡೆದು ಸಾರ್ವಜನಿಕ, ಹಿರಿಯ ವಿದ್ಯಾರ್ಥಿಗಳಿಗೆ, ರಾಜ್ಯ, ರಾಷ್ಟ್ರಮಟ್ಟದ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಮತ್ತು ಸನ್ಮಾನಿಸುವುದೆಂದು ದಶಮಾನೋತ್ಸವ ಸಮಿತಿ ನಿರ್ಧಾರ,ಧಾರ್ಮಿಕ ವಿಚಾರದಂತ ಸರ್ವಸಮ್ಮೇಳನ, ಸವಿನೆನಪಿಗಾಗಿ ಸ್ಮರನಸಂಚಿಕೆ ಮಾಡುವುದು. ಆರ್ಥಿಕವಾಗಿ ಸಮತೋಲನವಾಗುವಂತೆ ನೋಡಿಕೊಳ್ಳುವುದು. ಕಾರ್ಯಕ್ರಮದಲ್ಲಿ ಯಕ್ಷಗಾನ ವೈಭವ, ಸಾಂಸ್ಕೃತಿಕ ವೈಭವ,ನೃತ್ಯ ವೈವಿಧ್ಯ, ಕಾಮೇರಿ, ಲಸಾರಿ ಡ್ಯಾನ್ಸ್, ಮಿಮಿಕ್ರಿ, ಸಿಂಗಿಂಗ್ ನಡೆಯುವುದು. ರಾಜಕೀಯ ಧುರೀಣರು ಸಹಕಾರ ಸಂಸ್ಥೆ ಮುಖ್ಯಸ್ಥರು ನತ್ತು ಸ್ವಾಮಿಗಳಿಂದ ಆಶೀರ್ವಚನ, ಸಭಾಕಾರ್ಯಕ್ರಮಗಳು ನಡೆಯಲಿವೆ. ಪ್ರಥಮ ಕಾರ್ಯಕ್ರಮ ಗ್ರಾಮೀಣ ಪ್ರದೇಶವಾದ ನಮ್ಮಲ್ಲಿ ಪೈರುಕಟಾವು ಮಾಡುವುದರ ಮೂಲಕ ಕೊಯಿಲ್ದಲೇಸ್ ಕಾರ್ಯಕ್ರಮದಡಿ ಮಕ್ಕಳಿಗೆ, ಊರಿನವರಿಗೆ ಮನದಟ್ಟಾಗುವಂತೆ ಮಾಡಿದ್ದೇವೆ ಎಂದು ಆಡಳಿತ ನಿರ್ದೇಶಕ ಸಂಚಾಲಕ ಅಶೋಕ್ ಕುಮಾರ್ ಕೆ.ಎಸ್., ದಶಮಾನೋತ್ಸವ ಸಮಿತಿ ಅದ್ಯಕ್ಷ ಮುಗುಪ್ಪು ಕೂಸಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಕೆ.ಎಸ್. ಪತ್ರಿಕಾಗೋಷ್ಠಿಯಲ್ಲಿದ್ದರು.

ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಪ್ರಮುಖರಾಧ ಮೇಲುಸ್ತುವಾರಿ ಸಮಿತಿ ಅಕ್ಷಯ ಆಳ್ವ,ಸದಾನಂದ ರೈ ಕೂವೆಂಜ, ಗುರುಪ್ರಸಾದ್ ತೋಟ , ಆರ್ಥಿಕ ಸಮಿತಿಯ ಬಾಲಕೃಷ್ಣ ರೈ ಪಾದೆಕಲ್ಲು, ಆಹಾರ ಸಮಿತಿಯ ಆನಂದ ಬೆಳ್ಳಾರೆ, ಪ್ರಚಾರ ಸಮಿತಿಯ ಸಂಕಪ್ಪ ಸಾಲಿಯಾನ್, ರಶೀದ್ ಬೆಳ್ಳಾರೆ, ಆಮಂತ್ರಣ ಪತ್ರಿಕೆಯ ಶರತ್ ಕುಮಾರ್ ಅಲೆಕ್ಕಾಡಿ, ಸಾಂಸ್ಕೃತಿಕ ಸಮಿತಿಯ ಜಯರಾಮ ಮರಕ್ಕಡ, ಪೂರಕ ಕಾರ್ಯಕ್ರಮ ಸಮಿತಿಯ ಶ್ರೀಮತಿ ಯಮುನಾ ಕಾರ್ಜ, ಕ್ರೀಡಾ ಸ್ಪರ್ಧೆ ಸಮಿತಿಯ ನಾರಾಯಣ ಶೀರಾಜೆ, ಸಾಂಸ್ಕೃತಿಕ ಸ್ಪರ್ಧೆಯ ಶ್ರೀಮತಿ ಶಶಿಕಲಾ, ಸಭಾ ಕಾರ್ಯಕ್ರಮ ಸಮಿತಿಯ ಪ್ರಸನ್ನ ವೈ.ಟಿ., ಸ್ಮರಣ ಸಂಚಿಕೆ ಸಮಿತಿಯ ಅಜಿತ್ ಐವರ್ನಾಡು, ಸನ್ಮಾನ ಸಮಿತಿ ಆನಂದ ಗೌಡ ಆರೆಂಬಿ, ಶುಚಿತ್ವ ಸಮಿತಿ ಜನಾರ್ದನ ಆರೆಂಬಿ, ದಶಮಾನೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಸುಂದರ ಗೌಡ ಆರೆಂಬಿ, ಜಯರಮೇಶ ಅಡ್ಪಂಗಾಯ, ಕೋಶಾಧಿಕಾರಿ ಉಮೇಶ್ ಎಚ್, ಹಾಗೂ ಐಟಿಐ ವಿದ್ಯಾರ್ಥಿ ನಾಯಕ ಆಶಿಕ್ ಕೆ, ಹಿರಿಯ ವಿದ್ಯಾರ್ಥಿ ನಾಯಕ ವಿನೋದ್ ಕಡಬ ಉಪಸ್ಥಿತರಿದ್ದರು.


About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.