Breaking News

ಬೆಳ್ಳಾರೆ ಜ್ಞಾನದೀಪದ ವತಿಯಿಂದ ವಿಶ್ವ ಶೌಚಾಲಯ ದಿನ : ಸ್ವಚ್ಚತಾ ಸಿಬಂದಿಗೆ ಸನ್ಮಾನ

Advt_Headding_Middle
Advt_Headding_Middle

ವಿಶ್ವ ಶೌಚಾಲಯ ದಿನದ ಅಂಗವಾಗಿ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ, ಇಂಟರ್‍ಯಾಕ್ಟ್ ಕ್ಲಬ್ ಮತ್ತು ಬೆಳ್ಳಾರೆ ಗ್ರಾಮ ಪಂಚಾಯತ್‌ನ ಸಹಯೋಗದೊಂದಿಗೆ ವಿಶ್ವ ಶೌಚಾಲಯ ದಿನವನ್ನು ಬೆಳ್ಳಾರೆಯ ಸಾರ್ವಜನಿಕ ಶೌಚಾಲಯದಲ್ಲಿ ನಡೆಸಲಾಯಿತು. ಜ್ಞಾನದೀಪ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಶೌಚಾಲಯದ ಸುತ್ತಮುತ್ತ ಸ್ವಚ್ಚಗೊಳಿಸಿ ಶೌಚಾಲಯದ ಗೋಡೆಗಳಿಗೆ ಸ್ವಚ್ಚತಾ ಜಾಗೃತಿಯ ಭಿತ್ತಿಪತ್ರಗಳನ್ನು ಹಚ್ಚಿದರು. ಶೌಚಾಲಯವನ್ನು ಬಣ್ಣದ ಕಾಗದದ ತೋರಣಗಳಿಂದ ಶೃಂಗರಿಸಿ ವಿಶ್ವ ಶೌಚಾಲಯ ದಿನದಂದು ಶೌಚಾಲಯಕ್ಕೆ ಬರುವವರನ್ನು ಸ್ವಾಗತಿಸಿದರು. ಬೆಳ್ಳಾರೆ ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ಭವ್ಯ ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಹೊನ್ನಪ್ಪ, ರಾಜೇಂದ್ರ, ಗ್ರಂಥಪಾಲಕಿ ಶಶಿಕಲಾ, ಜ್ಞಾನದೀಪ ಸಂಸ್ಥೆಯ ಇಂಟರ್‍ಯಾಕ್ಟ್ ಕ್ಲಬ್ ಅಧ್ಯಕ್ಷೆ ಶ್ರೀನಿಧಿ ಸೇರಿದಂತೆ ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕ ಗಣೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಸ್ವಚ್ಚತಾ ಸಿಬಂದಿಗೆ ಸಮ್ಮಾನ 
ಸಾರ್ವಜನಿಕ ಶೌಚಾಲಯವೆಂದರೆ ಮೂಗು ಮುಚ್ಚಿಕೊಂಡೇ ಹೋಗುವ ಪರಿಸ್ಥಿತಿ ಬಹುತೇಕ ಎಲ್ಲಾ ಕಡೆ ಕಂಡು ಬರುತ್ತದೆ. ಶೌಚಾಲಯಕ್ಕೆ ಹೋಗುವ ಸಾರ್ವಜನಿಕರು ಶುಚಿತ್ವವನ್ನು ಕಾಪಾಡದೇ ಇರುವುದು ಇದಕ್ಕೆ ಕಾರಣ. ಆದರೆ ಬೆಳ್ಳಾರೆಯ ಸಂತೆ ಮಾರುಕಟ್ಟೆಯ ಬಳಿ ಇರುವ ಸಾರ್ವಜನಿಕ ಶೌಚಾಲಯ ಇದಕ್ಕೆ ಅಪವಾದ ಎಂಬಂತಿದೆ. ಇಲ್ಲಿಗೆ ಸ್ವಚ್ಚತಾ ಸಿಬಂದಿಯಾಗಿ ಬಾಬು ಎಂಬವರನ್ನು ಪಂಚಾಯತ್ ಕೂಲಿ ಆಧಾರದಲ್ಲಿ ನೇಮಿಸಿದ ಬಳಿಕ ಇಲ್ಲಿನ ಶೌಚಾಲಯ ಸ್ವಚ್ಚವಾಗಿದೆ. ವಿಶ್ವ ಶೌಚಾಲಯ ದಿನದ ಅಂಗವಾಗಿ ಇಲ್ಲಿನ ಸ್ವಚ್ಚತಾ ಸಿಬಂದಿ ಬಾಬು ಅವರನ್ನು ಜ್ಞಾನದೀಪ ಸಂಸ್ಥೆಯ ಪರವಾಗಿ ಪಂಚಾಯತ್ ಕಾರ್ಯದರ್ಶಿ ಭವ್ಯಾ ಸನ್ಮಾನಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.