ಬೆಳ್ಳಾರೆ : ಜ್ಞಾನದೀಪದಲ್ಲಿ ಅಧ್ಯಾಪನಾ ಕೌಶಲ್ಯ ತರಬೇತಿ- ಶಿಕ್ಷಕ ವೃತ್ತಿ ಜ್ಞಾನ ಸಂಪತ್ತನ್ನು ಬೆಳಗಿಸುವ ಪುಣ್ಯ ಕಾರ್ಯ : ಬಿ.ವಿ.ಎಸ್

Advt_Headding_Middle
Advt_Headding_Middle

ಸಾವಿರಾರು ಜ್ಞಾನ ದೀಪಗಳನ್ನು ಬೆಳಗಿಸುವುದರ ಮೂಲಕ ಶಿಕ್ಷಕರು ಸಮಾಜದಲ್ಲಿ ಶ್ರೇಷ್ಠ ಕಾರ್ಯ ಮಾಡುತ್ತಿದ್ದಾರೆ. ಜ್ಞಾನ ಸಂಪತ್ತನ್ನು ಬೆಳಗಿಸುವ ಶಿಕ್ಷಕ ಸದಾ ಉತ್ಸಾಹದ ಚಿಲುಮೆಯಾಗಿರಬೇಕು ಎಂದು ಜೇಸಿಐನ ವಲಯ ತರಬೇತುದಾರ, ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ ಹೇಳಿದರು.
ಅವರು ಭಾರತ ಸೇವಕ್ ಸಮಾಜದ ವತಿಯಿಂದ ನಡೆಸಲ್ಪಡುತ್ತಿರುವ ಬೆಳ್ಳಾರೆಯ ಜ್ಞಾನದೀಪ ಮೊಂಟೆಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರುಗಳಿಗೆ ನಡೆದ ಅಧ್ಯಾಪನ ಕೌಶಲ್ಯ ತರಬೇತಿಯನ್ನು ಉದ್ಘಾಟಿಸಿ, ತರಬೇತಿ ನೀಡಿದರು.
ಪೂರ್ವ ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿ ಬದುಕಿನ ಬಹುಮುಖ್ಯ ಘಟ್ಟ, ಇಲ್ಲಿ ಶಿಕ್ಷಕಿಯರು ಮಾತೃ ಸ್ವರೂಪಿಣಿಯಾಗಿ ಬೋಧನೆಯನ್ನು ಮಾಡಬೇಕಾಗುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಕಿಯರು ಅಧ್ಯಯನ ಕೌಶಲ್ಯಗಳೊಂದಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದು ಬಿ.ವಿ.ಸೂರ್ಯ ನಾರಾಯಣ ಹೇಳಿದರು.
ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಗಣೇಶ್ ನಾಯಕ್, ಆಂಗ್ಲ ಭಾಷಾ ಉಪನ್ಯಾಸಕಿ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಿಕ್ಷಕಿ ಶಾರದಾ ಸ್ವಾಗತಿಸಿ, ರೂಪಾ ವಂದಿಸಿದರು. ಕವಿತಾ ಕಾರ್ಯಕ್ರಮ ನಿರ್ವಹಿಸಿದರು. ಅನಿತಾ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.