ಎಣ್ಮೂರು : ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ

Advt_Headding_Middle
Advt_Headding_Middle

ಎಣ್ಮೂರು ಸ್ಥಳೀಯ ಸರ್ಕಾರಮಟ್ಟದಲ್ಲಿ ಎಣ್ಮೂರು ಗ್ರಾಮಪಂಚಾಂಯತ್‌ಗೆ ಒಳಪಟ್ಟ ಮುರುಳ್ಯ ಮತ್ತು ಎಣ್ಮೂರು ಗ್ರಾಮಗಳ ಶಾಲಾ ಮಕ್ಕಳ ಹಕ್ಕುಗಳಬಗ್ಗೆ ವಿಶೇಷ ಗ್ರಾಮ ಸಭೆಯು ಎಣ್ಮೂರು ಸರಕಾರಿ ಶಾಲೆಯಲ್ಲಿ ಶಾಲಾ ನಾಯಕ ರೋಶನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಜ ಆರೋಗ್ಯಇಲಾಖೆಯ ಮೇಲ್ವಿಚಾರಕರಾದ ಬಿ.ಕೆ. ಕಮಲರವರು ಆರೋಗ್ಯ ಹೇಗೆ ಕಾಪಾಡಬೇಕು. ಹುಡುಗ-ಹುಡುಗಿಯರು ಪ್ರೌಢಾವಸ್ಥೆಯಲ್ಲಿನ ಜೀವನಪದ್ಧತಿ ಹೇಗಿರಬೇಕು ಮತ್ತು ದುಶ್ಚಟದಿಂದ ದೂರವಿಬೇಕು ಮತ್ತು ಕಾಳಜಿಯಿಂದಿರಬೇಕೆಂದು ಮಾಹಿತಿ ನೀಡಿದರು. ಸಂಪನ್ಮೂಲ ವೈಕ್ತಿಯಾಗಿ ಆಗಮಿಸಿದ ನಾರಾಯಣ ಕಿಲಂಗೋಡಿ ಮಕ್ಕಳನ್ನು ಉದ್ದೇಶಿಸಿ ಮಾತಾಡಿದರು. ಸುಳ್ಯ ಕ್ಷೇತ್ರ ಶಿಕ್ಷಣ ಇಲಾಖಾ ಸಂಯೋಜಕರಾದ ಲಿಂಗಪ್ಪ ಬೆಳ್ಳಾರೆಯವರು ನೋಡೆಲ್ ಅಧಿಕಾರಿಯಾಗಿ ಮಕ್ಕಳ ಹಕ್ಕುಗಳು ಮತ್ತು ವಿಶೆಷ ಸಭೆಯ ಮಹತ್ವವನ್ನು ವಿವರಿಸಿದರು.


ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಅಲೆಂಗಾರ, ಸದಸ್ಯರಾದ ಸುಧಾರಾಣಿ, ಶಾಲಿನಿ, ಗೀತಾ ಪೂದೆ, ಕುಸುಮಾವತಿ ನಾರಾಯಣ ಗೌಡ, ಯಶೋಧ ಇದುಂಗುಳಿ ವೇದಿಕೆಯಲ್ಲಿದ್ದರು. ಪಂ. ವ್ಯಾಪ್ತಿಯ ಅಂಗನವಾಡಿ ಕಾರ್‍ಯಕರ್ತೆಯರು, ಪ್ರೌಢಶಾಲಾ,ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು , ಆರೋಗ್ಯ ಕಾರ್‍ಯಕರ್ತೆಯರು, ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೀತಾರಾಮ ಎಸ್. ಸ್ವಾಗತಿಸಿ ಪ್ರಸ್ತಾವನೆಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.