Breaking News

ಬಳ್ಪ : ಶ್ರೀ ದುರ್ಗಾ ಧನ್ವಂತರೀ ದೇವಸ್ಥಾನದಲ್ಲಿ ಧನ್ವಂತರೀ ಜಯಂತಿ

Advt_Headding_Middle
Advt_Headding_Middle

ಬಳ್ಪ ಗ್ರಾಮದ ವಿಷ್ಣುಮಂಗಲದಲ್ಲಿ ನೆಲೆಸಿರುವ ಪುರಾತನವಾದ ಶ್ರೀ ದುರ್ಗಾ ಧನ್ವಂತರೀ ದೇವಸ್ಥಾನದಲ್ಲಿ ನ.೫ರಂದು ಶ್ರೀ ಧನ್ವಂತರೀ ಜಯಂತಿಯನ್ನು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಆಚರಿಸಲಾಯಿತು.

ವೇದಮೂರ್ತಿ ಮನೋಜಕುಮಾರ ಭಟ್ಟ ಕಾಯಾರರವರು ಪೂಜೆ ನೆರವೇರಿಸಿ, ದೇವಸ್ಥಾನದ ಧರ್ಮದರ್ಶಿ ಸುಬ್ರಹ್ಮಣ್ಯ ಭಟ್ಟರು ಪ್ರಸಾದ ವಿತರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಕೃಷ್ಣಮೂರ್ತಿ ಪಂಜ ಇವರು ಶ್ರೀ ಧನ್ವಂತರಿಯ ಮಹಾತ್ಮೆಯನ್ನು ವರ್ಣಿಸುತ್ತಾ ಔಷಧಿಯು ಶರೀರದಲ್ಲಿ ಫಲಿತವಾಗಲು ಶ್ರೀ ಧನ್ವಂತರೀ ದೇವರ ಅನುಗ್ರಹ ಅಗತ್ಯ ಎಂದು ಹೇಳಿದರು. ಮವ್ವಾರು ಗಣೇಶ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತ ಸಮಿತಿ ಅಧ್ಯಕ್ಷ ನೇಮಿಚಂದ್ರ ಎಣ್ಣೆಮಜಲು ಧನ್ಯವಾದ ಮಾಡಿದರು. ನಂತರ ಭೋಜನ ಪ್ರಸಾದ ವಿತರಿಸಲಾಯಿತು. ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಪಾದೆ, ಕಾರ್ಯದರ್ಶಿ ಚೆನ್ನಕೇಶವ ಭಟ್, ಸದಸ್ಯರಾದ ಜಯಶೀಲ ಕುಳ, ಮೋನಪ್ಪ, ವೀರಪ್ಪ ಗೌಡ, ಪುಟ್ಟಣ್ಣ ನಾಳ, ಚಿನ್ನಪ್ಪ ಪೂಜಾರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.