ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ವಾರ್ಷಿಕ ಕ್ರೀಡಾಕೂಟ

Advt_Headding_Middle
Advt_Headding_Middle

ಸೋಲು ಗೆಲುವಿನ ಪಾಠ ತಿಳಿಸಿಕೊಡುವ ಕ್ರೀಡೆ ಜೀವನಕ್ಕೆ ಅತೀ ಅಗತ್ಯ. ನಿರಂತರ ಅಭ್ಯಾಸದಿಂದ ಉತ್ತಮ ಕ್ರೀಡಾಪಟುವಾಗಲು ಸಾಧ್ಯ – ಎ.ಒ. ವಸಂತ ಗೌಡ

ಸೋಲು ಗೆಲುವಿನ ಪಾಠ ತಿಳಿಸಿಕೊಡುವ ಕ್ರೀಡೆ ಜೀವನಕ್ಕೆ ಅತೀ ಅಗತ್ಯ. ನಿರಂತರ ಅಭ್ಯಾಸದಿಂದ ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನ. ೧೯ರಂದು ನಡೆದ ಮಕ್ಕಳ ವಾರ್ಷಿ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ ನೆಹರೂ ಸ್ಮಾರಕ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಕ ಎ.ಒ. ವಸಂತ ಗೌಡರವರು ಮಾತನಾಡಿದರು.
ಹಿರಿಯ ವಿದ್ಯಾರ್ಥಿ, ವಿಜಯಾ ಬ್ಯಾಂಕ್ ಉದ್ಯೋಗಿ ವರುಣ್ ಶೆಟ್ಟಿ ದ್ವಜಾರೋಹಣ ನೆರವೇರಿಸಿ ಕ್ರೀಡಾ ಸಾಧನೆ ಕೇವಲ ಶಾಲೆಗೆ ಸೀಮಿತವಾಗದೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವತಾಗಬೇಕು ಎಂದರು.
ಅರಣ್ಯ ಇಲಾಖೆಯ ಅಧಿಕಾರಿ ಸಂತೋಷ್‌ಕುಮಾರ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕ್ರೀಡೆ ಬದುಕು ನೀಡುವ ಸಾಧನವಾಗಿದೆ. ಪ್ರಯತ್ನದಿಂದ ಕ್ರೀಡೆಯ ಬದುಕಿನಲ್ಲಿ ಯಶಸ್ಸು ಇದೆ ಶುಭಹಾರೈಸಿದರು.
ವೇದಿಕೆಯಲ್ಲಿ ಪಳ್ಳತ್ತಾರು ಸ.ಹಿ.ಪ್ರಾ.ಶಾಲಾ ಮುಖ್ಯಗುರುಗಳಾದ ಶ್ರೀಮತಿ ಜಾನಕಿ, ಪ್ರಗತಿ ರಜತ ಸಂಭ್ರಮದ ಸಾಂಸ್ಕೃತಿಕ ಸಮಿತಿಯ ಮೇಲ್ವಿಚಾರಕರಾದ ಲಕ್ಷ್ಮೀನಾರಾಯಣ, ಸ್ವಯಂ ಸೇವಕಾ ಸಮಿತಿಯ ಮೇಲ್ವಿಚಾಕರ ಸುರೇಶ್ ನಾಯಕ್, ಶಾಲಾ ಸಂಚಾಲಕ ಜಯಪ್ರಸಾದ್ ರೈ ಮಾದೋಡಿ, ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರುಗಳಾದ ಗಿರಿಶಂಕರ ಸುಲಾಯ ಮತ್ತು ಸರಸ್ವತಿ ಎಂ. ಉಪಸ್ಥಿತರಿದ್ದರು. ಶ್ರೀಮತಿ ವಿವನಯ ವಿ. ಶೆಟ್ಟಿ ಗಣ್ಯರನ್ನು ಪರಿಚಯಿಸಿದರು. ಸಹಶಿಕ್ಷಕಿ ಸುಬ್ರಹ್ಮಣ್ಯ ಸಿ.ಎಕ. ಮತ್ತು ಶ್ರೀಮತಿ ಮಾನಸ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ನಿತ್ಯಶ್ರೀ ಪಿ.ಆರ್. ಮತ್ತು ಬಬಿತ ಎಂ.ಆರ್. ಪ್ರಾರ್ಥಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.