ಅಲ್ ಅಮಾನ್ ಕಮಿಟಿ ನೆಟ್ಟಾರು ದಶ ಸಂಭ್ರಮ; ಯೌವ್ವನವನ್ನು ಸತ್ಕಾರ್ಯಗಳಿಗೆ ಮೀಸಲಿಡಿ – ಅಶ್ರಫ್ ಬಾಖವಿ

Advt_Headding_Middle
Advt_Headding_Middle

 

ಬದ್ರಿಯಾ ಮಸೀದಿ ನೆಟ್ಟಾರು ,ಅಲ್ ಅಮಾನ್ ಕಮಿಟಿ ನೆಟ್ಟಾರು ಇದರ 10 ನೇ ವಾರ್ಷಿಕೋತ್ಸವ ಅಂಗವಾಗಿ ಏಕದಿನ ಮತಪ್ರಭಾಷಣವು ನವಂಬರ್ 23 ರಂದು ನಡೆಯಿತು.

ಮುಖ್ಯ ಪ್ರಭಾಷಣಗಾರರಾಗಿ ಸವಣೂರು ಚಾಪಳ್ಳ ಮುದರ್ರಿಸ್ಸರಾದ ಎಂ ಎ ಮಹಮ್ಮದ್ ಅಶ್ರಫ್ ಫಾಝಿಲ್ ಬಾಖವಿ ಮಾತನಾಡಿ, ಮನುಷ್ಯ ಜೀವನದಲ್ಲಿ ಯೌವ್ವನವು ಅತೀ ಪ್ರಭಾವ ಹಂತವಾಗಿದ್ದು ,ಅದನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಿ ಮಾದರಿ ಯುವಕರಾಗಬೇಕೆಂದು ಹೇಳಿದರಲ್ಲದೆ ,ಅಲ್ ಅಮಾನ್ ಕಮಿಟಿಯು 10 ರ ಸನಿಹದಲ್ಲಿದ್ದು ,ಈ ಕಮಿಟಿಯು ಹಲವಾರು ಸಮಾಜಮುಖಿ ಕಾರ್ಯ ಗಳಿಗೆ ಆದ್ಯತೆ ನೀಡಿ ,ಬಡ ಕುಟುಂಬಗಳಿಗೆ ನೆರವನ್ನು ನೀಡುತ್ತಾ ಬಂದ ಈ ಯುವಕರ ತಂಡದ ಕೆಲಸ ಕಾರ್ಯ ಗಳು ಶ್ಲಾಘನೀಯ .‌ಹತ್ತು ವರುಷಗಳಲ್ಲಿ ಮಾಡಿದ ಹಲವಾರು ಸಮಾಜಮುಖಿ ಕಾರ್ಯ ಗಳು ಸರ್ವರಿಗೂ ಮಾದರಿಯಾಗಬೇಕೆಂದು ಅವರು ಕರೆ ನೀಡಿದರು .

ಬೆಳ್ಳಾರೆ ಝಕರಿಯಾ ಜುಮಾಮಸೀದಿಯ ಮುದರ್ರಿಸ್ಸರಾದ ತಾಜುದ್ದೀನ್ ರಹ್ಮಾನಿ ಕಾರ್ಯ ಕ್ರಮ ಉದ್ಘಾಟಿಸಿ ,ದುವಾಕೆ ನೇತೃತ್ವ ವನ್ನು ನೀಡಿದರು.

ಕಾರ್ಯಕ್ರಮ ದಲ್ಲಿ ಇಕ್ಬಾಲ್ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡಿ ,ಅಲ್ ಅಮಾನ್ ಕಮಿಟಿಯ ಸರ್ವ ಕಾರ್ಯ ಗಳನ್ನ ಶ್ಲಾಘಿಸಿದರು.

ಅಲ್ ಅಮಾನ್ ಕಮಿಟಿ ನೆಟ್ಟಾರು ಇದರ ಅಧ್ಯಕ್ಷ ಬಶೀರ್ ಪಿ ಎಂ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು.

ವೇದಿಕೆಯಲ್ಲಿ ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಯು ಹೆಚ್ ಅಬೂಬಕ್ಕರ್ ,ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ ,ವಕ್ಪ್ ಸಲಹಾ ಸಮಿತಿ ಸದಸ್ಯ ಹನೀಫ್ ಮಾಡಾವು ,ಯುವ ಉದ್ಯಮಿ ಶಾಫಿ ಪಾಪೆತ್ತಡ್ಕ,ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಸದಸ್ಯ ಬಶೀರ್ ಬಿ ಎ ,ಮುನೀರುಲ್ ಇಸ್ಲಾಂ ಮದರಸ ಪೆರುವಾಜೆ ಅಧ್ಯಕ್ಷ ಕೆ ಎಸ್ ಜಮಾಲುದ್ದೀನ್ ಬೆಳ್ಳಾರೆ ,ನೂರುಲ್ ಇಸ್ಲಾಂ ಮದರಸ ನೆಟ್ಟಾರು ಅಧ್ಯಕ್ಷ ಇಸ್ಮಾಯಿಲ್ ನೆಟ್ಟಾರು ,ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಸದಸ್ಯ ಖಲಂದರ್ ನವಾಝ್ ,ಉದ್ಯಮಿ ನಝೀರ್ ಶೂ ಬಿಝ್, ಅಲ್ ಅಮಾನ್ ಕಮಿಟಿ ನೆಟ್ಟಾರು ಕಾರ್ಯದರ್ಶಿ ಮುನವ್ವರ್ ನೆಟ್ಟಾರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು .

ಮದರಸ ಸದರ್ ಮುಅಲ್ಲಿಂ ಹನೀಫ್ ಮುಸ್ಲಿಯಾರ್ ಸ್ವಾಗತಿಸಿ ,ಸೈಫುದ್ದೀನ್ ನೆಟ್ಟಾರು ವಂದಿಸಿದರು .ಶರೀಫ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.

ವರದಿ :(ರಶೀದ್ ಬೆಳ್ಳಾರೆ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.