ನಾಲ್ಕೂರು ಕಾಮಾಗಾರಿಗಳಿಗೆ ಚಾಲನೆ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯ ನಾಲ್ಕೂರು ಗ್ರಾಮದ ಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನ. 28 ರಂದು ನಡೆಯಿತು. ಶಾಸಕ ಎಸ್ ಅಂಗಾರ ಅವರು ಕಾಮಗಾರಿ ಗಳಿಗೆ ಚಾಲನೆ ನೀಡಿದರು.

ಗುತ್ತಿಗಾರು ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ, ತಾ.ಪಂ ಸದಸ್ಯೆ ಯಶೋದಾ ಬಾಳೆಗುಡ್ಡೆ, ಗುತ್ತಿಗಾರು ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ, ಕಿಶೋರಿ, ವಿಜಯ್ ಕುಮಾರ್ ಚಾರ್ಮತ, ಅಮ್ಮಣ್ಣಿ ಮಾಜಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ, ಗುತ್ತಿಗಾರು ಸೊಸೈಟಿ ಅಧ್ಯಕ್ಷ ಮುಳಿಯ ಕೇಶವ ಭಟ್, ಎ.ಪಿ.ಎಂ.ಸಿ ಸದಸ್ಯ ಬಾಲಕೃಷ್ಣ ಉಜಿರಡ್ಕ, ವಿಮಾ ಪ್ರತಿನಿಧಿ ಸ್ವಾತಿ ಮಲ್ಲಾರ, ಉದ್ಯಮಿ ಉಲ್ಲಾಸ್ ಮಲ್ಲಾರ, ಸುಬ್ರಹ್ಮಣ್ಯ ಠಾಣಾಧಿಕಾರಿ ಗೋಪಾಲ್, ಮೆಸ್ಕಾಂ ಶಾಖಾಧಿಕಾರಿ ಭೋರಯ್ಯ, ಉದ್ಯಮಿ ಮಹಮ್ಮದ್ ಯೂನಸ್, ರಾಧಾಕೃಷ್ಣ ಹಲ್ಗುಜಿ, ಉಪಸ್ಥಿತರಿದ್ದರು. ಕೇಶರಾಜ ಹೊಸೋಳಿಕೆ ಸ್ವಾಗತಿಸಿ, ಚಂದ್ರಶೇಖರ ಬಾಳುಗೋಡು ಪ್ರಸ್ತಾವನೆ ಮಾಡಿದರು. 

ನವೀನ್ ಬಾಳುಗೋಡು ವಂದಿಸಿದರು. ಪ್ರಭಾಕರ ಪಡ್ರೆ ಕಾರ್ಯಕ್ರಮ ನಿರೂಪಿಸಿದರು. ಅಂಜೇರಿಯ ವಿದ್ಯುತ್ ಪರಿವರ್ತಕ, ಕಾರ್ಜ ಎಂಬಲ್ಲಿ ಕಿಂಡಿ ಅಣೆಕಟ್ಟು ಮತ್ತು ಸೇತುವೆ, ನಡುಗಲ್ಲಿನಲ್ಲಿ ಸೊಲಾರ್ ಲೈಟ್ ಮತ್ತು ಸಿ.ಸಿ ಕೆಮಾರಾ ಉದ್ಘಾಟಿಸಲಾಗಿದೆ. ನಡುಗಲ್ಲಿನಲ್ಲು ಹೊಸ ಬಸ್ ನಿಲ್ದಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.