ಪೆರಾಜೆ: ಸಮಗ್ರ ಕೃಷಿ ಅಭಿಯಾನ

Advt_Headding_Middle
Advt_Headding_Middle

ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪೆರಾಜೆ ಇವರ ಸಂಯುಕ್ತಾಶ್ರಯದಲ್ಲಿ ಸಮಗ್ರ ಕೃಷಿ ಅಭಿಯಾನ (೨೦೧೮-೧೯)ವು ಪೆರಾಜೆ ಅನ್ನಪೂಣೇಶ್ವರೀ ಕಲಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಪಂಚಾಯತ್‌ನ ಅಧ್ಯಕ್ಷ ಬಿ.ಎ.ಹರೀಶ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಪೆರಾಜೆ ಗ್ರಾ.ಪಂ.ನ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಧರಣೀಧರ ವಹಿಸಿದ್ದರು. ವಸ್ತುಪ್ರದರ್ಶನದ ಉದ್ಘಾಟನೆಯನ್ನು ಮಡಿಕೇರಿ ತಾ.ಪಂ. ಅಧ್ಯಕ್ಷೆ ಶ್ರೀಮತಿ ತೆಕ್ಕಡೆ ಶೋಭಾ ಮೋಹನ್ ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ತಾ.ಪಂ. ಸದಸ್ಯ ಕೊಡಪಾಲ ಗಣಪತಿ ಉಪಸ್ಥಿತರಿದ್ದರು.
ತಾಂತ್ರಿಕ ಮಾಹಿತಿಯನ್ನು ಪುರಂದರ ಹಾಗೂ ರಬ್ಬರ್ ಬೋರ್ಡ್, ಪ್ರಾದೇಶಿಕ ಕಚೇರಿ ಪುತ್ತೂರು ಇದರ ಅಭಿವೃಧ್ಧಿ ಅಧಿಕಾರಿ ಟಿ.ಎ.ಥಾಮಸ್ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.