Breaking News

ಪ್ರಗತಿ ಕಾಣಿಯೂರಿನಲ್ಲಿ ಪುಟಾಣಿಗಳ ಸಾಂಸ್ಕ್ರತಿಕ ಸ್ಪರ್ಧೆ

Advt_Headding_Middle
Advt_Headding_Middle

ವಿವಿಧ ಕಾರ‍್ಯಕ್ರಮಗಳ ಮೂಲಕ ಜನಸಾಮಾನ್ಯರ ಹತ್ತಿರಕ್ಕೆ ಪ್ರಗತಿ ವಿದ್ಯಾಸಂಸ್ಥೆ ಸಾಗುತ್ತಿದೆ. ಪ್ರಗತಿಯ ಕಾರ್ಯಕ್ರಮಗಳು ಊರಿನ, ಪರವೂರಿನ ಜನರ ಸಹಭಾಗಿತ್ವದಿಂದ ಉತ್ತಮವಾಗಿ ನಡೆಯುತ್ತಿದೆ ಎಂದು ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ನ. ೨೬ರಂದು ನಡೆದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ವಿದ್ಯಾರ್ಥಿಗಳ ಸಾಂಸ್ಕ್ರತಿಕ ಸ್ಪರ್ಧೆಯನ್ನು ಉದ್ಘಾಟಿಸಿ, ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ನುಡಿದರು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿದ್ಧಿ ವಿನಾಯಕ ಸೇವಾಸಂಘ ಮಂಜುನಾಥ ನಗರದ ಗೌರವಾಧ್ಯಕ್ಷರಾದ ಬಿ.ಕೆ. ರಮೇಶ್‌ರವರು ಮಾತನಾಡಿ, ಕಾರ್ಯಕ್ರಮಗಳು ಮುಂದಿನ ಶೈಕ್ಷಣಿಕ ವರ್ಷದ ಸಾಧನೆಗಳಿಗೆ ಪ್ರೇರಣೆಯಾಗಲಿ ಎಂದರು.
ವೇದಿಕೆಯಲ್ಲಿ ಮೇದಪ್ಪ ಕೆಡೆಂಜಿ ಸದಸ್ಯರು ಗ್ರಾಮ ಪಂಚಾಯತ್ ಬೆಳಂದೂರು, ಪದ್ಮನಾಭ ಸದಸ್ಯರು, ಗ್ರಾಮ ಪಂಚಾಯತ್ ಕಾಣಿಯೂರು, ಶ್ರೀಮತಿ ಭವಾನಿ ಅಧ್ಯಕ್ಷರು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುದ್ಮಾರು ಒಕ್ಕೂಟ, ಪುಣ್ಚತ್ತಾರು ಹರಿಭಜನಾ ಮಂಡಳಿ ಅಧ್ಯಕ್ಷ ಮೇದಪ್ಪ ಗೌಡ ಮಾನ್ಯಡ್ಕ, ಬೆಳಂದೂರು ಜನಜಾಗೃತಿ ವೇದಿಕೆ ಅಧ್ಯಕ್ಷ ವೇಣುಗೋಪಾಲ ಕಳುವಾಜೆ, ರಜತ ಸಂಭ್ರಮ ಸ್ವಯಂ ಸೇವಾ ಸಮಿತಿ ಸಂಚಾಲಕರಾದ ಶ್ರೀಧರ ಅಗಳಿ, ಕೋಮಲ್ ಕುಮಾರ್, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಕನ್ನಡ ಮಾಧ್ಯಮದ ಮುಖ್ಯಸ್ಥೆ ಶ್ರೀಮತಿ ಸರಸ್ವತಿ ಎಂ, ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸಹಶಿಕ್ಷಕಿ ಶ್ರೀಮತಿ ಜಯಶೀಲ ಕೆ. ಪಂಜಿಗಾರು ಕಾರ‍್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಕು.ಶುತಿ ಮತ್ತು ಸವಿತಾ ಕೆ. ಕಾರ‍್ಯಕ್ರಮ ಸಂಯೋಜಿಸಿದರು. ಸಹಶಿಕ್ಷಕ ಸುಬ್ರಹ್ಮಣ್ಯ ಸಿ.ಕೆ. ಐವರ್ನಾಡು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.