ಸಂವೇದನಾಶೀಲ ನಾಯಕತ್ವ ವರ್ತಮಾನದ ಅಗತ್ಯ : ಕೆ.ಎಸ್.ಎಸ್. ಕಾಲೇಜು ಎನ್,ಎಸ್,ಎಸ್. ಶಿಬಿರದಲ್ಲಿ ದುರ್ಗಾಕುಮಾರ್ ನಾಯರ್‌ಕೆರೆ

Advt_Headding_Middle
Advt_Headding_Middle

ಸಮಾಜದ ಅಗತ್ಯಗಳನ್ನು ಗಮನಿಸುವ ಸಂವೇದನಾಶೀಲ ನಾಯಕತ್ವ ವರ್ತಮಾನ ಸಂದರ್ಭದ ಅಗತ್ಯವಾಗಿದೆ ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಹೇಳಿದರು.ಐನೆಕಿದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಹ್ಮಣೇಶ್ವರ ಮಹಾ ವಿದ್ಯಾಲಯದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ ನಾಯಕತ್ವ ಮತ್ತು ಸೃಜನಶೀಲತೆ’ ಕುರಿತು ಮಾತನಾಡಿದರು.ಬ್ಯಾನರ್‌ಗಳು, ಫ್ಲೆಕ್ಸ್‌ಗಳು, ಭಾಷಣಗಳು, ಫೇಸ್ ಬುಕ್‌ಗಳಿಂದ ನಾಯಕರು ಸೃಷ್ಟಿಯಾಗುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ನಾಯಕತ್ವದ ಆಯಸ್ಸು ಕಡಿಮೆ. ನಿಜವಾದ ನಾಯಕ ಜನಸಮೂಹದಿಂದ ಎದ್ದು ಬರುತ್ತಾನೆ. ಎಲ್ಲರನ್ನು ಜತೆಯಾಗಿ ಕರೆದೊಯ್ಯುತ್ತಾನೆ ಎಂದು ಹೇಳಿದ ದುರ್ಗಾಕುಮಾರ್ ಅವರು ನಾಯಕತ್ವದ ಅಗತ್ಯ ಮತ್ತು ಗುಣಗಳ ಬಗ್ಗೆ ಸೋದಾಹರಣವಾಗಿ ವಿವರಿಸಿದರು.ಮುಖ್ಯ ಅತಿಥಿಗಳಾಗಿದ್ದ ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಬಿಳಿಮಲೆ ಮಾತನಾಡಿ, ಯೋಗ್ಯ ನಾಯಕತ್ವದ ಯುವ ಸಮೂಹ ಸಮಾಜಕ್ಕೆ ಸ್ಪಂದನೆ ನೀಡಬೇಕು. ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.ವಾರ್ಷಿಕ ವಿಶೇಷ ಶಿಬಿರದ ಶಿಬಿರಾಧಿಕಾರಿಗಳಾದ ಪ್ರೊ. ಶಿವಪ್ರಸಾದ್ ಎಸ್. ಮತ್ತು ಪ್ರೊ. ಪುಷ್ಪಾ ದೋಣಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೌಮ್ಯ ಮತ್ತು ದಿವ್ಯ ಪ್ರಾರ್ಥಿಸಿದರು. ನವ್ಯಶ್ರೀ ಕೆ. ಸ್ವಾಗತಿಸಿ ಜಯಶ್ರಿ ಪಿ. ವಂದಿಸಿದರು. ಪೂಜಾ ಪಿ. ಆರ್. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.