ಕನ್ನಡಾಂಬೆ ಜಾಗೃತಿ ಜ್ಯೋತಿಯಾತ್ರೋತ್ಸವ

Advt_Headding_Middle
Advt_Headding_Middle

ಕನ್ನಡ ಶುದ್ಧೀಕರಣ ವೇದಿಕೆ ಬೆಂಗಳೂರು ಇದರ ವತಿಯಿಂದ ಕನ್ನಡಾಂಬೆ ಜಾಗೃತಿ ಜ್ಯೋತಿಯಾತ್ರೋತ್ಸವವು ಪ್ರಾರಂಭಗೊಂಡಿದ್ದು ನ.೨೨ ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಆಗಮಿಸಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ಶುದ್ಧೀಕರಣ ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಡಾ.ಹೆಚ್.ಕೃಷ್ಣಪ್ಪ ಗುಣಸಾಗರ್ ಮಾತನಾಡಿ ಕನ್ನಡ ನುಡಿ ಸಾಹಿತ್ಯ ಕನ್ನಡಕ್ಕೆ ಎಲ್ಲಿ ಕುತ್ತು ಬರುತ್ತದೊ ಅದನ್ನು ಸರಿಪಡಿಸುವ ಮತ್ತು ಕನ್ನಡವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಾವು ಗಡಿ ಪ್ರದೇಶಗಳಲ್ಲಿ ಯಾತ್ರೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿ ಜನರಲ್ಲಿ ಜಾತಿ ಅಭಿಮಾನಕ್ಕಿಂತ ಭಾಷಾಭಿಮಾನ ಹೆಚ್ಚಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ಶುದ್ಧಿಕರಣ ವೇದಿಕೆಯ ರಾಜ್ಯ ಉಪಾಧ್ಯಕ್ಷ ಶಿವರಾಜ್,ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಸದಸ್ಯ ರಮೇಶ ಬೈಪಡಿತ್ತಾಯ ಉಪಸ್ಥಿತರಿದ್ದರು.ಕಲಾತಂಡದ ನಾಯಕ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.