ಡಿ. 2 ರಂದು ಬೆಳ್ಳಾರೆಯಲ್ಲಿ ಸುಳ್ಯ ತಾಲೂಕು ಮಟ್ಟದ ರ‍್ಯಾಪಿಡ್ ಚೆಸ್ ಸ್ಪರ್ಧೆ

Advt_Headding_Middle
Advt_Headding_Middle

ಬಾಬ್ಬಿ ಫಿಶರ್ ಚೆಸ್ ಎಸೋಸಿಯೇಶನ್ ಸುಳ್ಯ ತಾಲೂಕು ಇದರ ವತಿಯಿಂದ ಸುಳ್ಯ ತಾಲೂಕು ಮಟ್ಟದ ರ‍್ಯಾಪಿಡ್ ಚೆಸ್ ಸ್ಪರ್ಧೆಯು ಡಿ. 2 ರಂದು ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆಯಲಿದೆ.
ಎಸೋಸಿಯೇಶನ್ ಕಾರ್ಯದರ್ಶಿ ಮುರಳೀಕೃಷ್ಣ ಚಳ್ಳಂಗಾರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಚೆಸ್ ಸ್ಪರ್ಧೆಯು ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಗೆ ಶಾಶ್ವತ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಸ್ಪರ್ಧಾರ್ಥಿಗಳು ತಾವು ಕಲಿಯುತ್ತಿರುವ ಶಾಲೆಯ ಮುಖ್ಯಸ್ಥರಿಂದ ದೃಢೀಕರಿಸಿದ ಪತ್ರದೊಂದಿಗೆ ಪ್ರವೇಪತ್ರವನ್ನು ನ. ೨೮ರ ಒಳಗಾಗಿ ಸಂಘಟಕರಿಗೆ ತಲುಪಿಸಬೇಕು. ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಕಿರಿಗೆ ಮುಕ್ತ ವಿಭಾಗದಲ್ಲಿ ೫ ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರವನ್ನು ನೀಡಲಾಗುವುದು. ತಾಲೂಕಿನಾದ್ಯಂತ ಸುಮಾರು ನೂರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಮತ್ತು ೫೦ಕ್ಕಿಂತಲೂ ಮಿಕ್ಕಿ ಸಾರ್ವಜನಿಕರು ಈ ಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಸ್ಪರ್ಧೆಯನ್ನು ಪುತ್ತೂರಿನ ಸಹಾಯಕ ಕಮೀಷನರ್ ಕೃಷ್ಣಮೂರ್ತಿ ಎಚ್.ಕೆ. ಉದ್ಘಾಟಿಸಲಿದ್ದು, ಬಾಬ್ಬಿ ಫಿಶರ್ ಚೆಸ್ ಎಸೋಸಿಯೇಶನ್ ಅಧ್ಯಕ್ಷ ವಿ. ಮೋಹನ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಸಂಚಾಲಕ ಎಂ.ಪಿ.ಉಮೇಶ್, ಜಿ.ಪಂ. ಸದಸ್ಯ ಎಸ್.ಎನ್.ಮನ್ಮಥ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ವೀಣಾ ಎಂ.ಟಿ. ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯ್ಷ ಡಾ. ಹರಪ್ರಸಾದ್ ತುದಿಯಡ್ಕ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಚೆಸ್ ಆಟಗಾರ ಪಿ. ಗೋಪಾಲಕೃಷ್ಣ ಭಟ್, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ದೇಚಮ್ಮ ಟಿ.ಎಂ., ಪುತ್ತೂರು ಚೆಸ್ ಅಕಾಡೆಮಿ ಅಧ್ಯಕ್ಷ ಜಯರಾಮ ಗೌಡ ಹಿರಿಂಜ, ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ, ಬೆಳ್ಳಾರೆ ಜೇಸೀ ಪೂರ್ವಾಧ್ಯಕ್ಷ ಮಿಥುನ್ ಶೆಣೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಅಸೋಸಿಯೇಷನ್ ನಿರ್ದೇಶಕರಾದ ಪಿ.ಜಿ.ಎಸ್.ಎನ್.ಪ್ರಸಾದ್, ರಮೇಶ್ ಕೋಟೆ, ಮಹೇಶ್ ಕೋಟೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.