ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ : ಡಿ. 5 ರಿಂದ 9 ರವರೆಗೆ ಪ್ರಗತಿ ರಜತ ಸಂಭ್ರಮ

Advt_Headding_Middle
Advt_Headding_Middle


ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ರಜತ ಸಂಭ್ರಮ ಕಾರ್ಯಕ್ರಮಗಳು ಡಿ. 5 ರಿಂದ 9ರವರೆಗೆ ನಡೆಯಲಿದೆ. ಶಾಲಾ ಆಡಳಿತಮಂಡಳಿ ಅಧ್ಯಕ್ಷ ಜಯಸೂರ್ಯ ರೈ ಮಾದೋಡಿ ಮತ್ತು ಬೆಳ್ಳಿಹಬ್ಬ ವರ್ಷಾಚರಣೆ ಸಮಿತಿ ಅಧ್ಯಕ್ಷ ರಮೇಶ್ ಬೆಟ್ಟ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.


ಡಿ. 5  ರಂದು ನಗರ ಮೆರವಣಿಗೆ ಹಾಗೂ ಶಾಶ್ವತ ಯೋಜನೆಗಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸೀತಮ್ಮ ಖಂಡಿಗ, ಬೆಳಂದೂರು ಗ್ರಾ.ಪಂ. ಶ್ರೀಮತಿ ಉಮೇಶ್ವರಿ ಅಗಳಿ, ದ.ಕ.ಜಿ.ಪಂ. ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಸಂಸದ ನಳಿನ್‌ಕುಮಾರ್ ಕಟೀಲ್, ದ.ಕ.ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ ಕಾವು, ಪುತ್ತೂರು ತಾ.ಪಂ. ಅಧ್ಯಕ್ಷೆ ಶ್ರೀಮತಿ ಭವಾನಿ ಚಿದಾನಂದ, ಪುತ್ತೂರು ತಾ.ಪಂ. ಉಪಾಧ್ಯಕ್ಷೆ ಕು. ರಾಜೇಶ್ವರಿ ಕೆ., ಬೆಳಂದೂರು ಜಿ.ಪಂ. ಸದಸ್ಯೆ ಶ್ರೀಮತಿ ಪ್ರಮೀಳಾ ಜನಾರ್ದನ ಆಚಾರ್ಯ, ತಾ.ಪಂ. ಸದಸ್ಯೆ ಶ್ರೀಮತಿ ಲಲಿತಾ ಈಶ್ವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವೈ ಶಿವರಾಮಯ್ಯ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಕನ್ಯಾ ಭಾಗವಹಿಸಲಿದ್ದಾರೆ.
ಅಪರಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ ಸುಧೆ ನಡೆಯಲಿದೆ.

ಸಂಜೆ ಗಂ. 6 ರಿಂದ ಸಭಾ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕರಮ ನಡೆಯಲಿದ್ದು, ಇದರಲ್ಲಿ ಪುತ್ತೂರು ಅಮೆಚ್ಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಚಂದ್ರಹಾಸ ರೈ, ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಶನ್‌ನ ಚಯರ್‌ಮೆನ್ ರಾಕೇಶ್ ಮಲ್ಲಿ, ಉದ್ಯಮಿ ಪ್ರಸನ್ನ ಶೆಟ್ಟಿ ಪುತ್ತೂರು, ಯುವ ಉದ್ಯಮಿ ಅಜಿತ್ ಶೆಟ್ಟಿ, ಪುತ್ತೂರು ಹಿರಿಯರ ಕ್ರೀಡಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಮುದ್ವ ಭಾಗವಹಿಸಲಿದ್ದಾರೆ. ಸಂಜೆ ಗಂ. 7 ರಿಂದ ತುಳು ದಾದಂದ್ ಪನೋಡು ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ. 6 ರಂದು ಅ. ಗಂ.2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂ. 5 ರಿಂದ ಭರತನಾಟ್ಯ ಕಾರ್ಯಕ್ರಮ ನೃತ್ಯಧಾರೆ ನಡೆಯಲಿದೆ. ನಂತರ ಯೋಧ ನಮನ ಕಾರ್ಯಕ್ರಮ ಪ್ರಗತಿ ವಿದ್ಯಾಸಂಸ್ಥೆಯ ಪೋಷಕ ಮತ್ತು ಹಿರಿಯ ವಿದ್ಯಾರ್ಥಿ ವೀರ ಸೇನಾನಿಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು ಮಾದೋಡಿ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜಯಪ್ರಕಾಶ್ ಹೆಗ್ಡೆ ಕೆ., ಚಲನಚಿತ್ರ ನಾಯಕ ನಟ ಶಿವಧ್ವಜ್ ಉಪಸ್ಥಿತರಿರುವರು. ವಿಶೇಷ ಆಕರ್ಷಣೆಯಾಗಿ ಪ್ರತ್ಯಕ್ಷ ವರ್ಣಚಿತ್ರ ರಚನೆ, ಸಂಜೆ 7 ರಿಂದ ಸಂಗೀತ ಸಂಭ್ರಮ, ಸಂಜೆ ಗಂ. 8-3 ೦ರಿಂದ ಯಕ್ಷಗಾನ ನೃತ್ಯರೂಪಕ ನಡೆಯಲಿದೆ.

ಡಿ. 7 ರಂದು ಸಂಜೆ ಕಲಾ ಉತ್ಥಾನ, ಕಲಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕ ಎಸ್.ಅಂಗಾರ, ಚಲನಚಿತ್ರ ನಿರ್ದೇಶಕಕ ನಾಗಾಭರಣ ಟಿ.ಎಸ್., ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್, ದೆಹಲಿ ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಮುಖ್ಯ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ, ಎಂ. ರವಿ ಶೆಟ್ಟಿ, ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಸತೀಶ ಶೆಟ್ಟಿ ಪಟ್ಲ, ಯಕ್ಷಗಾನ ಕಲಾವಿದೆ ಕು. ಬಿಂದಿಯ ಶೆಟ್ಟಿ ಸುರತ್ಕಲ್ ಉಪಸ್ಥಿತರಿರುವರು. ಸಂಜೆ ಗಂ. 7 ರಿಂದ ಯಕ್ಷ ನೃತ್ಯ ವೈಭವ ನಡೆಯಲಿದೆ.
ಡಿ. 8ರಂದು ಅ. ಗಂ. 2ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಾತೃವಂದನಾ, ಸಂಜೆ 5ರಿಂದ ಸಭಾ ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರವರು ಆಶೀರ್ವಚನ ನೀಡಲಿದ್ದಾರೆ. ಪ್ರಗತಿ ಶಾಲಾ ಸಂಚಾಲಕರ ಮಾತೃಶ್ರೀ ಶ್ರೀಮತಿ ಲಕ್ಷ್ಮೀ ಕೆ. ರೈ ಮಾದೋಡಿ, ಪತ್ರಕರ್ತೆ ಶ್ರೀಮತಿ ವಿಜಯಲಕ್ಷ್ಮೀ ಶಿಬರೂರು ಭಾಗವಹಿಸಲಿದ್ದಾರೆ. ಸಂಜೆ ಗಂ. 7 ರಿಂದ ತುಳು ಹಾಸ್ಯಮಯ ನಾಟಕ ನಿಕ್ಕ್ ಗೊತ್ತುಂಡಾ ನಡೆಯಲಿದೆ.
ಡಿ. 9 ರಂದು ಬೆ. ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಜಿಲ್ಲಾ ಸಂಸದೆ ಕು. ಶೋಭಾ ಕರಂದ್ಲಾಜೆ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇ ಗೌಡ, ಸುಳ್ಯ ತಾ.ಪಂ. ಸದಸ್ಯ ಅಬ್ದುಲ್ ಗಫೂರ್ , ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ. ಅದ್ಯಕ್ಷ ನಿತ್ಯಾನಂದ ಮುಂಡೋಡಿ, ಉದ್ಯಮಿ ಜಗನ್ನಾಥ ಶೆಟ್ಟಿ ತಡಗಜೆ, ವಿಜಯಾ ಬ್ಯಾಂಕ್ ನಿವೃತ್ತ ಸಹಾಯಕ ಮಹಾಪ್ರಬಂಧಕ ಪಿ.ಎ.ಶೆಟ್ಟಿ ತಂಟೆಪ್ಪಾಡಿ, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ನೋಲ್ಮೆ ರವೀಂದ್ರನಾಥ ರೈ, ಉತ್ತಮ್‌ಕುಮಾರ್ ಮೇಲಾಂಟ, ಶ್ರೀಧರ್ ರೈ ಮಾದೋಡಿ, ಶಿವಪ್ರಸಾದ್ ಆಳ್ವ ಮೀಪಾಲು, ಶಿವಪ್ರಸಾದ್ ಶೆಟ್ಟಿ ಕಿನಾರ, ಅಬ್ದುಲ್ ರಹಿಮಾನ್ ಬೈತಡ್ಕ ಭಾಗವಹಿಸಿದ್ದಾರೆ. ಅ. 2ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ೬ರಿಂದ ರೈತ ಅಭಿನಂದನಾ, ಸಭಾ ಕಾರ್ಯಕ್ರಮದಲ್ಲಿ ಮುರುಳ್ಯ ಕ್ಷೀರಾ ಎಂಟರ್‌ಪ್ರೈಸಸ್‌ನ ಮಿಲ್ಕ್ ಮಾಸ್ಟರ್ ರಾಘವ ಗೌಡ ಪಳ್ಳತ್ತಡ್ಕ, ಕೃಷಿ ವಿಜ್ಞಾನಿ ಡಾ. ವಸಂತ ಕುಮಾರ್ ತಿಮಕಾಪುರ ಉಪಸ್ಥಿತರಿರುವರು. ಸಂ. 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ, ನೃತ್ಯ ವೈಭವ ನಡೆಯಲಿದೆ.
ಪ್ರಗತಿ ಶಾಲೆಯ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಪಠ್ತದ ಜೊತೆಗೆ ಯೋ, ಕರಾಟೆ, ಭಜನೆಗಳನ್ನು ಕಲಿಸಿಕೊಡಲಾಗುತ್ತದೆ. ರಾಜ್ಯದಲ್ಲೇ ಕನ್ನಡ ಮಾಧ್ಯಮದಲ್ಲಿ ಈ ಶಾಲೆ 11 ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೂ ಈವರೆಗೆ ಸರಕಾರದಿಂದ ಯಾವುದೇ ಮೂಲಭೂತ ಸೌಕರ್ಯಗಳು ಶಾಲೆಗೆ ಬಂದಿಲ್ಲ. ಶಾಲಾ ರಸ್ತೆಯು ಹದಗೆಟ್ಟಿದೆ. ರೈಲ್ವೇ ಅಂಡರ್ ಪಾಸ್ ರಸ್ತೆಯ ಬದಿಯಲ್ಲಿ ತಡೆಗೋಡೆ ಅಗತ್ಯವಿದೆ ಎಂದು ಅವರು ಹೇಳಿದರು. ರಜತ ಸಂಭ್ರಮದ ಅಂಗವಾಗಿ 25  ದಿನಗಳಲ್ಲಿ 34  ಕರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದು ಅವರು ಹೇಳಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ, ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಕೋಶಾಧಿಕಾರಿ ಉದಯ ರೈ ಮಾದೋಡಿ, ಸದಸ್ಯರಾದ ನಾಗೇಶ್ ರೈ ಮಾಳಗುತ್ತು, ಶಿಕ್ಷಕ ರಕ್ಷಕ ಸಂಘದ ಸ್ಥಾಪಕಾಧ್ಯಕ್ಷ ಎಂಜೀರು ಪದ್ಮನಾಭ ರೈ, ಬೆಳ್ಳಿಹಬ್ಬ ಸಮಿತಿ ಪ್ರ.ಕಾರ್ಯದರ್ಶಿ ಸುಜಿತ್ ರೈ ಪಟ್ಟೆ, ಕೋಶಾಧಿಕಾರಿ ಜನಾರ್ದನ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುನಿಲ್ ರೈ ಬಳ್ಕಾಡಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಆಂಗ್ಲಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಗಿರಿಶಂಕರ ಸುಲಾಯ, ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.