ಕಾಣಿಯೂರು: ಪ್ರಗತಿ ಹಬ್ಬ ಪ್ರಚಾರ ತೇರು ಉದ್ಘಾಟನೆ

Advt_Headding_Middle
Advt_Headding_Middle


ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನ. 15 ರಿಂದ ಡಿ. 9 ರವರೆಗೆ ನಡೆಯುವ ಪ್ರಗತಿ ರಜತ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಎಲ್ಲರ ಮನೆಗಳಿಗೆ ಆಮಂತ್ರಣ ತಲುಪುವ ಉದ್ಧೇಶ ಮತ್ತು ಕಾರ್ಯಕ್ರಮ ಯಶಸ್ಸಿನ ಬಗ್ಗೆ ಪ್ರಚಾರ ರಥ (ತೇರು) ಉದ್ಘಾಟನೆಗೊಂಡಿತು.

ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ ತುಳುನಾಡಿನ ಸಂಸ್ಕೃತಿಯಂತೆ ತೆಂಗಿನಕಾಯಿ ಒಡೆದು, ಭೂಮಿಗೆ ನಮಸ್ಕಾರ ಮಾಡಿ, ತುಳುನಾಡ ದೇವರು ದೈವಗಳಿಗೆ ಪ್ರಾರ್ಥನೆಯ ಮೂಲಕ ಸ್ಮರಿಸಿ ಜಾಥಾ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಸಂಚಾಲಕರು, ಮೇಲ್ವಿಚಾರಕರು, ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಧಶಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಬೆಟ್ಟ, ಪ್ರ.ಕಾರ್ಯದರ್ಶಿ ಸುಜಿತ್ ರೈ ಪಟ್ಟೆ, ಹಾಗೂ ಎಲ್ಲಾ ಪದಾಧಿಕಾರಿಗಳು, ಶಿಕ್ಷಕ ವೃಂದ, ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಹಾಗೂ ಊರವರು ಉಪಸ್ಥಿತರಿದ್ದರು.
ಪ್ರಚಾರ ರಥವು ಪುರುಷರಕಟ್ಟೆ, ತಿಂಗಳಾಡಿ, ಮಾಡಾವು ಹಾಗೂ ಇತರ ಹಳ್ಳಿ ಪ್ರದೇಶಗಳಿಗೆ ತೆರಳಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.