ಪ್ರಗತಿಪರ ಕೃಷಿಕ ಸೂರೆಂಗಿ ನಾರಾಯಣಯ್ಯ ನಿಧನ

Advt_Headding_Middle
Advt_Headding_Middle

ಪ್ರಗತಿಪರ ಕೃಷಿಕ ಸೂರೆಂಗಿ ನಾರಾಯಣಯ್ಯ ನ. ೨೩ರಂದು ವಿಧಿವಶರಾದರು. ಇವರಿಗೆ ೯೪ ವರ್ಷ ವಯಸ್ಸಾಗಿತ್ತು. ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಕಳಂಜ ಯುವಕ ಮಂಡಲದ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಆಸುಪಾಸಿನಲ್ಲಿ ಡೀಸಿಲ್ ಪಂಪ್ ಖರೀದಿಸಿದ ಪ್ರಥಮ ಗ್ರಾಹಕರಾಗಿದ್ದರೆನ್ನಲಾಗಿದೆ. ಅಡಿಕೆ, ತೆಂಗು ಕೃಷಿಯೊಂದಿಗೆ ವೆನಿಲ್ಲಾ, ಲವಂಗ, ಜಾಯಿಕಾಯಿಯನ್ನು ಪರ್ಯಾಯ ಬೆಳೆಯಾಗಿ ಬೆಳೆದಿದ್ದರು. ಸಾಯಿಬಾಬರ ಪರಮ ಭಕ್ತ ರಾಗಿದ್ದ ನಾರಾಯಣಯ್ಯರವರು ಸಾಯಿಬಾಬಾರ ಹುಟ್ಟುಹಬ್ಬದ ದಿನದಂತೆ ನಿಧನರಾಗಿರುವು ವಿಶೇಷವಾಗಿದೆ. ಮೃತರು ಪುತ್ರರಾದ ಕೃಷ್ಣಕುಮಾರ್, ಬಾಲಕೃಷ್ಣ ಸೂರೆಂಗಿ, ಸೀತಾರಾಮ ಹಾಗೂ ಓರ್ವ ಪುತ್ರಿ ಶ್ರೀಮತಿ ಸುಧಾ ಗಣೇಶ್ ಭಟ್ ಬೆಳ್ಳಾರೆಯವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.