ಮನುಕುಲವನ್ನು ಗೌರವಿಸಿ ಪ್ರವಾದಿಯವರ ನೈಜ ಅನುಯಾಯಿಗಳಾಗಿ: ಸಖಾಫಿ

Advt_Headding_Middle
Advt_Headding_Middle

ವಿಶ್ವಕ್ಕೆ ಶಾಂತಿ, ಸಹೋದರತೆ, ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಿದ ಪ್ರವಾದಿ ಮಹಮ್ಮದ್ ಮುಸ್ತಫ(ಸ.ಅ.) ರವರ ಚರ್ಯೆಯನ್ನು ಅನುಸರಿಸಿದರೆ ಮಾತ್ರ ನೈಜ ಮುಸಲ್ಮಾನನಾಗಲು ಸಾಧ್ಯ. ಯಾವುದೇ ನಿಷ್ಠಾವಂತೆ ಧರ್ಮ ಅನುಯಾಯಿ ಅಶಾಂತಿ, ಹಿಂಸೆಗಳಿಗೆ ಪ್ರೋತ್ಸಾಹಿಸುವುದಿಲ್ಲ. ಬದಲಾಗಿ ಜಾತಿ ಮತ ಬೇಧವಿಲ್ಲದೇ ಎಲ್ಲರನ್ನೂ ಗೌರವಿಸಿ ಬಡವರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ಪ್ರವಾದಿಯವರು ತೋರಿಸಿಕೊಟ್ಟ ಆದರ್ಶ ಎಂದು ಗಾಂಧಿನಗರ ಮುಹಿಯುದ್ದೀನ್ ಜುಮ್ಮಾ ಮಸೀದಿ ಖತೀಬರಾದ ಅಲ್‌ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಹೇಳಿದರು.
ಪ್ರವಾದಿಯವರ ೧೪೯೩ನೇ ಜನ್ಮದಿನಾಚರಣೆಯ ಈದ್ ಮಿಲಾದ್ ಸಂದೇಶವನ್ನು ನೀಡಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಮಸೀದಿ ಉಪಾಧ್ಯಕ್ಷರಾದ ಹಾಜಿ ಆದಂ ಕಮ್ಮಾಡಿ ವಹಿಸಿದ್ದರು. ಕುಂಞಿಕೋಯ ತಂಙಳ್ ಸಅದಿ ದುವಾ ನೆರವೇರಿಸಿದರು. ವೇದಿಕೆಯಲ್ಲಿ ಗಾಂಧೀನಗರ ಜಮಾಅತ್ ಪದಾಧಿಕಾರಿಗಳಾದ ಹಾಜಿ ಅಬ್ಬಾಸ್ ಕಟ್ಟೆಕ್ಕಾರ್‍ಸ್, ಹಾಜಿ ಐ ಇಸ್ಮಾಯಿಲ್, ಹಮೀದ್ ಬೀಜಕೊಚ್ಚಿ, ಕೆ.ಎಂ. ಮುಸ್ತಫ ಜನತ ಮೊದಲಾದವರು ಉಪಸ್ಥಿತರಿದ್ದರು. ಮದ್ರಸಾ ಮುಖ್ಯ ಗುರುಗಳಾದ ಇಬ್ರಾಹಿಂ ಸಖಾಫಿ ಪುಂಡೂರ್ ಸ್ವಾಗತಿಸಿದರು. ಮುಅದ್ದಿನ್ ಉಸ್ತಾದರಾದ ಶಿಹಾಬುದ್ದೀನ್ ಬದ್ರಿ ಕುರ್‌ಆನ್ ಪಠಿಸಿದರು. ಶೌಕತ್‌ಅಲಿ ಅಮಾನಿ ವಂದಿಸಿದರು. ಲತೀಫ್ ಸಖಾಫಿ ಗೂನಡ್ಕ, ಅಬ್ದುಲ್ ಖಾದರ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.