ಅಡ್ಡಂತ್ತಡ್ಕ ದೇರಣ್ಣ ಗೌಡರ ಮೇಲಿನ ಹಲ್ಲೆಗೆ ಮಾಜಿ ಸೈನಿಕರ ಸಂಘ ಖಂಡನೆ

Advt_Headding_Middle
Advt_Headding_Middle

ಸುಳ್ಯ ಎಪಿಎಂಸಿ ಅಧ್ಯಕ್ಷ ಹಾಗೂ ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿರುವ ಅಡ್ಡಂತ್ತಡ್ಕ ದೇರಣ್ಣ ಗೌಡರ ಮೇಲೆ ನಾಗೇಶ್ ಚೌಟಾಜೆ ಎಂಬವರಿಂದ ನಡೆದ ಹಲ್ಲೆಯನ್ನು ಮಾಜಿ ಸೈನಿಕರ ಸಂಘ ಖಂಡಿಸಿದೆ.


ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಮೋನಪ್ಪ ಗೌಡ ಅಡ್ಕಬಳೆಯವರು, ಅಡ್ಡಂತ್ತಡ್ಕ ದೇರಣ್ಣ ಗೌಡರು 1995 ರಲ್ಲಿ ಮಂಡೆಕೋಲು ಗ್ರಾ.ಪಂ. ಸದಸ್ಯರಾಗಿದ್ದಾಗ ಪೇರಾಲಿನಲ್ಲಿ 2.31 ಎಕ್ರೆ ಸ್ಥಳವನ್ನು ಸಾರ್ವಜನಿಕ ಉದ್ಧೇಶಕ್ಕೆ ಮೀಸಲಿರಿಸಲು ಪ್ರಯತ್ನ ನಡೆಸಿ ಅಧಿಕಾರಿಗಳಿಂದ ಆದೇಶ ಮಾಡಿಸಿದ್ದರು. ಆದರೆ ಬಳಿಕ 2002ರಲ್ಲಿ ನಾಗೇಶ್ ಚೌಟಾಜೆಯವರ ತಾಯಿ ದೇವಕಿಯವರ ಹೆಸರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾಗಿದ್ದು, ಇದನ್ನು ಆಕ್ಷೇಪಿಸಿ ದೇರಣ್ಣ ಗೌಡರು ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ನ. ೨೦ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ತನಿಖೆಗೆ ಹೋಗಿದ್ದರು. ಈ ಸಂದರ್ಭ ಅಲ್ಲಿಗೆ ಹೋಗಿದ್ದ ದೇರಣ್ಣ ಗೌಡರ ಮೇಲೆ ನಾಗೇಶರು ದೊಣ್ಣೆಯಿಂದ ಹೊಡೆದು ಕೊಲೆ ಯತ್ನ ನಡೆಸಿದ್ದಾರೆ. ದೇರಣ್ಣ ಗೌಡರು ಸುಳ್ಯ ಪೊಲೀಸ್ ಠಾನೆಯಲ್ಲಿ ದುರು ಸಲ್ಲಿಸಿದ್ದರೂ, ಪೊಲೀಸ್ ಇಲಾಖೆ ನಿಧಾನ ಧೋರಣೆ ಅನುಸರಿಸುತ್ತಿದ್ದು, ಆರೋಪಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಲ್ಲೆ ಕೃತ್ಯ ಖಂಡನೀಯ. ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ದೇಶಸೇವೆ ಮಾಡಿದ ಮಾಜಿ ಯೋಧರಿಗೆ ಪೊಲೀಸರು ಸೂಕ್ತ ರಕ್ಷಣೆ ಒದಗಿಸದೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸೀತಾರಾಮ ಎಂ.ಜಿ., ಸದಸ್ಯರಾದ ಕೆ.ಪಿ.ಜಗದೀಶ್, ಗುರುಪ್ರಸಾದ್ ರೈ, ರೋಹಿತ್, ಕೃಷ್ಣಪ್ಪ, ಈಶ್ವರ ಗೌಡ, ಹೊನ್ನಪ್ಪ ಪಾಲ್ತಾಡು, ಉತ್ತಪ್ಪ ಮುಂಡೋಡಿ, ಚೆಂಗಪ್ಪ ಅತ್ಯಾಡಿ, ಬಾಲಚಂದ್ರ ಕೊಳಂಗಾಯ, ಚೆನ್ನಪ್ಪ ಅತ್ಯಾಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.