Breaking News

ಹರಿಹರ: ಶುಚಿತ್ವ ಕಾಪಾಡಿಕೊಳ್ಳಲು ತಂತ್ರಿಗಳ ಸಲಹೆ

Advt_Headding_Middle
Advt_Headding_Middle

ಧಾರ್ಮಿಕ ಶ್ರಧ್ದಾ ಕೇಂದ್ರಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ವೇಳೆ ಸಂಸ್ಕಾರ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಹೇಳಿದರು.
ಹರಿಹರ ಪಳ್ಳತ್ತಡ್ಕ ಸ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ರವಿವಾರ ಶ್ರೀದೇವರ ಬಾಲಾಲಯ ಪ್ರತಿಷ್ಠಾಪಣೆ ನೆರವೇರಿಸದ ಬಳಿಕ ಸಮಿತಿ ಸದಸ್ಯರ ಜತೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಧಾರ್ಮಿಕ ವಿಚಾರಗಳ ಕುರಿತು ಮಾರ್ಗದರ್ಶನ ನೀಡಿ ಮಾತನಾಡಿದರು.
ನಿತ್ಯ ಪೂಜೆಯ ಸಮಯದಲ್ಲಿ ಅಲ್ಪ ಬದಲಾವಣೆಯಾಗಿದೆ. ರಾತ್ರಿ ಮತ್ತು ಮಧ್ಯಾಹ್ನದ ಪೂಜೆ ಬ್ರಹ್ಮಕಲಶೋತ್ಸವದ ತನಕ ರದ್ದುಗೊಂಡಿದೆ. ಬೆಳಗ್ಗೆ ನಡೆಯುವ ನಿತ್ಯದ ಮಹಾಪೂಜೆಯು ೬.೩೦ರಿಂದ ಆರಂಭಗೊಂಡು ೮.೩೦ಕ್ಕೆ ಮುಗಿಯಲಿದೆ. ಈ ವೇಳೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕಾರ್ತಿಕ ಪೂಜೆ, ಮಹಾಪೂಜೆ, ಮಂಗಳಾರತಿ ಹಾಗೂ ಶನಿಪೂಜೆ ಸೇವೆಗಳು ನಡೆಯಲಿದೆ ಎಂದರು, ವರ್ಷಂಪ್ರತಿ ನಡೆಯುವ ಧನು ಪೂಜೆ ಸೇವೆಯು ಈ ಹಿಂದಿನಂತೆ ಪ್ರಾತ: ಕಾಲದ ಅವಧಿಯಲ್ಲಿ ನಡೆಯಲಿದೆ ಶನಿಪೂಜೆ ನಡೆಸುವ ಭಕ್ತರು ಮುಂಜಾನೆಯ ಪೂಜೆ ಅವಧಿಯಲ್ಲಿ ಉಪಸ್ಥಿತರಿರುವಂತೆ ಅವರು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರು ಕೂಜುಗೋಡು ಮಾತನಾಡಿ ಅಭಿವೃದ್ಧಿ ಕಾರ್‍ಯಗಳು ನಿಗದಿತ ಸಮಯದೊಳಗೆ ನಡೆಯಬೇಕಿರುವುದರಿಂದ ಕೂಡುಗಟ್ಟಿನ ಭಕ್ತರು ನಿಧಿ ಸಂಗ್ರಾಹ ಕಾರ್‍ಯದಲ್ಲಿ ಮತ್ತಷ್ಟೂ ಗುರುತಿಸಿಕೊಂಡು ವೇಗ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುದ್ಕುಳಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೂಜುಗೋಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರು ಕೂಜುಗೋಡು, ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿಶಂಕರ ಪಿಂಡಿಮನೆ, ಗೌರವಾಧ್ಯಕ್ಷ ಡಾ. ಚಂದ್ರಶೇಖರ ಕಿರಿಭಾಗ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೈಲೇಶ್ ಕಟ್ಟೆಮನೆ, ಉಷಾಪ್ರಭಾಕರ ಕಿರಿಭಾಗವತ್ ಎಸ್ ಶ್ರೀಧರ್ ಭಾಗವತ್, ಶೋಭಾಮಣಿ ಕೋಡಿಯಡ್ಕ, ದಿವಾಕರ ಮುಂಡಾಜೆ, ವಿವಿಧ ಸಮಿತಿಗಳ ನಾರಾಯಣ ಪುಳಿಕುಕ್ಕು, ಜನಾರ್ಧನ ಗುಂಡಿಹಿತ್ಲು, ಪದ್ಮನಾಭ ಕರಂಗಲ್ಲು, ಜಯರಾಮ ಕರಂಗಲ್ಲು, ಕೇಶವ ಮೂರ್ತಿ ಪಳ್ಳತ್ತಡ್ಕ, ತಾರಾನಾಥ ಮುಂಡಾಜೆ, ಶಿವರಾಮ ಕಜ್ಜೋಡಿ, ಬೆಳ್ಯಪ್ಪ ಖಂಡಿಗೆ, ಮೂಕಾಂಬಿಕ ಗುಂಡಿಹಿತ್ಲು, ಚಂದ್ರಾಮೋಹನ್ ನೆತ್ತಾರ, ಕುಶಾಲಪ್ಪ ಕಾಂತುಕುಮೇರಿ, ಉಮೇಶ್ ಕಜ್ಜೋಡಿ, ಕಿಶೋರು ಮುಂಡಾಜೆ ಹಾಗೂ ಕೂಡುಗಟ್ಟಿನ ಭಕ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.