ಸಮಾಜಮುಖಿ ಸೇವೆಗಳಿಂದ ರಾಷ್ಟ್ರಾಭ್ಯುದಯ ಚಿಂತನೆಗಳ ಔನತ್ಯ :ರೋಟರಿ ಕ್ಲಬ್ ಸುಬ್ರಹ್ಮಣ್ಯಕ್ಕೆ ಅಧಿಕೃತ ಭೇಟಿ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್.ಪಿ ಅಭಿಮತ

Advt_Headding_Middle
Advt_Headding_Middle

ಸುಬ್ರಹ್ಮಣ್ಯ: ಸಮಾಜಮುಖಿ ಸೇವೆಯು ರೋಟರಿ ಕ್ಲಬ್‌ನ ಜೀವಾಳ.ಇದರ ಸದಸ್ಯರು ಪರೋಪಕಾರದ ಮೂಲಕ ಮಹದಾನಂದ ಪಡೆಯುತ್ತಾರೆ.ಪರಸ್ಪರ ಸಹಕಾರದ ಮೂಲಕ ಸಹಭಾಳ್ವೆ ತುಂಬಲು ರೋಟರಿ ಶ್ರಮ ಅನನ್ಯ. ಸಹಕಾರ ಮನೋಭಾವನೆಗಳು ಬದುಕಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ.ಸಮಾಜಮುಖಿ ಸೇವೆಗಳಿಂದ ರಾಷ್ಟ್ರಾಭ್ಯುದಯ ಚಿಂತನೆಗಳು ಔನತ್ಯವನ್ನು ಹೊಂದುತ್ತದೆ.ಹಾಗಾಗಿ ಜನರು ಪರಸ್ಪರ ಸಹಕಾರ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆ ೩೧೮೧ನ ಜಿಲ್ಲಾ ಗವರ್ನರ್ ರೋಹಿನಾಥ್.ಪಿ ಹೇಳಿದರು.
ರೋಟರಿ ಕ್ಲಬ್ ಸುಬ್ರಹ್ಮಣ್ಯಕ್ಕೆ ಅಧಿಕೃತ ಭೇಟಿ ನೀಡಿದ ವೇಳೆ ಸುಬ್ರಹ್ಮಣ್ಯದ ಮಹಮಾಯಾ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.ಪಲ್ಸ್ ಪೋಲೀಯೋ, ರಕ್ತದಾನ, ಆರೋಗ್ಯ ಸೇವೆಗಳಿಗೆ ರೋಟರಿ ಕ್ಲಬ್‌ನ ಸೇವೆ ಅನನ್ಯ.ಈ ಬಾರಿ ಪ್ರಥಮ ವಿದ್ಯಾಲಯ ಅಂಗನವಾಡಿಯ ಪ್ರಗತಿಗೆ ರೋಟರಿ ಜಿಲ್ಲೆ ೩೧೮೧ ಕಠಿಬದ್ಧವಾಗಿದೆ. ಕಂದಾಯ ಜಿಲ್ಲೆಗಳಾದ ಮಂಗಳೂರು, ಕೊಡಗು ಮತ್ತು ಮೈಸೂರನ್ನು ಒಳಗೊಂಡ ೩೧೮೧ನ ರೋಟರಿ ಸದಸ್ಯರು ಅಸಂಖ್ಯಾತ ಅಂಗನವಾಡಿಗಳ ಪ್ರಗತಿಗೆ ಕೊಡುಗೆ ನೀಡುತ್ತಾ ಬರಲಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ ವಹಿಸಿದ್ದರು. ರೋಟರಿ ಜಿಲ್ಲೆ ೩೧೮೧ನ ಪ್ರಥಮ ಮಹಿಳೆ ಬಬಿತಾ, ರೋಟರಿ ಸಹಾಯಕ ರಾಜ್ಯಪಾಲ ಆಸ್ಕರ್ ಆನಂದ್ ಮತ್ತು ರೋಟರಿ ವಲಯ ಸೇನಾನಿ ಪ್ರಮೋದ್, ಜಿಎಸ್‌ಆರ್ ಸವಣೂರು ಸೀತಾರಾಮ ರೈ, ಕ್ಲಬ್‌ನ ಕಾರ್ಯದರ್ಶಿ ರತ್ನಾಕರ.ಎಸ್, ನಿಕಟಪೂರ್ವಾಧ್ಯಕ್ಷ ವೆಂಕಟೇಶ್ ಎಚ್.ಎಲ್ ವೇದಿಕೆಯಲ್ಲಿದ್ದರು.
ಸನ್ಮಾನ:
ಸಮಾರಂಭದಲ್ಲಿ ನಿವೃತ್ತ ಚಿತ್ರಕಲಾ ಶಿಕ್ಷಕ ನಾರಾಯಣ.ಪಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕರಾದ ಅಭಿಜ್ಞಾ ರಾವ್, ಸ್ಪಂಧನಾ ಕೆ.ಯು ಅವರನ್ನು ಗೌರವಿಸಲಾಯಿತು.ವಿವಿಧ ಕೊಡುಗೆಗಳ ದಾನಿಗಳಾದ ವಿಶ್ವನಾಥ ನಡುತೋಟ,ಲೋಕೇಶ್ ಬಿ.ಎನ್, ಗೋಪಾಲ್ ಎಣ್ಣೆಮಜಲು, ತೀರ್ಥರಾಮ ಕುಳ, ಚಿದಾನಂದ ಕುಳ, ಮೋಹನದಾಸ ಎಣ್ಣೆಮಜಲು ಮತ್ತು ಸೀತಾರಾಮ ಎಣ್ಣೆಮಜಲು, ಗಿರಿಧರ್ ಸ್ಕಂಧ, ಕಾರ್ಯಪ್ಪ ಪಿ.ಎಸ್ ಅವರನ್ನು ಅಭಿನಂದಿಸಲಾಯಿತು.ಭರತನಾಟ್ಯದಲ್ಲಿ ವಿಶಿಷ್ಠ ಶ್ರೇಣಿ ಪಡೆದ ನವ್ಯಶ್ರೀ ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್ ಪಿ ಅವರನ್ನು ಕ್ಲಬ್‌ನ ವತಿಯಿಂದ ಸನ್ಮಾನಿಸಲಾಯಿತು.
ಸೇರ್ಪಡೆ:
ಸುಬ್ರಹ್ಮಣ್ಯ ರೋಟರಿ ಕ್ಲಬ್‌ಗೆ ಪ್ರಪ್ರಥಮ ಲೇಡಿ ರೊಟೇರಿಯನ್‌ಗಳಾಗಿ ಲೀಲಾ ಕುಮಾರಿ ವಿಶ್ವನಾಥ್ ಮತ್ತು ಮಾಲಿನಿ ಲೋಕೇಶ್ ಸಮಾರಂಭದಲ್ಲಿ ರೋಟರಿ ಕುಟುಂಬಕ್ಕೆ ಸೇರ್ಪಡೆಗೊಂಡರು. ಬಳಿಕ ಸಮಾರಂಭದಲ್ಲಿ ಮಂಜುನಾಥ್ ರಾವ್ ಸಂಪಾದಕತ್ವದ ರೋಟರಿ ಪತ್ರಿಕೆ ಕುಕ್ಕೆಶ್ರೀಯನ್ನು ಬಿಡುಗಡೆಗೊಳಿಸಲಾಯಿತು.
ಕೊಡುಗೆಗಳ ಹಸ್ತಾಂತರ:
ಸಮಾರಂಭದಲ್ಲಿ ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್ ದೇವರಹಳ್ಳಿ ಅಂಗನವಾಡಿಗೆ ನೀಡಿದ ಫ್ಯಾನ್ ಅನ್ನು ರೋಹಿನಾಥ್ ಅವರು ಅಂಗನವಾಡಿ ಕಾರ್ಯಕರ್ತೆ ಪದ್ಮಾ ಅವರಿಗೆ ಹಸ್ತಾಂತರಿಸಿದರು.ರೋಟರಿಯ ಸಮಾಜಮುಖಿ ಸೇವೆಗಾಗಿ ಟಿ.ಆರ್.ಎಫ್ ದೇಣಿಗೆಯ ಚೆಕ್ ಅನ್ನು ನಿರ್ದೇಶಕ ಸೀತಾರಾಮ ಎಣ್ಣೆಮಜಲು ಜಿಲ್ಲಾ ಗವರ್ನರ್‌ಗೆ ನೀಡಿದರು. ಈ ಮೊದಲು ಬಳ್ಳಕ್ಕ ಅಂಗನವಾಡಿಗೆ ಡೆಸ್ಕ್‌ಗಳನ್ನು, ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಅಂಗನವಾಡಿ ವತಿಯಿಂದ ವಿವಿಧ ರೋಟರಿ ಜಿಲ್ಲಾ ಗವರ್ನರ್‌ರನ್ನು ಎಣ್ಣೆಮಜಲು ಅಂಗನವಾಡಿಗೆ ಚಯರ್‌ಗಳನ್ನು, ಪರ್ವತಮುಖಿ ಅಂಗನವಾಡಿಗೆ ಡಸ್ಟ್‌ಬಿನ್ ಮತ್ತು ಬಕೆಟ್‌ಗಳನ್ನು, ಏನೆಕಲ್ ಅಂಗನವಾಡಿಗೆ ಹೈಬ್ರೀಡ್ ತಳಿಯ ತೆಂಗಿನ ಸಸಿಗಳನ್ನು ವಿತರಿಸಲಾಯಿತು.ಅಲ್ಲದೆ ರೋಟರಿ ಸದಸ್ಯ ರವಿ ಕಕ್ಕೆಪದವು ಬಡ ಕುಟುಂಬಕ್ಕೆ ನೀಡಿದ ಮನೆ ನಿವೇಶನವನ್ನು ರೋಟರಿ ಜಿಲ್ಲಾ ಗವರ್ನರ್ ಹಸ್ತಾಂತರಿಸಿದರು.ನಂತರ ನೂತನ ರೋಟರಿ ನಿವಾಸಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.ತದನಂತರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.
ನಿಯೋಜಿತ ಅಧ್ಯಕ್ಷ ಭರತ್ ನೆಕ್ರಾಜೆ ಸ್ವಾಗತಿಸಿದರು.ಸರೋಜಾ ಮಾಯಿಲಪ್ಪ ಪ್ರಾರ್ಥಿಸಿದರು.ವಸಂತ ಶೆಟ್ಟಿ, ವೆಂಕಟೇಶ್ ಎಚ್.ಎಲ್, ಸೀತಾರಾಮ ಎಣ್ಣೆಮಜಲು, ಲೋಕೇಶ್ ಬಿ.ಎನ್, ಪ್ರಕಾಶ್ ಸುಬ್ರಹ್ಮಣ್ಯ, ಪರಿಚಯಿಸಿದರು.ಕಾರ್ಯದರ್ಶಿ ರತ್ನಾಕರ.ಎಸ್ ವರದಿ ವಾಚಿಸಿ ವಂದಿಸಿದರು.ಪೂರ್ವ ಕಾರ್ಯದರ್ಶಿ ವಿಜಯ ಕುಮಾರ್ ಅಮೈ ಕಾರ್ಯಕ್ರಮ ನಿರೂಪಿಸಿದರು.ರಾಮಕೃಷ್ಣ ಮಲ್ಲಾರ ಮತ್ತು ಮೋಹನದಾಸ ಎಣ್ಣೆಮಜಲು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.