ಅಮರಮುಡ್ನೂರು ಗ್ರಾ.ಪಂ. ಮಕ್ಕಳ ಗ್ರಾಮ ಸಭೆ

Advt_Headding_Middle
Advt_Headding_Middle

ಅಮರಮುಡ್ನೂರು ಗ್ರಾಮ ಪಂಚಾಯತ್‌ನ ಮಕ್ಕಳ ಗ್ರಾಮ ಸಭೆಯು ನ ೧೪ ರಂದು ಪಂಚಾಯತ್ ಸಭಾಭವನದಲ್ಲಿ ಕುಕ್ಕುಜಡ್ಕ ಚೊಕ್ಕಾಡಿ ಪ್ರೌಢಶಾಲೆಯ ವಿದ್ಯಾರ್ಥಿ ನಾಯಕ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ನೋಡೆಲ್ ಅಧಿಕಾರಿಯಾಗಿ ಸಂತೋಷ್ ಸಭೆಯನ್ನು ನಡೆಸಿದರು.
ಗ್ರಾಮದ ಶಾಲೆಗಳಿಗೆ ಹೋಗುವ ರಸ್ತೆಗಳನ್ನು ದುರಸ್ಥಿಗೋಳಿಸಿ ಕಾಮಗಾರಿ ಮಾಡಬೇಕು. ಶಾಲೆಯ ಆಟದ ಮೈದಾನ ವಿಸ್ತರಣೆಗೊಳಿಸಿ ಭದ್ರತೆಗಾಗಿ ಆವರಣಗೋಡೆ ನಿರ್ಮಿಸಬೇಕು. ಶಾಲೆಗಳಲ್ಲಿ ಇರುವ ಶೌಚಾಲಯ ದುರಸ್ಥಿಗೊಳಿಸಿ ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯದ ಅವಶ್ಯಕತೆ ಇದೆ. ಶಾಲೆಗಳಿಂದ ಹೊರಗುಳಿದ ಮಕ್ಕಳ ಬಗ್ಗೆ ಸರ್ವೆ ಮಾಡಿ ಶಾಲೆಗೆ ಸೆರ್ಪಡೆಗೋಳಿಸಬೇಕು ಎಂದು ಸಭೆಯಲ್ಲಿರುವ ಮಕ್ಕಳು ಪ್ರಸ್ತಾಪಿಸಿದರು. ಗ್ರಾ.ಪಂ ಅಧ್ಯಕ್ಷೆ ಸೀತಾ ಹೆಚ್, ಸದಸ್ಯರಾದ ಪ್ರದೀಪ್ ಬೊಳ್ಳೂರು, ತಿಮ್ಮಪ್ಪ ಕೊಂಡೆಬಾಯಿ, ಶಿವರಾಮ ಕೆರೆಮೂಲೆ, ಲತೇಶ್ವರಿ ಮಾಯಿಪಡ್ಕ, ಶೇಷಮ್ಮ, ನಿರ್ಮಲಾ ಬಿ.ರೈ, ಪುಷ್ಪಾವತಿ, ಪಿ.ಡಿ.ಒ ಉಪಸ್ಥಿತರಿದ್ದರು.
ತಿಮ್ಮಪ್ಪ ಕೊಂಡೆಬಾಯಿ ಸ್ವಾಗತಿಸಿ , ಪಂ ಕಾರ್ಯದರ್ಶಿ ದಯಾನಂದ ಪತ್ತುಕುಂಜ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕರು, ಅಧ್ಯಾಪಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.