28 ವರ್ಷಗಳ ಬಳಿಕ ಒಂದಾದ ಹಳೆ ವಿದ್ಯಾರ್ಥಿಗಳಿಂದ ಉಪನ್ಯಾಸಕನ ಹೆಸರಲ್ಲಿ ದತ್ತಿನಿಧಿ

Advt_Headding_Middle
Advt_Headding_Middle

28 ವರ್ಷದ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಒಂದಾದ ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ಹಳೆವಿದ್ಯಾರ್ಥಿಗಳು ತಮಗೆ ಕಲಿಸಿದ ಉಪನ್ಯಾಸಕ ದಿ|ನಾರಾಯಣ ರಾವ್ ಹೆಸರಲ್ಲಿ ದತ್ತಿನಿಧಿ ಆರಂಭಿಸಿದ್ದಾರೆ.


ನ.29 ರಂದು ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ದತ್ತಿನಿಧಿಯನ್ನು ಆರಂಭಿಸಲಾಯಿತು. ರೂ.1,3೦,೦೦೦ ಮೊತ್ತದ ದತ್ತಿನಿಧಿಯನ್ನು ದಿ|ನಾರಾಯಣ ರಾವ್ ಹೆಸರಲ್ಲಿ ಆರಂಭಿಸಲಾಗಿದ್ದು ಪ್ರತಿವರ್ಷ ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆಯುವ 3 ಮಂದಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ನೀಡಲಾಗುತ್ತದೆ. ಪ್ರತಿಭೋತ್ಸವದ ಸಮಾರಂಭದಲ್ಲಿ ಪ್ರಸ್ತುತ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ 3 ಮಂದಿಗೆ ದಿ|ನಾರಾಯಣ ರಾವ್‌ರವರ ಪತ್ನಿ ರೇಖಾ ಎನ್. ರಾವ್ ದತ್ತಿನಿಧಿ ಹಸ್ತಾಂತರಿಸಿದರು. ಹಳೆವಿದ್ಯಾರ್ಥಿ ಸುನಿಲ್ ರೈ ಪೆರುವಾಜೆ ದತ್ತಿನಿಧಿಯ ಬಗ್ಗೆ ಮಾಹಿತಿ ನೀಡಿದರು. ಪ್ರಾಂಶುಪಾಲ ಯು.ಸುಬ್ರಾಯ ಗೌಡ, ಜೇಸಿ ತರಬೇತುದಾರ ಕೃಷ್ಣ ಮೋಹನ್, ಬೆಳ್ಳಾರೆ ಜೇಸಿಐ ಪುರ್ವಾಧ್ಯಕ್ಷ ಪ್ರದೀಪ್ ರೈ ಪನ್ನೆ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಪ್ರಸಾದ್ ಸೇವಿತ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.