Breaking News

ಪಂಜ : ಜೇಸಿ ಸಪ್ತಾಹ -ಸಮಾರೋಪ ಸಮಾರಂಭ

Advt_Headding_Middle
Advt_Headding_Middle

ಡ್ಯಾನ್ಸ್ ಧಮಾಕ: ಸೀನಿಯರ್ ಉಡುಪಿ ತಂಡಕ್ಕೆ,ಜೂನಿಯರ್ ಸುಳ್ಯ ತಂಡ ಕ್ಕೆ ಪ್ರಶಸ್ತಿ
ಜಾಗತಿಕ ಶಾಂತಿಯ ಸಂದೇಶವನ್ನು ಸಾರುವ ಸಪ್ತಾಹ- ಪುರಂದರ ರೈ

“ವಿಶ್ವದ ಅತಿದೊಡ್ಡ ಕ್ರೀಯಾಶೀಲ ನಾಗರಿಕ ಯುವ ಸಮೂಹವನ್ನು ನಿರ್ಮಾಣ ಮಾಡುವ ಸಂಸ್ಥೆ ಜೇಸೀ ಸಂಸ್ಥೆ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಭದ್ರ ಬುನಾದಿಯನ್ನು ಹಾಕಿದೆ. ವಿವಿಧ ಸ್ತರಗಳಲ್ಲಿ ಸಮಾಜಕ್ಕೆ ಅನೇಕ ನಾಯಕರನ್ನು ಕೊಟ್ಟಂತಹ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಜೇಸಿ ಸಪ್ತಾಹದ ಮೂಲಕ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಜೇಸಿ ಕಲ್ಪನೆ ಸಹಕಾರ ಗೊಳಿಸಿ ಜಾಗತಿಕ ಶಾಂತಿಯ ಸಂದೇಶವನ್ನು ಸಾರುತ್ತದೆ”ಎಂದು ಜೇಸಿಐ ರಾಷ್ಟ್ರೀಯ ಪೂರ್ವಾಧ್ಯಕ್ಷ ಪುರಂದರ ರೈ ಹೇಳಿದರು.ಅವರು ನ.೧೭.ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜರುಗಿದ ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾ ೨೦೧೮ ಇದರ ಸಮಾರೋಪ ಸಮಾರಂಭದಲ್ಲಿ ಕಮಲಪತ್ರ ಪುರಸ್ಕರಿಸಿ ಮಾತನಾಡಿದರು.

ಘಟಕದ ಅಧ್ಯಕ್ಷ ಗುರುಪ್ರಸಾದ್ ತೋಟ ಅಧ್ಯಕ್ಷತೆ ವಹಿಸಿದ್ದರು.ಘಟಕದ ಪೂರ್ವಾಧ್ಯಕ್ಷ ಚಂದ್ರಶೇಖರ ಕುಕ್ಕುಪುಣಿ ಕಮಲಪತ್ರ ಪುರಸ್ಕಾರ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪಂಜ ಗ್ರಾ.ಪಂ.ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು ಶುಭ ಹಾರೈಸಿದರು.ವೈಧ್ಯಕೀಯ ಮತ್ತು ಸಾಮಾಜಿಕ ಸೇವೆಗೆ ಹಿರಿಯ ವೈದ್ಯ ಡಾ.ರಾಮಯ್ಯ ಭಟ್‌ರವನ್ನು ಸನ್ಮಾನಿಸಲಾಯಿತು, ಚಿತ್ರಕಲೆ ಕ್ಷೇತ್ರದ ಸಾಧಕ ಉಮೇಶ್ ಕಾಪಡ್ಕ, ರೇಡಿಯೋ ಜಾಕಿ ತಿಶೂಲ್ ಕಂಬಳ ಅವರನ್ನು ಪುರಸ್ಕರಿಸಲಾಯಿತು. ಟ್ರೈನಿಂಗ್ ಬ್ರಿಗೇಡರ್ ತೀರ್ಥಾನಂದ ಕೊಡೆಂಕಿರಿ,ವಲಯಾಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯ ಸವಿತಾರ ಮುಡೂರು, ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ,ಸಪ್ತಾಹ ನಿರ್ದೇಶಕ ವಾಸುದೇವ ಮೇಲ್ಪಾಡಿ, ಕಾರ್ಯದರ್ಶಿ ಜೀವನ್ ಮಲ್ಕಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ವೇಳೆ ಪಂಚಶ್ರೀ ವಿದ್ಯಾನಿಧಿ ವಿದ್ಯಾರ್ಥಿವೇತನವನ್ನು ಯೋಗಿತ ಡಬ್ಬಲ್‌ಕಟ್ಟೆ , ವತ್ಸಲ ಬಿ ಎqಮಂಗಲ, ಸೌಜನ್ಯ ಪಂಬೆತ್ತಾಡಿ ವಿತರಿಸಲಾಯಿತು, ಮಡಿಕೇರಿಯ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ ನಿಧಿ ವಿತರಣೆ ಜರುಗಿತು. ಕಾರ‍್ಯಕ್ರಮದಲ್ಲಿ ಶಿವಪ್ರಸಾದ್ ಹಾಲೆಮಜಲು ವೇದಿಕೆಗೆ ಆಹ್ವಾನಿಸಿದರು. ಗುರುಪ್ರಸಾದ್ ತೋಟ ಸ್ವಾಗತಿಸಿದರು ದೇವಿಪ್ರಸಾದ್ ಚಿಕ್ಮುಳಿ ಜೇಸಿವಾಣಿ ನುಡಿದರು.ಲೋಕೇಶ್ ಆಕ್ರಿಕಟ್ಟೆ, ರಾಜೇಶ್ ಕಂಬಳ, ಚಂದ್ರಶೇಖರ ಇಟ್ಯಡ್ಕ, ದುರ್ಗದಾಸ್ ಕಡ್ಲಾರ್, ಸುದರ್ಶನ ಪಟ್ಟಾಜೆ, ಜಯರಾಮ ಕಲ್ಲಾಜೆ, ಪ್ರಕಾಶ್ ಅಳ್ಪೆ ಯವರು ಅತಿಥಿಗಳನ್ನು, ಸನ್ಮಾನಿತರ, ಪುರಸ್ಕೃತರ ಸಭೆಗೆ ಪರಿಚಯಿಸಿದರು.ವಾಸುದೇವ ಮೇಲ್ಪಾಡಿ ಪ್ರಾಸ್ತಾವನೆಗೈದರು. ಜೀವನ್ ಮಲ್ಕಾಜೆ ವಂದಿಸಿದರು.
ಡ್ಯಾನ್ಸ್ ಧಮಾಕಾ : ಸಭಾ ಕಾರ‍್ಯಕ್ರಮದ ಬಳಿಕ ಅಂತರ್ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಡ್ಯಾನ್ಸ್ ಸ್ಪರ್ಧೆ ಡ್ಯಾನ್ಸ್ ಧಮಾಕಾ ನಡೆಯಿತು. ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಒಟ್ಟು ೧೨ ತಂಡಗಳು ಭಾಗವಹಿಸಿದ್ದು. ಪ್ರಶಸ್ತಿ ವಿಜೇತ ತಂಡಗಳು ಭಾಗವಹಿಸಿದ್ದು ರೋಮಾಂಚಕಾರಿ ಡ್ಯಾನ್ಸ್ ಪ್ರದರ್ಶನ ಗೊಂಡಿತ್ತು.ಹಿರಿಯರ ವಿಭಾಗದಲ್ಲಿ ಟೀಮ್ ಡಿ ಜಾಕ್ ಉಡುಪಿ (), ಟಾಪ್ ಎಂಟರ್ ಟ್ರೈನರ್ ಉಜಿರೆ (ದ್ವಿ), ಸ್ಟೆಪ್ ಮೇಕರ್ ಡ್ಯಾನ್ಸ್ ಕ್ರ್ಯೂ ಪುತ್ತೂರು (ತೃ) ,ಕಿರಿಯ ವಿಭಾಗ ಎಕ್ಸ್ಟ್ರೆಸೀ ಡ್ಯಾನ್ ಕ್ರ್ಯೂ ಸುಳ್ಯ (ಪ್ರ), ಬಿ ಆರ್ ಡಿ ಕ್ವೀನ್ ಬೆಳ್ತಂಗಡಿ (ದ್ವಿ), ಫ್ಯೂಶನ್ ಇನ್‌ಸ್ಟಿಟ್ಯೂಶನ್ ಆಫ್ ಡ್ಯಾನ್ ಸುಳ್ಯ (ತೃ) ಸ್ಥಾನ ಪಡೆದರು.
ನಿರಂತರ ಕಾರ‍್ಯಕ್ರಮಗಳು: ನ.೧೦.ರಂದು ಸಪ್ತಾಹ ಉದ್ಘಾಟನೆ ಗೊಂಡು, .೧೧.ರಂದು ‘ಮುಕ್ತ ಕೆಸರುಗದ್ದೆ ಓಟ ಹಾಗೂ ಕ್ರೀಡಾಕೂಟವು ಮುಂಜಾನೆಯಿಂದ ಪಂಜ ಪಲ್ಲೋಡಿ ತಳಮನೆ ಶ್ರೀ ದೇವಸ್ಯ ಉಕ್ಕಣ್ಣ ರೈ ಫಾರ್ಮ್ಸ್ ನಲ್ಲಿ ನಡೆಯಿತು.
ನ. ೧೨.ರಂದು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪದವಿ ಪೂರ್ವ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ‍್ಯಗಾg ನಡೆಯಿತು.ವಲಯ ತರಬೇತುದಾರರಾದ ಸವಿತಾರ ಮುಡೂರು ಮತ್ತು ಸೋಮಶೇಖರ ನೇರಳ ತರಬೇತಿ ನೀಡಿದರುನ.೧೩ರಂದು ಗುತ್ತಿಗಾರು ಹಾಲೆಮಜಲು ವೆಂಕಟೇಶ್ವರ ಸಭಾಭವದಲ್ಲಿ ಆಯೋಜನೆ- ಯಶಸ್ವಿ ಕಾರ‍್ಯಕ್ರಮಕ್ಕೆ ಯೋಜನಾಬದ್ದ ಸೂತ್ರ ಕಾರ್ಯಕ್ರಮವು ನಡೆಯಿತು. ವಲಯ ತರಬೇತುದಾರ ರಾಘವೇಂದ್ರ ಹೊಳ್ಳ ತರಬೇತಿ ನೀಡಿದರು. ನ.೧೪.ರಂದು ಪಂಜ ಗ್ರಾಮ ಪಂಚಾಯತ್ ಬಳಿಯ ಪಂಚಾಯತ್ ಸಭಾಂಗಣದಲ್ಲಿ ವೃದ್ಧಿ ?ಉದ್ಯಮಶೀಲತಾ ಪ್ರೇರಣಾ ಶಿಬಿರವು ನಡೆಯಿತು. ವಲಯ ತರಬೇತುದಾರ ಉಮೇಶ್ ನಿರ್ಮಲ್ ತರಬೇತಿ ನೀಡಿದರು.
ನ.೧೫.ರಂದು ಪಂಜ ಬಸ್ಸು ನಿಲ್ದಾಣ ಬಳಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಾಸ್‌ಪೋರ್ಟ್ ಮತ್ತು ಪಾನ್ ಕಾರ್ಡ್ ಮೇಳ ಹಾಗೂ ಅಪರಾಹ್ನ ಮಂಗಳೂರು ಕೆ ಎಂ ಸಿ ಆಸ್ಪತ್ರೆ ಜ್ಯೋತಿಯಲ್ಲಿ ರಕ್ತದಾನ ಶಿಬಿರ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.