Breaking News

ರೈತರ ಸಾಲ ಮನ್ನಾ ಮಾಡಲು ಸರಕಾರ ಬದ್ಧ : ಐವನ್ ಡಿಸೋಜಾ

Advt_Headding_Middle
Advt_Headding_Middle

ರೈತರ ಸಾಲ ಮನ್ನಾ ಮಾಡಲು ಸಮ್ಮಿಶ್ರ ಸರಕಾರ ಈಗಾಗಲೇ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಂಡಿದೆ. ಇದು ಹಂತಹಂತವಾಗಿ ಜಾರಿಯಾಗುವುದು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ. ನ. 2೦ರಂದು ಸುಳ್ಯದ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಚುನಾವಣೆಯ ಸಂದರ್ಭ ರೈತರಿಗೆ ನೀಡಿದ್ದ ಭರವಸೆಯನ್ನು ನಾವು ಉಳಿಸಿಕೊಳ್ಳುತ್ತಿದ್ದೇವೆ. ಆದರೆ ಬಿಜೆಪಿಯವರು ಸರಕಾರ ರೈತರ ಸಾಲಮನ್ನಾ ಮಾಡುತ್ತಿಲ್ಲವೆಂದು ರೈತರನ್ನು ಸರಕಾರದ ವಿರುದ್ಧ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಪರವಾಗಿ ಒಂದು ಕಾರ್ಯಕ್ರಮವನ್ನೂ ಜಾರಿಗೊಳಿಸಲಾಗದ ಬಿಜೆಪಿಯವರಿಗೆ ಸಾಲ ಮನ್ನಾ ಮಾಡಬೇಕೆಂದು ಕೇಳುವ ನೈತಿಕತೆಯೇ ಇಲ್ಲ. ಹಸಿರು ಶಾಲುಗಳನ್ನು ಹಾಕಿ ಭಾಷಣ ಮಾಡಿದ್ದು ಬಿಟ್ಟರೆ ಬಿಜೆಪಿಯವರು ಬೇರೇನೂ ಮಾಡಿಲ್ಲ. ಎಂದು ಹೇಳಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರವಿದೆ. ಅವರು ರೈತರಿಗೆ ಯಾವ ಯೋಜನೆ ತಂದಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಯಾವ ರೀತಿ ಪ್ರಯತ್ನಿಸಿದ್ದಾರೆ ಎಂದು ಐವನ್ ಪ್ರಶ್ನಿಸಿದರು.


ಜನಾಗ್ರಹ ಯಾರಿಗೆ?
ರಾಮಮಂದಿರ ವಿಚಾರದಲ್ಲಿ ಬಿಜೆಪಿಯವರು ಅಲ್ಲಲ್ಲಿ ಜನಾಗ್ರಹ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಇವರ ಜನಾಗ್ರಹ ಯಾರಿಗಾಗಿ? ಕೋರ್ಟ್ ಆದೇಶ ಪಾಲನೆಗೆ ಮೋದಿಯವರು ಹೇಳಿರುವಾಗ ಈ ರೀತಿಯ ಕಾರ್ಯಕ್ರಮ ಮಾಡುತ್ತಿದ್ದಾರೆಂದರೆ ಅದು ಮೋದಿಯವರ ವಿರುದ್ಧವೇ ಎಂದು ಅನಿಸುತ್ತಿದೆ. ಕೇಂದ್ರ ಸರಕಾರ ಬಿಜೆಪಿಯವರ ಹಿಡಿತದಲ್ಲಿದ್ದು, ಅಲ್ಲಿಂದ ರಾಮ ಮಂದಿರದ ಕುರಿತು ಆಧ್ಯಾದೇಶ ಹೊರತರಲಿ ಎಂದು ಐವನ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಕಾವು ಹೇಮನಾಥ್ ಶೆಟ್ಟಿ, ಜಯಪ್ರಕಾಶ್ ರೈ, ಎಂ. ವೆಂಕಪ್ಪ ಗೌಡ, ನಿತ್ಯಾನಂದ ಮುಂಡೋಡಿ, ಪಿ.ಎ.ಮಹಮ್ಮದ್, ಕೆ.ಂ. ಮುಸ್ತಫಾ ಎಸ್.ಸಂಶುದ್ದಿನ್, ದಿನೇಶ್ ಅಂಬೆಕಲ್ಲು, ಜೂಲಿಯಾನ ಕ್ರಾಸ್ತಾ, ರಿಯಾಝ್ ಕಟ್ಟೆಕ್ಕಾರ್, ಸಿದ್ದಿಕ್ ಕೊಕ್ಕೋ, ರಪೀಕ್ ಪಡು, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಉಮ್ಮರ್ ಕುರುಂಜಿಗುಡ್ಡೆ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.