ಎಡಮಂಗಲ : ವಿಶೇಷ ಗ್ರಾಮಸಭೆ

Advt_Headding_Middle
Advt_Headding_Middle

ಎಡಮಂಗಲ ಗ್ರಾಮ ಪಂಚಾಯತ್, ತಾಲೂಕು ಮಹಾತ್ಮಾಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ೨೦೧೮ ಮತ್ತು ೨೦೧೯ನೇ ಸಾಲಿನ ದ್ವಿತೀಯ ಹಂತದ ಸಾಮಾಜಿಕ ಶೋಧನದ ವಿಶೇಷ ಗ್ರಾಮಸಭೆಯು ಗ್ರಾ.ಪಂ. ಸಭಾಭವನದಲ್ಲಿ ನ.೨೮ರಂದು ನಡೆಯಿತು.

ಕ್ಷೇತ್ರ ಶಿಕ್ಷಣ ಕ್ಷೇತ್ರ ಸಂಯೋಜಕರಾದ ಕು.ಸಂಧ್ಯಾಕುಮಾರಿಯವರು ಸಭಾಧ್ಯಕ್ಷತೆ ವಹಿಸಿ ಗ್ರಾಮಸ್ಥರ ಬೇಡಿಕೆ, ಕುಂದು ಕೊರತೆ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಯೋಜನೆಯ ಬಗ್ಗೆ ಮಾತಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಯೋಜನೆಯ ತಾಲೂಕು ಸಂಯೋಜಕರಾದ ರೋಹಿತ್ ಮಾಹಿತಿ ಕಾರ‍್ಯಗಾರ ನಡೆಸಿಕೊಟ್ಟರು. ಯೋಜನೆ ವತಿಯಿಂದ ಸವಲತ್ತು ಪಡೆದವರ ಮಾಹಿತಿ ನೀಡಿದರು.

ಪಂ.ಅಭಿವೃದ್ಧಿ ಅಧಿಕಾರಿ ಸರಿತಾ ಓಲ್ಲಾ ಡಿಸೋಜ ಸ್ವಾಗತಿಸಿ, ಗ್ರಾಮಸ್ಥರು ಹೆಚ್ಚೆಚ್ಚು ಸದುಪಯೋಗ ಪಡೆದುಕೊಳ್ಳಬೇಕು ಮತ್ತು ನಿಯಾಮವಳಿಗಳನ್ನು ವಿವರಿಸಿದರು. ಗ್ರಾ.ಪಂ. ಅಧ್ಯಕ್ಷ ಸುಂದರ ದೋಳ್ತಿಲ, ಉಪಾಧ್ಯಕ್ಷೆ ಮೋಹಿನಿ ಕೂಟಾಜೆ, ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ, ಕರಂಬಿಲ ಶಾಲಾ ಮುಖ್ಯಶಿಕ್ಷಕ ಬಾಲಕೃಷ್ಣ ಗೌಡ, ಮರ್ದೂರು ಶಾಲಾ ಮುಖ್ಯ ಶಿಕ್ಷಕ ಮರ್ದೂರು ಬಾಲಕೃಷ್ನ ಗೌಡ, ಎಡಮಂಗಲ ಪ್ರೌಢಶಾಲಾ ಶಿಕ್ಷಕ ರಮೇಶ್ ಡಿ., ಎಡಮಂಗಲ ಹಿರಿಯ ಪ್ರಾ.ಶಾಲಾ ಮುಖ್ಯ ಶಿಕ್ಷಕಿ ತಾರಾವತಿ ದೇವಸ್ಯ, ಪುಳಿಕುಕ್ಕು ಶಾಲಾ ಶಿಕ್ಷಕಿ ದೀಪ್ತಿ ಡಿ., ಪರ್ಲ ಶಾಲಾ ಮುಖ್ಯಶಿಕ್ಷಕ ಪ್ರದೀಪ್‌ಕುಮಾರ್, ಪಂಚಾಯತ್ ಸದಸ್ಯರಾದ ವಿಶ್ವೇಶ್ವರ ಆಚಾರ್ಯ, ಪಾರ್ವತಿ ಕರಿಂಬಿಲ, ಗ್ರಾಮಸ್ಥರು ಉಪಸ್ಥಿತರಿದ್ದರು. ಅಂಗವಿಕಲ ಪುನರ್ವಸತಿ ಕಾರ್ಯಕರ್ತ ವಿಶ್ವನಾಥ ಡಿ. ಮಾಹಿತಿ ನೀಡಿದರು. ಕು.ಲಕ್ಷ್ಮಿ ಪ್ರಾರ್ಥಿಸಿದರು, ಕು,ಭವ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.