ಎಲಿಮಲೆ: ವರ್ಲಿ ಚಿತ್ರ ಕಾರ್ಯಗಾರದ ಸಮಾರೋಪ ಸಮಾರಂಭ

Advt_Headding_Middle
Advt_Headding_Middle

ಎಲಿಮಲೆ ಸ.ಪ್ರೌಢಶಾಲೆಯ ದ.ಕ ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಸಂಘ ಇವರ ಸಂಯೋಜನೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಸರಕಾರಿ ಪ್ರೌಢ ಶಾಲೆ ಎಲಿಮಲೆ ಸಹಯೋಗದಲ್ಲಿ ನ.೨೬ ರಂದು ವರ್ಲಿ ಚಿತ್ರ ಕಾರ್ಯಗಾರ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಎಂ.ಜಿ.ಕಜೆ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕಲಿತ ವಿಧ್ಯಾರ್ಥಿಗಳೆ ಮುಂದೆ ದೇಶದ ಆಸ್ತಿ ಎಂದರು. ರಾಧಾಕೃಷ್ಣ ಶ್ರೀ ಕಟೀಲ್, ಪುತ್ತೂರು ತಾಲೂಕು ಕಂದಾಯ ನಿರೀಕ್ಷಕರಾದ ಡಿ.ಟಿ.ದಯಾನಂದ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಚಿತ್ರ ಕಲಾ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ನಂತರ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಾಗೂ ಎಲ್ಲಾ ದಾನಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಚಿತ್ರಕಲಾ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಇದರ ಕಾರ್ಯದರ್ಶಿ ಮುರಳೀಧರ ಆಚಾರ್ ಎನ್., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಕಾಂತ ಮಾವಿನಕಟ್ಟೆ, ಎಸ್. ಡಿ.ಎಂ.ಸಿ ಕಾರ್ಯಧ್ಯಕ್ಷ ಪುರುಷೋತ್ತಮ ಕಜೆ ಹಾಗೂ ಸದಸ್ಯರು, ಸುರಕ್ಷಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಎಸ್. ಡಿ.ಯಂ.ಸಿ ಅಧ್ಯಕ್ಷರಾದ ವಿಶ್ವನಾಥ ನಂದಗೋಕುಲ ವಹಿಸಿ, ಇಂತಹ ಕಾರ್ಯಕ್ರಮಗಳಿಂದ ಶಾಲೆಯ ಉನ್ನತಿ ಸಾದ್ಯ ಎಂದರು. ಸರಕಾರಿ ಪ್ರೌಢಶಾಲೆ ಎಲಿಮಲೆಯ ಗಣಿತ ಶಿಕ್ಷಕ ಶೀಮುರಳಿಧರ ಇವರು ಧನ್ಯವಾದ ಸಮರ್ಪಿಸಿದರು. ಗೋಪಿನಾಥ್ ಮೆತ್ತಡ್ಕ ಕಾರ್ಯ ಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.