Breaking News

ಅರಂತೋಡು: ಮಹಮ್ಮದ್ ಪೈಗಂಬರ್ ರವ ಜನ್ಮ ದಿನಾಚರಣೆ-ಈದ್ ಮಿಲಾದ್

Advt_Headding_Middle
Advt_Headding_Middle

ಬದ್ರಿಯಾ ಜುಮಾ ಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ (ರಿ.)ಅರಂತೊಡು ಇದರ ಜಂಟೀ ಆಶ್ರಯದಲ್ಲಿ ಮಹಮ್ಮದ್ ಪೈಗಂಬರ್ ರವ ಜನ್ಮ ದಿನಾಚರಣೆ ಈದ್ ಮಿಲಾದ ನ್ನು ಅರಂತೋಡಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಮದರಸ ವಿದ್ಯಾರ್ಥಿಗಳ ಕಲೋತ್ಸವ ಕಾರ್ಯಕ್ರಮವನ್ನು ಖತೀಬ್ ಇಸಾಕ್ ಬಾಖವಿ ಉದ್ಘಾಟಿಸಿದರು.ದಫ್, ಬುರ್ಧಾಮಜಿಲಿಸ್ ವಿವಿಧ ಸ್ಫರ್ಧೆಗಳು ಆಕರ್ಷಣೆಯಾಗಿತ್ತು.ವಿಜೇತರಿಗೆ ಬಹುಮಾನವನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಎಸೋಸಿಯೇಶನ್ ಗೌರವಾಧ್ಯಕ್ಷ ಟಿ.ಎಂ ಶಹೀದ್ ವಿತರಿಸಿದರು. ಅಧ್ಯಕ್ಷತೆಯನ್ನು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ನ ಅಧ್ಯಕ್ಷ ಎಸ್ ಎಂ ಅಬ್ದುಲ್ ಮಜೀದ್ ವಹಿಸಿದರು. ಅತಿಥಿಗಳಾಗಿ ಜಮಾಅತ್ ಅಧ್ಯಕ್ಷ ಅಬ್ದುಲ ಖಾದರ್ ಪಠೇಲ್, ಮಾಜಿ ಅದ್ಯಕ್ಷರುಗಳಾದ ಎ ಅಹಮ್ಮದ್ ಕುಂಞ,ಹಾಜಿ ಟಿ ಎಂ ಬಾಬಾ ತೆಕ್ಕಿಲ್, ಹಾಜಿ ಎಸ್ ಇ ಮಹಮ್ಮದ್ , ಹಾಜಿ ಕೆ ಎಂ ಮಹಮ್ಮದ್ ,ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ದುಬೈ ಸಮಿತಿ ಸದಸ್ಯ ಬದರುದ್ದೀನ್ ಪಠೇಲ್ ಹಾಗೂ ಕೆ ಎಂ ಅನ್ವಾರ್, ಸೌದಿ ಸಮಿತಿಯ ಹಬೀಬ್ ಗುಂಡಿ, ಹನೀಫ್ ಕುನ್ನಿಲ್ ಭಾಗವಹಿಸಿದರು.ವೇದಿಕೆಯಲ್ಲಿ ಜಮಾಅತ್ ಕಾರ್ಯದರ್ಶಿ ಅಶ್ರಫ್ ಗುಂಡಿ, ಸಂಶುದ್ದೀನ್ ಮುಸ್ಲಿಯಾರ್, ಕೆ ಎಂ ಮೂಸಾನ್, ಹಾಜಿ ಅಜಾರುದ್ದೀನ್ ಉಪಸ್ಥಿತರಿದ್ದರು. ದುಬೈ ಸಮಿತಿ ಹಾಗೂ ಕೆ ಎಂ ಅನ್ವಾರ್ ಬಹುಮಾನವನ್ನು ಪ್ರಾಯೋಜಿಸಿದ್ದರು.ದಫ್ ಉಸ್ಥಾದ್ ನವಾಜ್ ದಾರಿಮಿಯವರನ್ನು ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯದರ್ಶಿ ಫಸೀಲು ಸ್ವಾಗತಿಸಿದರು.ಸದರ್ ನವಾಜ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.