ಕುಕ್ಕೆ: ವೃಕ್ಷಮಣಿಧಾರಕರ ರಾಜ್ಯ ಸಮಾವೇಶ ಸಮಾರೋಪ

Advt_Headding_Middle
Advt_Headding_Middle

ಶಿಕ್ಷಕರು ಮಕ್ಕಳನ್ನು ಸ್ವಾಭಿಮಾನಿ ಪ್ರಜೆಯಾಗಿ ರೂಪಿಸಿ ಶಿವರಾಮಯ್ಯ
ಮಕ್ಕಳು ಭವಿಷ್ಯದ ಕನಸುಗಳು ಅಂತಹ ಕನಸುಗಳಲ್ಲಿ ನಗು ಮತ್ತು ಆತ್ಮವಿಶ್ವಾಸ ತುಂಬಬೇಕು. ಅಂತಹ ಕಾರ‍್ಯವನ್ನು ಸ್ಕೌಡ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾಡುತ್ತಿದೆ. ಮಕ್ಕಳನ್ನು ಸ್ವಾಭಿಮಾನಿ ಪ್ರಜೆಯಾಗಿ ಶಿಕ್ಷಕರು ರೂಪಿಸಬೇಕಿದೆ ಎಂದು ದ.ಕ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಶಿವರಾಮಯ್ಯ ಹೇಳಿದರು.


ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ ಕರ್ನಾಟಕ, ೭೨ ನೇ ಹಿಮಾಲಯ ವೃಕ್ಷಮಣಿಧಾರಕರ ರಾಜ್ಯಮಟ್ಟದ ಹಿಮಾಲಯನ್ ವುಡ್‌ಬ್ಯಾಡ್ಜ್ ಶಿಕ್ಷಕರ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಅವರು ದಿಕ್ಕೂಚಿ ಭಾಷಣ ಮಾಡಿದರು.
ಸ್ಕೌಡ್ಸ್ ಮತ್ತು ಗೈಡ್ಸ್ ಸಂಸ್ಥೆಗಳು ಯಾವುದೇ ಫಲಾಪೇಕ್ಷೆ ಬಯಸದೆ ಸೇವೆ ನೀಡುತ್ತಿವೆ ಎಂದವರು ಶ್ಲಾಘಿಸಿದರು.
ಸಭಾಧ್ಯಕ್ಷತೆ ವಹಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ ಏಕತೆ ಎನ್ನುವುದು ನಮ್ಮಲ್ಲಿ ಇರಬೇಕು. ಭಾಷೆ, ಧರ್ಮ, ಮತ ಎಲ್ಲವನ್ನೂ ಮೀರಿ ಮನುಜ ಮತ ಒಂದೆ ಎನ್ನುವ ಮೂಲ ಆಶಯದಿಂದ ನಡೆಸಿದ ಈ ರಾಜ್ಯ ಸಮಾವೇಶ ಯಶಸ್ವಿಗೊಂಡಿದೆ ಎಂದು ಭಾವಿಸಿರುವುದಾಗಿ ಅವರು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಸ್ಕೌಟ್ಸ್ ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ, ರಾಜ್ಯ ತರಬೇತು ಆಯುಕ್ತರಾದ ಶ್ಯಾಮಲಾ ಕೆ.ವಿ ಮತ್ತು ಶಂಕರ್ ಎ ಎಮ್, ಸ್ಕೌಡ್ಸ್-ಗೈಡ್ಸ್ ಜಿಲ್ಲಾ ಉಪಾಧ್ಯಕ್ಷೆ ವಿಮಲಾರಂಗಯ್ಯ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಾಧವ ಡಿ, ಜಿಲ್ಲಾ ಕೋಶಾಧಿಕಾರಿ ವಾಸುದೇವ ಬೋಳೂರು, ಕೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ಪ್ರೋ ರಂಗಯ್ಯ ಶೆಟ್ಟಿಗಾರ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನದಾಸ್ ರೈ, ಸಮಾವೇಶದ ನಾಯಕ ನಾರಾಯಣ ಸ್ವಾಮಿ, ಪಂಜ ಸ್ಥಳಿಯ ಸಂಸ್ಥೆಯ ಉದಯಕುಮಾರ್ ಎಸ್, ಜಿಲ್ಲಾ ಸಂಘಟಕ ಭರತ್‌ರಾಜ್, ಉಪಪ್ರಾಂಶುಪಾಲ ಪ್ರೋ ಮಂಜುನಾಥ ಭಟ್ ಎಂ,ಎನ್,
ಶಿಬಿರದ ನಾಯಕಿ ಅರುಣಮಾಲಾ ಸಮಾವೇಶದ ವರದಿ ವಾಚಿಸಿದರು. ರಾಜ್ಯ ತರಬೇತುದಾರ ಕೋಲಾರದ ನಾರಾಯಣ ಸ್ವಾಮಿ ಹಾಡು ಹಾಡಿದರು. ಶಿಬಿರಾರ್ಥಿ ಮಂಜುನಾಥ ಶಿವಮೊಗ್ಗ, ಹಾಸನದ ಕಾಂಚನಮಾಲ ಅನಿಸಿಕೆ ವ್ಯಕ್ತಪಡಿಸಿದರು. ಗೈಡ್ಸ್ ರಾಜ್ಯ ಆಯುಕ್ತೆ ಗೀತಾ ನಟರಾಜ್ ಸ್ವಾಗತಿಸಿದರು. ಪಂಜ ಸ್ಥಳಿಯ ಸಂಸ್ಥೆಯ ಮಾಧವ ಬಿ.ಕೆ ವಂದಿಸಿದರು. ಜಿಲ್ಲಾ ತರಬೇತು ಆಯುಕ್ತೆ ಜಯಶ್ರಿ ಕಾರ‍್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.