Breaking News

ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ಕೆ.ಎಂ.ಸಿ. ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Advt_Headding_Middle
Advt_Headding_Middle

ಪ್ರಗತಿ ವಿದ್ಯಾಸಂಸ್ಥೆ ಪಠ್ಯ ಪಠ್ಯೇತರ ಚಟುವಟಿಕೆಗಳೊಂದಿಗೆ ಸಮಾಜಮುಖಿ ಕಾರ್ಯಳನ್ನು ಮಾಡುತ್ತಿರುವುದು ಶ್ಲಾಘನೀಯ” ಎಂದು ನ. 25 ರಂದು ಆದಿತ್ಯವಾರ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ನಡೆದ ಕೆ.ಎಂ.ಸಿ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಶ್ರೀ ದುರ್ಗಾ ನರ್ಸಿಂಗ್ ಹೋಮ್ ಕಾಣಿಯೂರಿನ ವೈದ್ಯರಾದ ಡಾ| ಶಶಿಧರ್ ಪೆರುವಾಜೆ ನುಡಿದರು.


ಅದ್ಯಕ್ಷ ಸ್ಥಾನವನ್ನು ವಹಿಸಿದ ಡಾ| ಉದಯಕುಮಾರ್ ರವರು ಮಾತನಾಡಿ”ಆರೋಗ್ಯ ಪ್ರತಿಯೊಬ್ಬನ ಅತೀ ದೊಡ್ಡ ಆಸ್ತಿ. ಪ್ರತಿಯೊಬ್ಬನು ತನ್ನ ಆರೋಗ್ಯವನ್ನು ಜತನದಿಂದ ಕಾಪಾಡಿಕೊಳ್ಳಬೇಕು”ಎಂದರು.
ಅಶ್ವಿನಿ ಕ್ಲಿನಿಕ್‌ನ ವೈದ್ಯರಾದ ಡಾ| ರವಿಶಂಕರ್.ವಿ. ಮಾತನಾಡಿ “ಆರೋಗ್ಯದ ಕಡೆಗೆ ಉದಾಸಿನ ಸಲ್ಲದು”ಎಂದರು.
ವೇದಿಕೆಯಲ್ಲಿ ಕಾಣಿಯೂರು ಗ್ರಾ.ಪಂ.ಸದಸ್ಯರಾದ ದಿನೇಶ್ ಇಡ್ಯಡ್ಕ, ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಆಡಳಿತ ಸಮಿತಿಯ ಸದಸ್ಯ ನಾಗೇಶ್ ರೈ ಮಾಳ, ವೈದ್ಯಕೀಯ ಸಮಿತಿಯ ಸಂಚಾಲಕರಾದ ಶ್ರೀಮತಿ ಮೋಹಿನಿ ಬೆಳಿಯಪ್ಪ ಗೌಡ ಚೌಕಿಮಠ, ಜೋಕಾಲಿ ಗೆಳೆಯರ ಬಳಗ ಕಾಯಿಮಣ ಅಧ್ಯಕ್ಷರಾದ ವಿಜೇತ್ ಮುಂಡಾಳ, ಬೆಳ್ಳಿಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ರೈ ಪಟ್ಟೆ, ಕೆ.ಎಂ.ಸಿ ಪ್ರೊ.ಮನಮೋಹನ್, ಹಿರಿಯ ವಿದ್ಯಾರ್ಥಿನಿ ಡಾ| ಕು. ಸ್ವಾತಿ ಉ.ಕೆ., ಆಡಳಿತಧಿಕಾರಿ ವಸಂತ ರೈ ಕಾರ್ಕಳ, ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಹಶಿಕ್ಷಕಿ ಅನಿತಾ ಜೆ.ರೈ, ಮತ್ತು ವಿನಯ ವಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶುಭಕಿರಣ ಆರ್. ನೋಂಡ ಮತ್ತು ಸಹಶಿಕ್ಷಕಿ ಶ್ರೀಮತಿ ಲಿಕ್ಷಿತಾ ಎ.ಸಿ. ಕಾರ್ಯಕ್ರಮ ಸಂಯೋಜಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.