ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ಅಂತರ್ ಶಾಲಾ ಕನ್ನಡ ಸಮೂಹಗೀತ ಗಾಯನ ಸ್ಪರ್ಧೆ

Advt_Headding_Middle
Advt_Headding_Middle

“ಸತತ ಪರಿಶ್ರಮದ ಹಾದಿಯಿಂದ ಉನ್ನತ ಸಂಸ್ಥೆಯಾಗಿ ಪ್ರಗತಿ ವಿದ್ಯಾಸಂಸ್ಥೆ ಬೆಳೆದಿರುವುದು ಸಂತಸಕರ ವಿಚಾರ” ಎಂದು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನ. ೨೬ ರಂದು ನಡೆದ ಅಂತರ್ ಶಾಲಾ ಪ್ರಾಥಮಿಕ ವಿಭಾಗದ ಕನ್ನಡ ಸಮೂಹಗೀತ ಗಾಯನ ಸ್ಪರ್ಧೆಯ ಉದ್ಘಾಟನೆ ನೆರವೇರಿಸಿದ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ಬೆಳಂದೂರಿನ ಅಧ್ಯಕ್ಷರಾದ ಶೇಷಪ್ಪ ಗೌಡರವರು ನುಡಿದರು.


ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಖ್ಯಾತ ಲೇಖಕ, ಅಂಕಣಗಾರ, ನಿವೃತ್ತ ಮುಖ್ಯೋಪಾಧ್ಯಾಯರಾದ ನಾರಾಯಣ ರೈ ಕುಕ್ಕುವಳ್ಳಿರವರು “ಗುರುಗಳ ಪ್ರೋತ್ಸಾಹದಿಂದ ಯಾವುದೇ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯ” ಎಂದರು.
ವೇದಿಕೆಯಲ್ಲಿ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರ ಕಾಣಿಯೂರು ಇದರ ಮಾಜಿ ಅಧ್ಯಕ್ಷ ಪರಮೇಶ್ವರ ಅನಿಲ, ಪತ್ರಿಕಾ ವರದಿಗಾರ ಸುಧಾಕರ ಆಚಾರ್ಯ, ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ, ಕನ್ನಡ ಮಾಧ್ಯಮದ ಸರಸ್ವತಿ ಎಂ. ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ನಯನ ದಿವಿಶ್ ಮುರುಳ್ಯ, ಮುರಳಿಕೃಷ್ಣ ಮಧುವನ, ರೇಖಾ ರಾಧಾಕೃಷ್ಣ ಓಣಿಯಡ್ಕ ಸಹಕರಿಸಿದರು.
ಕು.ರಚನಾ ಪ್ರಾರ್ಥಿಸಿದರು. ಪ್ರಾಯೋಜಕರಾಗಿ ಸದಾನಂದ ಆಚಾರ‍್ಯ, ವೇಣುಗೋಪಾಲ ಕಳುವಾಜೆ ಮತ್ತು ಸಂತೋಷ್ ಅಭೀರ, ಸಹಕರಿಸಿದರು. ಶ್ರೀಮತಿ ವಿನಯ ವಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ವಾಣಿ ಕಾರ್ಯಕ್ರಮ ಸಂಯೋಜಿಸಿದರು.

ಸಮೂಹಗೀತ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಕಾಣಿಯೂರು, ದ್ವಿತೀಯ ಸ.ಹಿ.ಪ್ರಾ.ಶಾಲೆ ಇಡ್ಯಡ್ಕ, ತೃತೀಯ ಸ.ಹಿ.ಪ್ರಾ.ಶಾಲೆ ಕೊಪ್ಪ ಪಡೆದುಕೊಂಡವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.