ಡಿ. 2ರಂದು ವಳಲಂಬೆಯಲ್ಲಿ ತಾಲೂಕು ಮಟ್ಟದ ಯುವ ಸಮ್ಮೇಳನ

Advt_Headding_Middle
Advt_Headding_Middle

ಯುವಜನ ಸಂಯುಕ್ತ ಮಂಡಳಿ ವತಿಯಿಂದ ವಳಲಳಂಬೆ ಮಿತ್ರ ಬಳಗದ ಸಹಕಾರದೊಂದಿಗೆ ಸುಳ್ಯ ತಾಲೂಕು ಮಟ್ಟದ ಯುವ ಸಮ್ಮೇಳನವು ಡಿ. ೨ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


ಸಮ್ಮೇಳನವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಲಿದ್ದು, ಜಿ.ಪಂ. ಸದಸ್ಯ ಶ್ರೀಮತಿ ಆಶಾ ತಿಮ್ಮಪ್ಪ, ಲಯನ್ಸ್ ಕ್ಲಬ್ ಮಾಜಿ ರಾಜ್ಯಪಾಲ ಎಂ.ಬಿ..ಸದಾಶಿವ, ವಳಲಂಬೆ ದೇವಸ್ಥಾನದ ಸಮಿತಿ ಅಧ್ಯಕ್ಷ ಕೇಶವ ಹೊಸೋಳಿಕೆ, ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷ ಅಚ್ಚುತ ಗುತ್ತಿಗಾರು, ಸದಸ್ಯ ವೆಂಕಟ್ ವಳಲಂಬೆ ಭಾಗವಹಿಸಲಿದ್ದಾರೆ.
ಬಳಿಕ ನಡೆಯುವ ವಿಚಾರಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡರು ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ಪ್ರಸ್ತುತತೆಯ ಬಗ್ಗೆ ಮಾತನಾಡಲಿದ್ದಾರೆ. ಬಳಿಕ ನಡೆಯುವ ವಿಚಾರಗೋಷ್ಠಿಯಲ್ಲಿ ಶ್ರೀಮತಿ ಸಹನಾ ಕಾಂತಬೈಲು ಅಧ್ಯಕ್ಷತೆ ವಹಿಸಲಿದ್ದು, ಲೇಖಕ, ಪ್ರಾಧ್ಯಾಪಕ ಡಾ. ನರೇಮದ್ರ ರೈ ದೇರ್ಲ ಕೃಷಿಯ ಬದುಕಿನೊಂದಿಗೆ ಯುವ ಜನರು ಎಂಬ ವಿಚಾರವಾಗಿ ಮಾತನಾಡಲಿದ್ದಾರೆ. ನಂತರ ಮನದ ಮಾತು, ಹಾಡು, ನೃತ್ಯ ಕಾರ್ಯಕ್ರಮಗಳು ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ವಹಿಸಲಿದ್ದು, ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಾಧಕರನ್ನು ಸನ್ಮಾನಿಸಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ರಾಧಾಕೃಷ್ಣ ಹೊಸೋಳಿಕೆ, ಸಂಘಟನಾ ಕ್ಷೇತ್ರದಲ್ಲಿ ಪ್ರದೀಪ್‌ಕುಮಾರ್ ಪನ್ನೆ, ಸಮಾಜಸೇವಾ ಕ್ಷೇತ್ರದಲ್ಲಿ ವೆಂಕಟ್ ದಂಬೆಕೋಡಿ, ಸಂಗೀತ ಕ್ಷೇತ್ರದಲ್ಲಿ ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ, ಸಾಂಸಕೃತಿಕ ಕ್ಷೇತ್ರದಲ್ಲಿ ದೇವಿಪ್ರಸಾದ್ ಜಿ.ಸಿ. ಸನ್ಮಾನಿತರಾಗಲಿದ್ದಾರೆ. ಪಂಜ ಯುವ ತೇಜಸ್ಸು ಟ್ರಸ್ಟ್, ಚೊಕ್ಕಾಡಿ ಗರುಡ ಯುವಕ ಮಂಡಲ, ಬಾರ್ಪಣೆ ವಿಕ್ರಮ ಯುವಕ ಮಂಡಲ ಸಂಸ್ಥೆಗಳು ಅಭಿನಂದಿಸಲ್ಪಡಲಿವೆ. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀನಾರಾಯಣ ಕಜೆಗದ್ದೆಯವರು ಸಮಾರೋಪ ಮತ್ತು ಅಭಿನಂದನಾ ಭಾಷಣ ಮಾಡಲಿದ್ದಾರೆ. ತಾ.ಪಂ. ಸದಸ್ಯೆ ಶ್ರೀಮತಿ ಯಶೋದಾ ಭಾಳೆಗುಡ್ಡೆ, ಗುತ್ತಿಗಾರು ಸೊಸೈಟಿ ಅಧ್ಯಕ್ಷ ಮುಳಿಯ ಕೇಶವ ಭಟ್, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಮುಂಡೋಡಿ, ಸಹಾಯಕ ಯುವಜನ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ಚಂದ್ರಶೇಖರ ಪನ್ನೆ, ಪೂರ್ವಾಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕ್ರೀಡಾ ಕಾರ್ಯದರ್ಶಿ ಶಂಕರ್ ಪೆರಾಜೆ, ನಿರ್ದೇಶಕರುಗಳಾದ ದಯಾನಂದ ಕೇರ್ಪಳ, ಆರ್.ಕೆ.ಮಹಮ್ಮದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.