ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ CHANCE TO DANCE ಕಾರ್ಯಕ್ರಮದಲ್ಲಿ ರಂಜಿಸಿದ ಫ್ಯಾಮಿಲಿ ಡ್ಯಾನ್ಸ್

Advt_Headding_Middle
Advt_Headding_Middle

ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಮಕ್ಕಳ ದಿನಾಚರಣೆ ಯನ್ನು ಸಂಭ್ರಮದಿಂದ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ತಾಲೂಕಿನಲ್ಲಿ ಯೇ ಪ್ರಥಮ ಬಾರಿಗೆ ಮಕ್ಕಳು ತಮ್ಮ ಪೋಷಕರ ಜೊತೆಗೆ ನೃತ್ಯ ಪ್ರಸ್ತುತ ಪಡಿಸಲು CHANCE TO DANCE ಎನ್ನುವಂತಹ ನೃತ್ಯ ಸ್ಪರ್ಧೆಯನ್ನು ಸಂಸ್ಥೆಯು ಆಯೋಜಿಸಿತು. ನೂತನವಾಗಿ ಶಾಲೆಯಲ್ಲಿ ಆರಂಭ ಗೊಂಡ MIBA  ಮತ್ತು MIYA ಸಂಸ್ಥೆಯನ್ನು ಉದ್ಘಾಟಿಸಿದ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಗಳುCHANCE TO DANCE ಸ್ಫರ್ಧೆಗೆ ಮತ್ತು ಸ್ಫರ್ಧಾ ಳುಗಳಿಗೆ ಶುಭಹಾರೈಸುತ್ತಾ ಇಂತಹ ಸ್ಪರ್ಧೆಗಳು ಮಕ್ಕಳ ಪೋಷಕರು ಹಾಗೂ ಬೋಧಕರು ಶಾಲೆಯ ಬಗ್ಗೆ ಒಂದು ಒಳ್ಳೆಯ ಸಂಬಂಧ ಬೆಸೆಯುತ್ತದೆ. ಪೋಷಕರಲ್ಲಿ ಹುದುಗಿರುವ ಪ್ರತಿಭೆ ಅನಾವರಣವಾಗುತ್ತದೆ. ಎಂದು ಹೇಳಿ ಮಾರುತಿ ಸಂಸ್ಥೆಯನ್ನು ಶ್ಲಾಫಿಸಿದರು.
ಆಕರ್ಷಕರ ಧ್ವನಿಬೆಳಕು ಸಿಡಿಮದ್ದಿನ ಸಂಯೋಜನೆಯೊಂದಿಗೆ ಆರಂಭಗೊಂಡ CHANCE TO DANCE  ಸ್ಫರ್ಧೆಯಲ್ಲಿ ಸುಮಾರು ೧೮ಕ್ಕೂ ಮಿಕ್ಕಿ ತಂಡಗಳು ಆಕರ್ಷಕ ವೇಷಭೂಷಗಳೊಂದಿಗೆ ತಮ್ಮ ತಮ್ಮ ಮಕ್ಕಳೊಂದಿಗೆ ವಿವಿಧ ಪ್ರಕಾರಗಳ ನೃತ್ಯವನ್ನು ಪ್ರಸ್ತುತಪಡಿಸಿದರು. ನೃತ್ಯ ವನ್ನು ಕಂಡಂತ ಕಿಕ್ಕಿರಿದ ಪ್ರೇಕ್ಷಕರ ವರ್ಗ ಉತ್ಸಾಹದಿಂದ ಪ್ರೋತ್ಸಾಹಿಸಿದರು.
ನಿರ್ಣಾಯಕರಾದ ಶ್ರೀಯುತ ರಾಜ್ ಮಖೇಶ್ (ರಂಗಭೂಮಿ ಕಲಾವಿದರು) ಹಾಗೂ ನಾಟ್ಯಗುರು ಶ್ರೀಮತಿ ತನುಜಾಕಿಶನ್ ( ಸಂಗೀತಾ ಮತ್ತು ನೃತ್ಯಗುರು) ಅವರು ಮಾತನಾಡುತ್ತಾ ಇದೊಂದು ಹೊಸ ಪ್ರಯೋಗ ,ಗ್ರಾಮೀಣ ಪ್ರದೇಶದಲ್ಲಿ ಇಂತಹ ವೇದಿಕೆಯನ್ನು ಕಲ್ಪಿಸಿ ಪೋಷಕರ ಮತ್ತು ಮಕ್ಕಳಲ್ಲಿ ಹೊಸ ಹುರುಪುನ್ನು ತುಂಬಿದ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಪ್ರತಿಭೆ ಇದ್ದರೂ ಸೂಕ್ತ ವೇದಿಕೆ ಸಿಗದ ಫೋಷಕರಿಗೆ ಕೂಡ ಇದು ಅವಕಾಶ ಕಲ್ಪಿಸಿದೆ. ಮತ್ತು ದಿನನಿತ್ಯದ ಒತ್ತಡ ಜೀವನದ ಮಧ್ಯೆ ಇಂತಹ ಕಾರ್ಯ ಕ್ರಮಗಳು ಮನಸ್ಸಿಗೆ ಉಲ್ಲಾಸ ನೀಡಿದೆ. ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟರು. CHANCE TO DANCE ಸ್ಫರ್ಧೆಯಲ್ಲಿ ಭಾಗವಹಿಸುವ ಪೋಷಕರು ಭಾಗವಹಿಸುವ ಭರವಸೆಯನ್ನು ಪೋಷಕರು ಹೇಳಿದರು. CHANCE TO DANCE ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಆದ್ಯ ಆರಾಧ್ಯ ಅವಳಿ ಮಕ್ಕಳು ತಮ್ಮ ತಾಯಿ ಅಶ್ವಿನಿ ಯೊಂದಿಗೆ ನೃತ್ಯ ಪ್ರದರ್ಶಿಸಿ ಬಹುಮಾನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮೇಘ ಬಹುಮಾನವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ರುಕ್ಮಯದಾಸ್
ಅವರು ಇತರ ಗಣ್ಯರ ಸಮ್ಮುಖದಲ್ಲಿ ವಿಜೇತರಿಗೆ ನೀಡಿದರು. ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಫರ್ಧಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಸ್ವರ ಸಿಂಚನ ಬಳಗದ ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೊರೆಗೊಂಡಿತು. ತದನಂತರ CHANCE TO DANCE ಸ್ಫರ್ಧೆಯಲ್ಲಿ ಸಂಗೀತ ರಸಮಂಜರಿ ಯೊಂದಿಗೆ ಸಂಪನ್ನಗೊಂಡಿತು. ಶಾಲೆಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಕಿಶೋರ್‌ಕುಮಾರ್ ಅವರು ಬಹುಮಾನ ಪಡಿದವರಿಗೆ ಅಭಿನಂದನೆ ಸಲ್ಲಿಸಿಸುತ್ತಾ ಎಲ್ಲಾರಿಗೂ ಧನ್ಯವಾದವನ್ನು ಅರ್ಪಿಸಿದರು.

ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ CHANCE TO DANCE  ಕಾರ್ಯಕ್ರಮದ ಬಗ್ಗೆ ಪೋಷಕರ ಅಭಿಪ್ರಾಯ

ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಕಾರ್ಯಕ್ರಮ ನೋಡಿದ ಮೇಲೆ ನನಗೆ ಭಾಗವಹಿಸಬೇಕಿತ್ತು ಎಂಬ ಆಸೆಯಾಯಿತು ಸಿಕ್ಕಿದ ಅವಕಾಶವನ್ನು ವ್ಯರ್ಥ ಮಾಡಿದೆ. ಮುಂದಿನ ಸಲ ಖಂಡಿತಾ ಭಾಗವಹಿಸುತ್ತೇನೆ.
-ಸವಿತ
(ವಿದ್ಯಾರ್ಥಿ ಯುಕ್ತರ ತಾಯಿ)
……………..

ಇಂತ ಅವಕಾಶ ಇಷ್ಟರವರೆಗೆ ಎಲ್ಲಿಯೂ ಸಿಗಲಿಲ್ಲ. ಮಕ್ಕಳ ಜೊತೆ ಬೆರೆಯಲು ಮತ್ತು ಕುಣಿದಾಡಲು ಮಾರುತಿ ಸ್ಕೂಲ್ ಅವಕಾಶ ಮಾಡಿ ಕೊಟ್ಟಿದೆ. ನನಗೆ ತುಂಬಾ ಸಂತೋಷವಾಗಿದೆ.
– ಅಶ್ವಿನಿ
(ವಿದ್ಯಾರ್ಥಿಗಳಾದ ಅಧ್ಯಾ, ಆರಾಧ್ಯರ ತಾಯಿ )

ಮಕ್ಕಳ ಜೊತೆ ಬೆರೆಯಲು ಒಳ್ಳೆಯ ಅವಕಾಶ ಸಿಕ್ಕಿದೆ. ನನಗೆ ತುಂಬಾ ಖುಷಿಯಾಗಿದೆ.
– ಹೇಮಲತಾ (ವಿದ್ಯಾರ್ಥಿ ಸೃಜನಳ ತಾಯಿ )

ಮೂರು ವರ್ಷದಲ್ಲಿಯೇ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ , ನುರಿತ ಶಿಕ್ಷಕರಿಂದ ಅತ್ಯುತ್ತಮ ಪಾಠ ಪ್ರವಚನ ಕಾಣಬಹುದು. ಆಡಳಿತ ಮಂಡಳಿ, ವಿದ್ಯಾರ್ಥಿ ಹಾಗೂ ಪೋಷಕರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ ಸಂಸ್ಥೆಯಾಗಿದೆ. ಮೊನ್ನೆ ನಡೆದ ಕಾರ್ಯಕ್ರಮವು ವಿದ್ಯಾರ್ಥಿಗಳ ಮತ್ತು ಪೋಷಕರ ಪ್ರತಿಭೆಯ ಅನಾವರಣಕ್ಕೆ ಕಾರಣವಾಗಿದೆ . ಇಂತಹ ಕಾರ್ಯಕ್ರಮದಿಂದಾಗಿ ಪೋಷಕರಲ್ಲಿ ಬಾರಿ ಪರಿಣಾಮ ಉಂಟು ಮಾಡಿದ್ದು ಮುಂದಿನ ವರ್ಷದ ಮುಂಗಡ ದಾಖಲಾತಿ ಈಗಾಗಲೇ ಆರಂಭ ಗೊಂಡಿದ್ದು ಇನ್ನು ಕೆಲವೇ ಸೀಟುಗಳು ಉಳಿದಿವೆಅಬುಸಾಲಿ (ಉಪಾಧ್ಯಕ್ಷರು, ಶಾಲಾ ಪೋಷಕರ ಸಮಿತಿ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.