Breaking News

ಗುತ್ತಿಗಾರು :ಸಾರ್ವಜನಿಕ ಶೌಚಾಲಯ ಉದ್ಘಾಟನೆ

Advt_Headding_Middle
Advt_Headding_Middle

ತಾಲೂಕು ಪಂಚಾಯತ್ ನ ಅಧ್ಯಕ್ಷ ರಾದ ಅವಧಿಯಲ್ಲಿ ಮುಳಿಯ ಕೇಶವ ಭಟ್ ರವರು ವಿಶೇಷ ಅನುದಾನದಿಂದ ತರಿಸಿದ‌ 5 ಲಕ್ಷ ಹಾಗೂ ಗುತ್ತಿಗಾರು ಗ್ರಾ.ಪಂ ವತಿಯಿಂದ 2 ಲಕ್ಷ ಹಣದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯದ ಉದ್ಘಾಟನೆಯು ನ.19 ರಂದು ನಡೆಯಿತು.ಪುರುಷರ ವಿಭಾಗದ ಶೌಚಾಲಯವನ್ನು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ.ನಿ ಅಧ್ಯಕ್ಷರು ಹಾಗೂ ಮಾಜಿ ತಾ.ಪಂ ಅಧ್ಯಕ್ಷರಾದ ಮುಳಿಯ ಕೇಶವ ಭಟ್ ಹಾಗೂ ಮಹಿಳೆಯರ ವಿಭಾಗದ ಶೌಚಾಲಯವನ್ನು ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ ಲೋಕಾರ್ಪಣೆ ಮಾಡಿದರು. 


ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಅಚ್ಚುತ ಗುತ್ತಿಗಾರು ,ಸದಸ್ಯರುಗಳಾದ ವೆಂಕಟ್ ವಳಲಂಬೆ, ವಿಜಯ ಚಾರ್ಮತ,ಜಯಪ್ರಕಾಶ್ ಮೊಗ್ರ,ಯಮಿತಾ ಪೂರ್ಣಚಂದ್ರ, ಶ್ರೀ ದೇವಿ ಕೊಂಬೊಟ್ಟು ,ಮಿತ್ರಕುಮಾರಿ ಚಿಕ್ಮುಳಿ,ಶಶಿಕಲಾ,ಭಾಗೀರಥಿ ಕಾಜಿಮಡ್ಕ,ಕಿಶೋರಿ ಚಾರ್ಮತ ,ಅಮ್ಮಣ್ಣಿ ನಡುಗಲ್ಲು ,ಇಲಾಖಾಧಿಕಾರಿಗಳು,ಅಂಗನವಾಡಿ ಕಾರ್ಯಕರ್ತರು, ಸ್ವ ಸಹಾಯ ಸಂಘದ ಸದಸ್ಯರು, ರಿಕ್ಷಾಚಾಲಕರು, ಸಾರ್ವಜನಿಕರು,ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ. ಜಿ ಸ್ವಾಗತಿಸಿ ,ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.