ಡಿ. 4 ರಿಂದ ಡಿ. 6: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊರೆ ಕಾಣಿಕೆ ಸ್ವೀಕಾರ

Advt_Headding_Middle
Advt_Headding_Middle

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ವಾರ್ಷಿಕ ಮಹೋತ್ಸವವು ಡಿ. 4ರಿಂದ ಡಿ. 20ರ ತನಕ ನಡೆಯಲಿದ್ದು, ಆ ಪ್ರಯುಕ್ತ ಆಡಳಿತ ಮಂಡಳಿ ವತಿಯಿಂದ ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ರಮವು ಡಿ. 4 ರಿಂದ ಡಿ. 6ರ ತನಕ ನಡೆಯಲಿದ್ದು, ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಹೊರೆ ಕಾಣಿಕೆ ಸಮರ್ಪಿಸುವಂತೆ ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ. ಹೊರೆ ಕಾಣಿಕೆಯನ್ನು ದೇವಳದ ಪ್ರವೇಶ ಗೋಪುರದ ಮುಂಭಾಗದಲ್ಲಿ ಪೂ. 9.00ರಿಂದ ಸಂಜೆ 5.00 ಗಂಟೆಯವರೆಗೆ ಸ್ವೀಕರಿಸಲಾಗುವುದೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿರುತ್ತಾರೆ. ಡಿ. 3ರಂದು ಮೂಲಮೃತ್ತಿಕೆ ಪ್ರಸಾದ ತಡಗೆಯುವ ಕಾರ್ಯಕ್ರಮ ನಡೆಯಲಿದೆ. ಡಿ. 4ರಂದು ಕೊಪ್ಪರಿಗೆ ಏರುವ ಮೂಲಕ ಷಷ್ಠಿ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಡಿ. 6ರಂದು ಲಕ್ಷದೀಪೋತ್ಸವ ಜರಗಲಿದೆ. ಡಿ. 12ರಂದು ಪಂಚಮಿ ರಥೋತ್ಸವ ಹಾಗೂ ಡಿ.13ರಂದು ಬ್ರಹ್ಮರಥೋತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.