ಶ್ರೀ ಆದಿಮೊಗೇರ್ಕಳ ದೈವಸ್ಥಾನದಲ್ಲಿ ೩ನೇ ವರ್ಷದ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭ

Advt_Headding_Middle
Advt_Headding_Middle

ಶ್ರೀ ಆದಿಮೊಗೇರ್ಕಳ ದೈವಸ್ಥಾನದಲ್ಲಿ ೩ನೇ ವರ್ಷದ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭ ನ.೧೫ರಂದು ನಡೆಯಿತು.
ಮೋನಪ್ಪ ಕೊನ್ನಡ್ಕ ಅಧ್ಯಕ್ಷರು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಕೊನ್ನಡ್ಕ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಶೂರಪ್ಪ ಗೌಡ ಪಂಡಿ ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ ಕೊನ್ನಡ್ಕ ಇವರು ದೀಪಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಬಳ್ಪ ಗ್ರಾ.ಪಂ. ಅಧ್ಯಕ್ಷರಾದ ಪ್ರಕಾಶ್ ಮುಡ್ನೂರು, ಗ್ರಾ.ಪಂ.ಸದಸ್ಯ ರಮಾನಂದ ಎಣ್ಣೆಮಜಲು, ನಿವೃತ್ತ ಶಿಕ್ಷಕ ಪುಟ್ಟಣ್ಣ ಗೌಡ ಎಣ್ಣೆಮಜಲು, ಒಡಿಯೂರು ಗ್ರಾಮವಿಕಾಸ ಬಳ್ಪ ಘಟ ಸಮಿತಿಯ ಸೇವಾದೀಕ್ಷಿತೆ ನವೀನಕುಮಾರಿ.ಎಸ್., ಹರಿಯಪ್ಪ ಗೌಡ ಪಟೋಳಿ ಅದ್ಯಕ್ಷರು, ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಿರಣ್.ಕೆ. ಕೊನ್ನಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಅಂಗಾರ ಶಾಸಕರು, ವಿಧಾನ ಸಭಾಕ್ಷೇತ್ರ ಸುಳ್ಯ, ಉದಯ ಚೌಟ ಮಾಣಿ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ (ಏಕಲವ್ಯ ಪ್ರಶಸ್ತಿ ಪುರಸ್ಕೃತರು), ಅಶೋಕ್ ನೆಕ್ರಾಜೆ ತಾಲೂಕು ಪಂಚಾಯತ್ ಸದಸ್ಯರು ಸುಬ್ರಹ್ಮಣ್ಯ ಕ್ಷೇತ್ರ, ಪುರುಷೋತ್ತಮ ಅಮ್ಮಣ್ಣಾಯ ಅಧ್ಯಕ್ಷರು ಮಹಾವಿಷ್ಣು ದೇವಸ್ಥಾನ ಮುಡ್ನೂರು, ಶಾಲಿನಿ ಎಂ. ಮುಖ್ಯಶಿಕ್ಷಕಿ ಸ.ಕಿ.ಪ್ರಾ.ಶಾಲೆ ಎಣ್ಣೆಮಜಲು(ಜಿಲ್ಲಾ ಪ್ರಶಸ್ತಿ ವಿಜೇತರು), ಕೊರಗಪ್ಪ ಕೊನ್ನಡ್ಕ ಬಿ.ಎಸ್.ಎಫ್. ನಿವೃತ್ತ ಸೈನಿಕ ಇವರೆಲ್ಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್.ಅಂಗಾರ ಶಾಸಕರು, ವಿಧಾನಸಭಾ ಕ್ಷೇತ್ರ ಸುಳ್ಯ, ಶಾಲಿನಿ ಎಂ.ಮುಖ್ಯಶಿಕ್ಷಕಿ ಸ.ಕಿ.ಪ್ರಾ.ಶಾಲೆ ಎಣ್ಣೆಮಜಲು(ದ.ಕ ಜಿಲ್ಲಾ ಪ್ರಶಸ್ತಿ ವಿಜೇತರು), ಕೊರಗಪ್ಪ ಕೆ.ಬಿ.ಎಸ್.ಎಫ್.(ಗಡಿ ಭದ್ರತಾ ಪಡೆ) ನಿವೃತ್ತ ಸೈನಿಕ ಕೊನ್ನಡ್ಕ ಇವರುಗಳನ್ನು ಸನ್ಮಾನಿಸಲಾಯಿತು. ನವೀನಕುಮಾರಿ ಎಸ್. ಪ್ರಾರ್ಥನೆ ಮಾಡಿದರು. ಸಂಜೀವ ಕೆ.ಕೊನ್ನಡ್ಕ ಸ್ವಾಗತಿಸಿದರು. ಮಹೇಶ್ ಎಸ್.ಸೂಂತಾರು ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕೆ. ಕೊನ್ನಡ್ಕ ಧನ್ಯವಾದ ಮಾಡಿದರು.
ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ನವಜ್ಯೋತಿ ನರಿಮೊಗರು, ದ್ವಿತೀಯ ಎಸ್.ಬಿ.ಎಂ ಬೊಟ್ಟಡ್ಕ, ಚತುರ್ಥ ಪ್ರೆಂಡ್ಸ್ ಮೊಗ್ರ ಪಡೆದುಕೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.